
ಮುಂಬಯಿ : ಮುಲುಂಡ್ ಪೂರ್ವ ನಿವಾಸಿ ದಿವಿಜ ಚಂದ್ರಶೇಖರ್ 66 ಇವರು ಫೆ. 10 ರಂದು ಮುಂಜಾನೆ ಹೃದಯಘಾತದಿಂದಾಗಿ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ತೀಯಾ ಸಮಾಜ ಮುಂಬೈಯ ಮಾಜಿ ಅಧ್ಯಕ್ಷ , ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ್ ಆರ್. ಬೆಲ್ಚಡ,, ಪುತ್ರ, ಸೊಸೆ ಹಾಗೂ ಅಪಾರ ಸಂಬಂಧಿಕರನ್ನು ಅಗಲಿದ್ದಾರೆ.
ಘಾಟ್ ಕೋಪರಿನ ಸೋಮಯ್ಯ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾಗಿದ್ದ ಇವರು ತೀಯಾ ಸಮಾಜ ಮುಂಬೈಯಲ್ಲಿ ಕ್ರಿಯಾಶೀಲರಾಗಿದ್ದರು.
ಇವರ ನಿಧನಕ್ಕೆ ತೀಯಾ ಸಮಾಜದ ಗಣ್ಯರಾದ ರೋಹಿದಾಸ್ ಬಂಗೇರ, ಅಧ್ಯಕ್ಷ ಕೃಷ್ಣ ಎನ್ ಉಚ್ಚಿಲ್ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ