30.9 C
Mumbai
June 8, 2026
Mumbai News Kannada
ಪ್ರಕಟಣೆ

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ





   

   

ಮುಂಬಯಿ ಪೆ  11. ಮುಂಬೈಯ  ಹಿರಿಯ ಧಾರ್ಮಿಕ ಸಂಘಟನೆಯಾದ  ಶ್ರೀ ಮದ್ಭಾರತ  ಮಂಡಳಿಯ  146 ನೇ ವಾರ್ಷಿಕ  ಮಂಗಳೋತ್ಸವ ಮತ್ತು ನಾರಾಯಣ ಕವಿ ವಿರಚಿತ ವಿರಚಿತ ‘ ಉತ್ತರ ರಾಮ ಕಥಾ ‘ ಪುಣ್ಯ ಗ್ರಂಥದ  ಸಮಾಪ್ತಿ ಮಂಗಳೋತ್ಸವ ಶನಿವಾರ ಫೆಬ್ರವರಿ 17 ರಂದು ಸಾಯಂಕಾಲ 5 ಗಂಟೆಗೆ ಪ್ರಾರಂಭವಾಗಿ ಮರುದಿನ ಫೆಬ್ರವರಿ 18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪರಂಪರೆಯಂತೆ ಸಂಭ್ರಮದಲ್ಲಿ ನಡೆಯಲಿದೆ.2023ರ ಜೂನ್ 10 ರಂದು ಪರಂಪರೆಯಂತೆ ಗ್ರಂಥ ಪಾರಾಯಣ ಪ್ರಾರಂಭವಾಗಿದ್ದು, ಪಾರಾಯಣದ ದೀಕ್ಷೆಯಲ್ಲಿ

ಗ್ರಂಥ ವಾಚಕರಾಗಿ ಶ್ರೀಮತಿ ಶೋಭಾ ವಿ. ಬಂಗೇರ, ಅರ್ಥ ವಿವರಣೆಗೆ ಶ್ರೀಮತಿ ಪುಷ್ಪ ಜಿ. ಬಂಗೇರ, ಅರ್ಚಕ ಭಟ್ಟರಾಗಿ ಅಳಕೆ ಪುರಂದರ ಅಮೀನ್, ಚಾಮರ ಸೇವೆಗೆ ಎಚ್. ಮಹಾಬಲ್ ಮತ್ತು ಮೋಹನ್ ದಾಸ ಓಡಿ ಮೆಂಡನ್, ಜನಮೇಜರಾಯರಾಗಿ ಹರಿಶ್ಚಂದ್ರ ಸಿ. ಕಾಂಚನ್, ಪೂಜಾ ಮೇಲ್ವಿಚಾರಕರಾಗಿ ವಾಸು ಎಸ್. ಉಪ್ಪುರು ಇವರು ಪಾಲ್ಗೊಂಡಿರುವರು.

ಶನಿವಾರಫೆಬ್ರವರಿ 17ರಂದು ಶ್ರೀ ಲಕ್ಷ್ಮಿನಾರಾಯಣ ದೇವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರ್ತಿ ಅಲಂಕಾರಕ್ಕೆ ವಿವಿಧ ಸಂಘಟನೆಗಳು ಅರ್ಪಿಸಿದ್ದ ಬಂಗಾರದ  ಸರಗಳನ್ನು ಪ್ರತಿನಿಧಿಗಳಿಂದ  ದೇವರ ಮೂರ್ತಿಗೆ ಹಾಕಿಸುವುದು. ಗ್ರಂಥ ಪಾರಾಯಣ, ಭಜನೆ ಪ್ರಾರಂಭ. ಮರುದಿನ ಬೆಳಿಗ್ಗೆ 8 ಗಂಟೆಗೆ ಉತ್ತರ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ಜರಗಲಿದೆ.

ಇದೇ ಸಂದರ್ಭದಲ್ಲಿ ಗ್ರಂಥ ಪಾರಾಯಣದಲ್ಲಿ ಖ್ಯಾತಿ ಪಡೆದಿರುವ ಶ್ರೀಮತಿ ಪುಷ್ಪ ಗೋಪಾಲ ಬಂಗೇರ ಅವರನ್ನು ಸನ್ಮಾನ ಮಾಡಲಾಗುವುದು. ಬಳಿಕ  ಪ್ರಸನ್ನ ಪೂಜೆ,ಮಹಾ ಮಂಗಳಾರತಿ,ಸಾರ್ವಜನಿಕ ಪ್ರಾರ್ಥನೆ. ಹರಕೆ , ಮಹಾ ಅನ್ನಸಂತರ್ಪಣೆ ಜರಗಲಿದೆ.

ಶ್ರೀ ಮದ್ಭಾರತ ಮಂಡಳಿಯ  , ಶ್ರೀ ಲಕ್ಷ್ಮಿ ನಾರಾಯಣ ಮಂದಿರ, ಎಂ ವಿ ಎಂ ಶೈಕ್ಷಣಿಕ ಸಂಕೀರ್ಣ  ಮಾರ್ಗ, ವೀರಾ ದೇಸಾಯಿ ರಸ್ತೆ, ಅಂಧೇರಿ  ಪಶ್ಚಿಮ ಇಲ್ಲಿ ನಡೆಯುವ ಈ ಉತ್ಸವದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಲಕ್ಷ್ಮಿ ನಾರಾಯಣ ದೇವರ ಹಾಗೂ ಪರಿವಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಂಡಳಿಯ ಅಧ್ಯಕ್ಷ ಜಗನ್ನಾಥ ಪುತ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಲೋಕ ನಾಥ್ ಕಾಂಚನ್ ಅವರು ವಿನಂತಿಸಿದ್ದಾರೆ.



Related posts

ಮುಂಬಯಿ ವಿವಿ ಕನ್ನಡ ವಿಭಾಗ: ಮಾ. 20ರಂದು ಪ್ರಭಾಕರ ದೇವಾಡಿಗ ಆರೂರು ಅವರ ‘ಲಲಿತ ರಂಗ ಗುಣನಾಯಕ’ ಕೃತಿ ಲೋಕಾರ್ಪಣೆ

Mumbai News Desk

ಆ.16: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ವರಮಹಾಲಕ್ಷ್ಮೀ ಪೂಜೆ

Mumbai News Desk

ಇಂದು: ಗೊರೇಗಾವ್ ಪೂರ್ವದ ಜಯ ಲೀಲಾ ಸಭಾಗೃಹದಲ್ಲಿ* ನಾಗೇಶ್ ಎಂ ಕೋಟ್ಯಾನ್* ಶ್ರದ್ದಾಂಜಲಿ ಸಭೆ.

Mumbai News Desk

ನವೆಂಬರ್ 24. ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ : 36ನೇ ವಾರ್ಷಿಕ ಮಹಾಪೂಜೆ ಮತ್ತು ಭಜನಾ ಮಂಗಳೋತ್ಸವ

Mumbai News Desk

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ

Mumbai News Desk