September 6, 2026
Mumbai News Kannada
ಸುದ್ದಿ

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ * ಭಕ್ತವೃಂದದವರಿಂದ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನ ಸಂಪನ್ನ.





ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್

    ವರ್ಷದುದ್ದಕ್ಕೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲೆಯಲ್ಲಿನ ತುಳು ಕನ್ನಡಿಗರ ಶೃದ್ದಾಕೇಂದ್ರವೆನಿಸಿದ ಬೊಯಿಸರ್ ನ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿನ ಐದನೆಯ ವರ್ಷದ ಶ್ರೀ ದೇವೀ ಜಪಪಾರಾಯಣ ಅನುಷ್ಟಾನದ ಸಂಪನ್ನ ಪೂಜೆಯು ಇದೇ   ಸೋಮವಾರ ತಾ.05 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

    ಪಕ್ಕದ  ಶ್ರೀ ರಾಮ ಮಂದಿರದಲ್ಲಿ ದೀಪಪ್ರಜ್ವಲನೆಯ  ಮೂಲಕ ಕಾರ್ಯಕ್ರಮ ಆರಂಭಗೊಂಡು ನಿತ್ಯಾನಂದ ಮಂದಿರದ ಆವರಣದಲ್ಲಿ ಜರಗಿದ ಕಲಶ ಪೂಜೆ ,   ದೀಪಾರಾಧನೆ , ಷೋಡಶ ಪೂಜೆ  ಹಾಗೂ ದುರ್ಗಾ ಅಷ್ಟೋತ್ತರ ನಾಮಾರ್ಚನೆ ಹಾಗೂ ಸಂಪನ್ನ ಜಪವನ್ನು   ಜಾತಿಭಾಷಾ ಭೇದವಿಲ್ಲದೆಯೇ ಭಾಗವಹಿಸಿದ ಭಕ್ತಾಭಿಮಾನಿಗಳು   ನೆರವೇರಿಸಿದರು.

ಶ್ರೀ ಬಾಬಾ ನಿತ್ಯಾನಂದರ ಆರತಿಯ ಬಳಿಕ ಪ್ರಸಾದರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.

     ಪಕ್ಕದ  ಮಹಾದೇವ ಮಂದಿರದಲ್ಲಿ  ಜರಗಿದ ಸೀಯಾಳ ಹಾಗೂ ಪಂಚಾಮೃತದ   ರುದ್ರಾಭಿಷೇಕದ ಬಳಿಕ   ಕಳಶ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.  ಕಾರ್ಯಕ್ರಮದಲ್ಲಿ ಸ್ಥಳೀಯ ಮರಾ ಠಿ ಭಾಷಿಕರೂ ಸೇರಿದಂತೆ ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್

    Mob : 8483980035



Related posts

ಥಾಣೆ ನೇತ್ರಾವತಿ ಎಸ್.ಅಮೀನ್ ನಿಧನ.

Mumbai News Desk

ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಗೆ ” ಜಾನಪದ ರತ್ನ – 2026″ ಪ್ರಶಸ್ತಿ

Mumbai News Desk

ಜೆ. ಬಿ. ನಗರ : ಸುನಂದಾ ಕೇಶವ ಶ್ರೀಯಾನ್ ನಿಧನ

Mumbai News Desk

ಆಂಧ್ರಪ್ರದೇಶದ ಪಟಾಕಿ ಘಟಕದಲ್ಲಿ ಭಾರಿ ಸ್ಫೋಟ, 18 ಮಂದಿ ಸಾವು

Mumbai News Desk

ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ಶ್ರೀ ಗೆ ನುಡಿ ನಮನ,

Mumbai News Desk

ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ : ಹೊಸ ರಥ ನಿರ್ಮಾಣ, ಅಷ್ಟಮಂಗಳ ಪ್ರಶ್ನೆಗೆ ಶೀಘ್ರ ನಿರ್ಧಾರ

Mumbai News Desk