
ಚಿತ್ರ ವರದಿ: ಉಮೇಶ್ ಕೆ ಅಂಚನ್
ಮುಂಬಯಿ. ಫೆ.5. ಕಳೆದ ಹದಿನಾಲ್ಕು ವರ್ಷಗಳಿಂದ ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಗಣೇಶ್ ಪುರಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ನಿತ್ಯಾನಂದ ಸೇವಾ ಸಂಸ್ಥೆಯು 15 ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಪಾದಯಾತ್ರೆಯನ್ನು ಶನಿವಾರ ಫೆಬ್ರುವರಿ 3ರಂದು ಹಮ್ಮಿಕೊಂಡಿತ್ತು. ಅಂದು ಸಾಯಂಕಾಲ 6 ಗಂಟೆಯಿಂದ ಮೀರಾಭಾಯಂದರ್ ರಸ್ತೆಯಲ್ಲಿರುವ ಶ್ರೀ ಗಣೇಶ್ ಜೈ ಅಂಬಾ ಮಾತಾ ಮಂದಿರದಿಂದ(ಶುಭಂ ಹೋಟೇಲ್ ಸಮೀಪ) ಧಾರ್ಮಿಕ ವಿಧಿವಿಧಾನ ,ಭಜನೆ ಹಾಗೂ ಮಂಗಳಾರತಿ ನಡೆದು 8.30ಕ್ಕೆ ಶ್ರೀ ಕ್ಷೇತ್ರ ಗಣೇಶ್ ಪುರಿಗೆ ಪಾದಯಾತ್ರೆ ಹೊರಟು ಬೆಳಗ್ಗಿನ ಪೂಜೆ ಹಾಗೂ ಮಹಾ ಆರತಿಗೆ ತಲುಪಿತು. ಪ್ರಸ್ತುತ ವರ್ಷದಲ್ಲಿ ಸುಮಾರು 250 ಮಂದಿ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಶಿವರಾಮ್ ಶೆಟ್ಟಿ ಡೆಲ್ಟಾ ವೈನ್ಸ್ , ಬಂಟ್ಸ್ ಫೋರಮ್ ಮೀರಾಭಾಯಂದರಿನ ಅದ್ಯಕ್ಷ ಉದಯ ಎಮ್.ಶೆಟ್ಟಿ ಮಲಾರ್ ಬೀಡು, ಉಪಾಧ್ಯಕ್ಷ ದಿವಾಕರ್ ಶೆಟ್ಟಿ ಶಿರ್ಲಾಲ್, ಸುಂದರ್ ಶೆಟ್ಟಿ ಕುಬೇರ ಹೋಟೇಲ್ ಭಾಯಂದರ್ ಪಶ್ಚಿಮ,ವಸಾಯಿ ಸಾಯಿ ರತ್ನಾ ಹೋಟೇಲಿನ ಮಧುಕರ್ ಶೆಟ್ಟಿ, ಜಯಪ್ರಕಾಶ್ ಆರ್.ಭಂಡಾರಿ ಶ್ರೀನಿಧಿ ಹೋಟೆಲ್ ಭಾಯಂದರ್ ಪಶ್ಚಿಮ, ಬಂಟರ ಸಂಘದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್, ಬಂಟರ ಸಂಘದ ಮೀರಾ ಭಾಯಂದರ್ ಪ್ರದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ, ವೈ.ಟಿ.ಶೆಟ್ಟಿ ಹೆಜಮಾಡಿ , ರಮೇಶ್ ಅಮೀನ್ ಮೀರಾರೋಡ್ , ಸುಭಾಶ್ ಅಮೀನ್ ದಹಿಸರ್, ದಿನೇಶ್ ಅಮೀನ್ ದಹಿಸರ್, ಸುಭಾಶ್ ಶೆಟ್ಟಿ ಭಾಯಂದರ್, ಡಾ.ರವಿರಾಜ್ ಸುವರ್ಣ, ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಶನಿನ ಮಾಜಿ ಅಧ್ಯಕ್ಷ ಮಧುಕರ್ ಕೆ.ಶೆಟ್ಟಿ, ಬಂಟ್ಸ್ ಫೋರಮ್ ಮೀರಾಭಾಯಂದರಿನ ಮಾಜಿ ಅಧ್ಯಕ್ಷ ಇನ್ನ ಚಂದ್ರಹಾಸ್ ಕೆ.ಶೆಟ್ಟಿ, ಮಾಜಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಆರ್.ಶೆಟ್ಟಿ, ಸುರೇಶ್ ಶೆಟ್ಟಿ ಹೋಟೆಲ್ ಚಿರಂಜೀವಿ , ಸತೀಶ್ ಶೆಟ್ಟಿ ಸರ್ವೋದಯ ಬೋರಿಂಗ್, ಅನಿಲ್ ಶೆಟ್ಟಿ ಎಲ್ಲೂರು ಒಡಿಪರಗುತ್ತು ಮತ್ತು ಹರೀಶ್ ಶೆಟ್ಟಿ ಕಾಪು-ಹೋಟೆಲ್ ಸಾಯಿ ಪ್ರೈಡ್, ವಸಂತ್ ಶೆಟ್ಟಿ ಮೀರಾ ದಹಾಣು ಬಂಟ್ಸ್,ಲೀಲಾ ಗಣೇಶ್ ಕಾರ್ಕಳ ,ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷ ಶ್ಯಾಮ್ ಅಮೀನ್, ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಹಾಗೂ ಪರಿಸರದ ಹೋಟೇಲು ಮಾಲಕರು, ಉದ್ಯಮಿಗಳು ಪಾದಯಾತ್ರೆಗೆ ಸಹಕರಿಸಿದ್ದರು. ವಿರಾರ್ ಸಿರ್ಸಾಡ್ ಫಾಟಾ ಶಿವಾನಿ ಹೋಟೇಲಿನ ಹರೀಶ್ ಭಂಡಾರಿ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದರು.
ಸಂಸ್ಥೆಯ ಸಂಚಾಲಕರಾದ ಕುಕ್ಕುಂದೂರು ಆನಂದ್ ಎನ್ ಶೆಟ್ಟಿ, ಅದ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ, ಗೌರವಾಧ್ಯಕ್ಷ ಮಹಾಬಲ ಸಮಾನಿ, ಉಪಾಧ್ಯಕ್ಷೆ ವಸಂತಿ ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ದೇರಳಕಟ್ಟೆ ,ಗೌ. ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ಅಮಾವಾಸ್ಯೆ ಬೈಲು, ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ , ಜೊತೆ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯದರ್ಶಿ ಗೀತಾ ಸಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಎಸ್.ಆರ್. ಶೆಟ್ಟಿ ,ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ, ಸಲಹೆಗಾರರಾದ ನಾರಾಯಣ ಶೆಟ್ಟಿ, ಚಾಮುಂಡೇಶ್ವರಿ ಸನ್ನಿಧಿ ಲಕ್ಷ್ಮಣ್ ಶೆಟ್ಟಿ, ಭಜನಾ ಕಮಿಟಿ ಕಾರ್ಯಾಧ್ಯಕ್ಷೆ ಲತಾ ಪುತ್ರನ್, ಸ್ಪೋರ್ಟ್ಸ್ ಕಮಿಟಿ ಕಾರ್ಯಾಧ್ಯಕ್ಷೆ ಶೈಲಜಾ ಎಸ್.ಶೆಟ್ಟಿ , ಪ್ರಸಾದ್ ಹೆಗ್ಡೆ, ವಿನಯ್ ಎನ್. ಶೆಟ್ಟಿ , ಸುಜಾತಾ ಶೆಟ್ಟಿ , ವಿಜಯಲಕ್ಷ್ಮೀ ಡಿ. ಶೆಟ್ಟಿ, ಶಿರ್ವ ಪ್ರವೀಣ್ ಶೆಟ್ಟಿ, ಗಣೇಶ್ ಅಂಚನ್, ನಾರಾಯಣ ಅಂಚನ್, ಪದ್ಮನಾಭ ಆರ್.ಶೆಟ್ಟಿ ಹಾಗೂ ಸದಸ್ಯರು ಪಾದಯಾತ್ರೆಯ ಯಶಸ್ಸಿಗೆ ಸಹಕರಿಸಿದ್ದರು.