April 2, 2025
ಸುದ್ದಿ

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ * ಭಕ್ತವೃಂದದವರಿಂದ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನ ಸಂಪನ್ನ.

ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್

    ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯಲ್ಲಿನ ತುಳು ಕನ್ನಡಿಗರ ಶೃದ್ದಾಕೇಂದ್ರವೆನಿಸಿದ ಬೊಯಿಸರ್ ನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿನ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನದ ಸಂಪನ್ನ ಪೂಜೆಯು ಇದೇ   ಸೋಮವಾರ ತಾ.05 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

    ಪಕ್ಕದ  ಶ್ರೀ ರಾಮ ಮಂದಿರದಲ್ಲಿ ದೀಪಪ್ರಜ್ವಲನೆಯ  ಮೂಲಕ ಕಾರ್ಯಕ್ರಮ ಆರಂಭಗೊಂಡು ನಿತ್ಯಾನಂದ ಮಂದಿರದ ಆವರಣದಲ್ಲಿ ಜರಗಿದ ಕಲಶ ಪೂಜೆ ,   ದೀಪಾರಾಧನೆ , ಷೋಡಶ ಪೂಜೆ  ಹಾಗೂ ದುರ್ಗಾ ಅಷ್ಟೋತ್ತರ ನಾಮಾರ್ಚನೆ ಹಾಗೂ ಸಂಪನ್ನ ಜಪವನ್ನು   ಜಾತಿಭಾಷಾ ಭೇದವಿಲ್ಲದೆಯೇ ಭಾಗವಹಿಸಿದ ಭಕ್ತಾಭಿಮಾನಿಗಳು   ನೆರವೇರಿಸಿದರು.

ಶ್ರೀ ಬಾಬಾ ನಿತ್ಯಾನಂದರ ಆರತಿಯ ಬಳಿಕ ಪ್ರಸಾದರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.

     ಪಕ್ಕದ  ಮಹಾದೇವ ಮಂದಿರದಲ್ಲಿ  ಜರಗಿದ ಸೀಯಾಳ ಹಾಗೂ ಪಂಚಾಮೃತದ   ರುದ್ರಾಭಿಷೇಕದ ಬಳಿಕ   ಕಳಶ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.  ಕಾರ್ಯಕ್ರಮದಲ್ಲಿ ಸ್ಥಳೀಯ ಮರಾ ಠಿ ಭಾಷಿಕರೂ ಸೇರಿದಂತೆ ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್

    Mob : 8483980035

Related posts

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ಲಕ್ಷ ಎಸ್ ಶೆಟ್ಟಿಗೆ  85.17 ಅಂಕ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ 79 ನೇ ವಾರ್ಷಿಕ ಮಹಾ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ:

Chandrahas

ಮಾತೃಭೂಮಿ  ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ. ಯಿಂದ ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಿಗೆ ಅಭಿನಂದನೆ.

Mumbai News Desk

ಕೋಡಿಕಲ್ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್ ಆರೋಗ್ಯ ತಪಾಸಣಾ ರಕ್ತದಾನ ಶಿಬಿರ 

Mumbai News Desk

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು”

Mumbai News Desk