.
ವಸಾಯಿ ಪಶ್ಚಿಮ, ನವುಯುಗ್ (navyug)ನಗರದ ಧಾರ್ಮಿಕ ಸಂಸ್ಥೆ ಸಾರ್ವಜನಿಕ ಶ್ರೀ ಶನಿಶ್ವರ ಸೇವಾ ಸಮಿತಿಯು, ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಅ ನಿಮ್ಮಿತ ನಡೆಯಲಿರುವ ಸರಣಿ ಕಾರ್ಯಕ್ರಮದ ಅಂಗವಾಗಿ ಫೆ.10ರಂದು ಶ್ರೀ ಶನಿ ಮಹಾಪೂಜೆಯನ್ನು ನವ್ ಯುಗ್ ನಗರದ ದಿವಾನಮಾನ್ ತಲಾವ್ ಬಳಿಯ ಮೈದಾನದಲ್ಲಿ ಆಯೋಜಿಸಿದೆ.
ಕಾರ್ಯಕ್ರಮದ ವಿವರ :
ಬೆಳಿಗ್ಗೆ 6 ರಿಂದ 7:30 ತನಕ ಗಣ ಹೋಮ
7:30 ರಿಂದ 8:30 ತನಕ ನಾಗಾಭಿಷೇಕ
8:30 ರಿಂದ 9ರ ತನಕ ಶ್ರೀ ಹನುಮಾನ್ ಪೂಜೆ
10 ರಿಂದ 12:30ರ ತನಕ ಶ್ರೀ ಸತ್ಯನಾರಾಯಣ ಮಹಾಪೂಜೆ.
12:30 ರಿಂದ 1 ರ ತನಕ ಶ್ರೀ ಶನಿ ದೇವರ ಕಲಶ ಪ್ರತಿಷ್ಠೆ
ಮಧ್ಯಾಹ್ನ 1ರಿಂದ 7.30ರ ತನಕ ಶ್ರೀ ಶನಿ ಗ್ರಂಥ ಪಾರಾಯಣ.
7:30 ರಿಂದ 8:30ರ ತನಕ ಭಜನೆ
8:30 ರಿಂದ ಮಂಗಳ ಹಾಗೂ ತೀರ್ಥ ಪ್ರಸಾದ ವಿತರಣೆ
ರಾತ್ರಿ 7:30 ರಿಂದ 11:30 ತನಕ ಸಾರ್ವಜನಿಕ ಅನ್ನ ಸಂತರ್ಪಣೆ.
ಶ್ರೀ ಶನಿ ಮಹಾಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶನಿದೇವರ ತೀರ್ಥ ಪ್ರಸಾದ ಸ್ವೀಕರಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು
ಸಮಿತಿಯ ಗೌರವ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ, ಅಧ್ಯಕ್ಷ ಉಮೇಶ್ ಎಚ್ ಕರ್ಕೇರ, ಉಪಾಧ್ಯಕ್ಷ ಜಯ ಜಿ ಅಮೀನ್,ಗೌರವ ಕಾರ್ಯದರ್ಶಿ ಪ್ರಭಾಕರ ಬಂಗೇರ, ಗೌರವ ಕೋಶಧಿಕಾರೀ ಉಮೇಶ್ ಎಂ ಕರ್ಕೇರ, ಜತೆ ಕಾರ್ಯದರ್ಶಿ ಕೆ ಪಿ ಶ್ಯಾಮ, ಜತೆ ಕೋಶಧಿಕಾರಿ ಶಂಕರ್ ಬಿಲ್ಲವ, ಅರ್ಚಕರಾದ ಶಶಿ ಕರ್ಕೇರ, ಆಡಳಿತ ಸಮಿತಿಯ ಸದಸ್ಯರು, ಸದಸ್ಯರು ಪ್ರಕಟಣೆ ಮೂಲಕ ಕೇಳಿಕೊಂಡಿದ್ದಾರೆ.
