
ಸಯನ್ ಪರಿಸರದ ತುಳು-ಕನ್ನಡಿಗರ ಸಂಘಟನೆ ಕರ್ನಾಟಕ ಸಂಘ ಸಯನ್ ಇದರ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ಫೆಬ್ರವರಿ 10 ರಂದು, ಶನಿವಾರ ಸಂಜೆ 4 ಗಂಟೆಗೆ ಸಯನ್ ಪೂರ್ವದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನಡೆಯಲಿದೆ.
ಅಂದು ಸಂಜೆ 4 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, 5 ಗಂಟೆಗೆ ಭಜನೆ, ನಂತರ ಹಳದಿ ಕುಂಕುಮ, ಕಿರು ಸಭಾ ಕಾರ್ಯಕ್ರಮ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಖ್ಯಾತ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರ ಧರ್ಮಪತ್ನಿ ಗೀತಾ ಎಸ್ ಶೆಟ್ಟಿ, ಸಮಾಜ ಸೇವಕಿ, ಮುಂಬಯಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಜನಿ ಪೈ, ಡಾ. ಶ್ರುತಿ ದಿನೇಶ್ ಶೆಟ್ಟಿ (O. B. G. Y, IVF(SS) ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಸಂಘದ ಗೌರವ ಅಧ್ಯಕ್ಷ ಜಯರಾಮ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ,ಡಾ. ಪ್ರವೀಣ್ ಭಟ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ಸಂಘದ ಪದಾಧಿಕಾರಿಗಳು, ಸದಸ್ಯರು, ಪರಿಸರದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಡಾ. ಜಿ. ಪಿ. ಕುಸುಮ(ಗೌರವ ಕಾರ್ಯದರ್ಶಿ )ಅವರನ್ನು 8779660901 ಶ್ರೀಮತಿ ತೇಜಾಕ್ಷಿ (ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ )ಅವರನ್ನು 9930285766 ಮೂಲಕ ಸಂಪರ್ಕಿಸಬಹುದು.