
ಮುಂಬಯಿ ಪೆ 11. ಮುಂಬೈಯ ಹಿರಿಯ ಧಾರ್ಮಿಕ ಸಂಘಟನೆಯಾದ ಶ್ರೀ ಮದ್ಭಾರತ ಮಂಡಳಿಯ 146 ನೇ ವಾರ್ಷಿಕ ಮಂಗಳೋತ್ಸವ ಮತ್ತು ನಾರಾಯಣ ಕವಿ ವಿರಚಿತ ವಿರಚಿತ ‘ ಉತ್ತರ ರಾಮ ಕಥಾ ‘ ಪುಣ್ಯ ಗ್ರಂಥದ ಸಮಾಪ್ತಿ ಮಂಗಳೋತ್ಸವ ಶನಿವಾರ ಫೆಬ್ರವರಿ 17 ರಂದು ಸಾಯಂಕಾಲ 5 ಗಂಟೆಗೆ ಪ್ರಾರಂಭವಾಗಿ ಮರುದಿನ ಫೆಬ್ರವರಿ 18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪರಂಪರೆಯಂತೆ ಸಂಭ್ರಮದಲ್ಲಿ ನಡೆಯಲಿದೆ.2023ರ ಜೂನ್ 10 ರಂದು ಪರಂಪರೆಯಂತೆ ಗ್ರಂಥ ಪಾರಾಯಣ ಪ್ರಾರಂಭವಾಗಿದ್ದು, ಪಾರಾಯಣದ ದೀಕ್ಷೆಯಲ್ಲಿ
ಗ್ರಂಥ ವಾಚಕರಾಗಿ ಶ್ರೀಮತಿ ಶೋಭಾ ವಿ. ಬಂಗೇರ, ಅರ್ಥ ವಿವರಣೆಗೆ ಶ್ರೀಮತಿ ಪುಷ್ಪ ಜಿ. ಬಂಗೇರ, ಅರ್ಚಕ ಭಟ್ಟರಾಗಿ ಅಳಕೆ ಪುರಂದರ ಅಮೀನ್, ಚಾಮರ ಸೇವೆಗೆ ಎಚ್. ಮಹಾಬಲ್ ಮತ್ತು ಮೋಹನ್ ದಾಸ ಓಡಿ ಮೆಂಡನ್, ಜನಮೇಜರಾಯರಾಗಿ ಹರಿಶ್ಚಂದ್ರ ಸಿ. ಕಾಂಚನ್, ಪೂಜಾ ಮೇಲ್ವಿಚಾರಕರಾಗಿ ವಾಸು ಎಸ್. ಉಪ್ಪುರು ಇವರು ಪಾಲ್ಗೊಂಡಿರುವರು.
ಶನಿವಾರಫೆಬ್ರವರಿ 17ರಂದು ಶ್ರೀ ಲಕ್ಷ್ಮಿನಾರಾಯಣ ದೇವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರ್ತಿ ಅಲಂಕಾರಕ್ಕೆ ವಿವಿಧ ಸಂಘಟನೆಗಳು ಅರ್ಪಿಸಿದ್ದ ಬಂಗಾರದ ಸರಗಳನ್ನು ಪ್ರತಿನಿಧಿಗಳಿಂದ ದೇವರ ಮೂರ್ತಿಗೆ ಹಾಕಿಸುವುದು. ಗ್ರಂಥ ಪಾರಾಯಣ, ಭಜನೆ ಪ್ರಾರಂಭ. ಮರುದಿನ ಬೆಳಿಗ್ಗೆ 8 ಗಂಟೆಗೆ ಉತ್ತರ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ಜರಗಲಿದೆ.
ಇದೇ ಸಂದರ್ಭದಲ್ಲಿ ಗ್ರಂಥ ಪಾರಾಯಣದಲ್ಲಿ ಖ್ಯಾತಿ ಪಡೆದಿರುವ ಶ್ರೀಮತಿ ಪುಷ್ಪ ಗೋಪಾಲ ಬಂಗೇರ ಅವರನ್ನು ಸನ್ಮಾನ ಮಾಡಲಾಗುವುದು. ಬಳಿಕ ಪ್ರಸನ್ನ ಪೂಜೆ,ಮಹಾ ಮಂಗಳಾರತಿ,ಸಾರ್ವಜನಿಕ ಪ್ರಾರ್ಥನೆ. ಹರಕೆ , ಮಹಾ ಅನ್ನಸಂತರ್ಪಣೆ ಜರಗಲಿದೆ.
ಶ್ರೀ ಮದ್ಭಾರತ ಮಂಡಳಿಯ , ಶ್ರೀ ಲಕ್ಷ್ಮಿ ನಾರಾಯಣ ಮಂದಿರ, ಎಂ ವಿ ಎಂ ಶೈಕ್ಷಣಿಕ ಸಂಕೀರ್ಣ ಮಾರ್ಗ, ವೀರಾ ದೇಸಾಯಿ ರಸ್ತೆ, ಅಂಧೇರಿ ಪಶ್ಚಿಮ ಇಲ್ಲಿ ನಡೆಯುವ ಈ ಉತ್ಸವದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಲಕ್ಷ್ಮಿ ನಾರಾಯಣ ದೇವರ ಹಾಗೂ ಪರಿವಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಲೋಕ ನಾಥ್ ಕಾಂಚನ್ ಅವರು ವಿನಂತಿಸಿದ್ದಾರೆ.