30.5 C
Mumbai
June 8, 2026
Mumbai News Kannada
ಸುದ್ದಿ

ಕಲಾಪೋಷಕ .ಉದ್ಯಮಿ ಕೆ.ಕೆ. ಶೆಟ್ಟಿ ಅಹ್ಮದ್ ನಗರರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ.





ಅಹ್ಮದ್ ನಗರದ ಉದ್ಯಮಿ, ಕಲಾಪೋಷಕ ಮತ್ತು ಧಾರ್ಮಿಕ, ಸಾಮಾಜಿಕ ಸೇವಾಕರ್ತ ಕೆ.ಕೆ. ಶೆಟ್ಟಿ ಅವರು ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ಸಂಸ್ಥೆಯು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಕೆ.ಕೆ. ಶೆಟ್ಟರಿಗೆ ಈ ಪ್ರಶಸ್ತಿಯನ್ನು ಘೋಷಿಸಿದೆ.

ಕೆ  ಕೆ ಶೆಟ್ಟಿ ಯವರು ಮೂಲತಃ ಕುಂಬಳೆಯವರಾದ ಕುತ್ತಿಕ್ಕಾರು ಕಿಂಜ್ಞಣ್ಣ ಶೆಟ್ಟಿ ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಪೂರೈಸಿ 1980 ರಲ್ಲಿ ಅಹ್ಮದ್ ನಗರ ಸೇರಿದರು. ಹೋಟೆಲು ಉದ್ಯಮಕ್ಕೆ ತೊಡಗಿದ ಅವರು ಪ್ರಸ್ತುತ ತಮ್ಮ ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್  ಮೂಲಕ ಉದ್ಯಮ ಕ್ಷೇತ್ರದಲ್ಲಿ ತಮ್ಮದ ಜನಪ್ರಿಯತೆಯನ್ನು ಗಳಿಸಿದ್ದಾರೆ. ಸಾವಿರಾರು ಕುಟುಂಬಗಳಿಗೆ ಆಶ್ರಯವಾಗಿದ್ದಾರೆ

. 1990 ರಲ್ಲಿ ಅಹ್ಮದ್ ನಗರದಲ್ಲಿ ಸುಂದರ ಅಯ್ಯಪ್ಪ ಮಂದಿರ ಕಟ್ಟಿಸಿ ಅದರ ಸ್ಥಾಪಕ ಅಧ್ಯಕ್ಷರಾದರು. 2020 ರಲ್ಲಿ ತಮ್ಮ ಹುಟ್ಟೂರು ಕುಂಬಳೆಯ ಮುಂಡಪಳ್ಳದಲ್ಲಿ ನೂತನ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ನಿರ್ಮಿಸಿ ಅದರ ಆಡಳಿತ ಮೊಕ್ತೇಸರರಾಗಿದ್ದಾರೆ. ಅಡೂರು, ಮಧೂರು, ಕನ್ಯಾನ ಕ್ಷೇತ್ರಗಳ ಜೀರ್ಣೋದ್ದಾರ ಕಾರ್ಯದಲ್ಲಿ ಪ್ರಮುಖ ಕೆಲಸಗಳನ್ನು ತಾವೇ ಮಾಡಿರುತ್ತಾರೆ. ಕಾಸರಗೋಡು ಸುತ್ತಮುತ್ತಲಿನ   ದೇಗುಲ, ಮಠ, ಮಂದಿರ ಮತ್ತು ವಿದ್ಯಾಸಂಸ್ಥೆಗಳ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಉದಾರ ಧನ ಸಹಾಯ ನೀಡುತ್ತಿದ್ದಾರೆ.

ಯಕ್ಷಾಂಗಣ ಮಂಗಳೂರು’ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಗೌರವ ಉಪಾಧ್ಯಕ್ಷರಾಗಿರುವ ಕೆ.ಕೆ.ಶೆಟ್ಟಿ ಅವರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ ಇತ್ತೀಚೆಗೆ ಕಾಸರಗೋಡಿನ ಕಲಾವಿದರೊಬ್ಬರ ಗೃಹ ನಿರ್ಮಾಣಕ್ಕೆ ಆರ್ಥಿಕ ಕೊಡುಗೆ ನೀಡಿದ್ದಾರೆ. ಅಹ್ಮದ್ ನಗರದಲ್ಲಿ ಕನ್ನಡ ಸಂಘ ಮತ್ತು ಹೊರನಾಡ ಕನ್ನಡಿಗರ ಸಂಘಗಳ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. 

  ಭಾರತ ಭಾರತಿ ಸಂಸ್ಥೆಯಲ್ಲಿ ಅವರು ಸಕ್ರೀಯರು. ಪೂನಾ ಬಂಟರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿರುವುದಲ್ಲದೇ ಕಾಸರಗೋಡಿನಲ್ಲಿ ನೂತನ ಬಂಟರ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಂಟ್ವಾಳ ಸಮೀಪ ವಿಶಾಲ ಕೃಷಿ ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿಪಡಿಸುತ್ತಿರುವ ಪ್ರಗತಿಪರ ಕೃಷಿಕರೂ ಆಗಿದ್ದಾರೆ.

ಕೆ ಕೆ .ಶೆಟ್ಟಿ ಅವರ ಪತ್ನಿ ಮೂಡುಬೆಳ್ಳೆ ಮೇಲ್ಮನೆ ವಿನಯ  ಕೆ ಶೆಟ್ಟಿ. ಮತ್ತು ಇಬ್ಬರು ಗಂಡು ಮಕ್ಕಳು. ಹಾಗೂ 

ಬಂಟರ ಸಂಘದ ಜೋಗೇಶ್ವರಿ -ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ವಿನೋದಾ ಡಿ ಶೆಟ್ಟಿಯವರು ಸಹೋದರಿಯ ಪತಿ.

   ಆರ್ಯಭಟ ಪ್ರಶಸ್ತಿ ಪ್ರದಾನ   ಜೂನ್ 23 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ   2024 ನೇ ಸಾಲಿನ ಆರ್ಯಭಟ ಪ್ರಶಸ್ತಿ ಪ್ರದಾನ ನಡೆಯಲಿದೆ ಈ ಸಂದರ್ಭದಲ್ಲಿ ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ಸ್ಥಾಪಕಾಧ್ಯಕ್ಷ ಡಾ. ಎಚ್.ಎಲ್.ಎನ್.ರಾವ್ ಮತ್ತಿತರ ಗಣ್ಯರ ಪಾಲ್ಗೊಳ್ಳಲಿದ್ದಾರೆ.

        ದಿನೇಶ್ ಕುಲಾಲ್ 



Related posts

ಮುಲ್ಕಿ ಬಪ್ಪನಾಡು ಕ್ಷೇತ್ರದ ಅನುವಂಶೀಯ ಮೊಕ್ತೇಸರ ಎಸ್. ಎಸ್. ಮನೋಹರ ಶೆಟ್ಟಿ ನಿಧನ.

Mumbai News Desk

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ, ಬಿ ಜೆ ಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

Mumbai News Desk

ಭಾಂಡೂಪ್ : ಚಿಕ್ಕು ಅಣ್ಣಪ್ಪ ಪುತ್ರನ್ ನಿಧನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ವೈದ್ಯಕೀಯ, ಮನೆ ನಿರ್ಮಾಣಕ್ಕೆ ಸಹಾಯ ಧನದ ಹಸ್ತಾoತರ.

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. 16 ನೇ ವರ್ಷದ ವರಮಹಾಲಕ್ಷ್ಮಿ ಪೂಜಾಯ ಆಮಂತ್ರಣ ಪತ್ರಿಕೆ ಬಿಡುಗಡೆ,

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ, ಬ್ಯಾಂಕೊ ಬ್ಲೂ ರಿಬ್ಬನ್”- 2022- 2023 ಪ್ರಶಸ್ತಿ,

Mumbai News Desk