
ಮುಂಬಯಿ ಪೆ 11.ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕವು .ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಎಸೋಸಿಯೇಶನ್ ಮುಂಬಯಿಯೊಂದಿಗೆ ವಿಲೀನಗೊಂಡು ಇದೀಗ ವಿಶ್ವದೆಲ್ಲೆಡೆ ಪಸರಿಸಿರುವ ಕಾಲೇಜಿನ ಹಳೆವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ಮೂಲಕ ತನ್ನ ಕಾಠ್ಯ ಚಟುವಟಿಕೆಗಳನ್ನು ವಿಸ್ತರಿಸಲು ಹೊಸ ಹೆಜ್ಜೆ ಇರಿಸಿದೆ. ಈ ಮೂಲಕ ಹಳೆ ವಿದ್ಯಾರ್ಥಿಗಳ ಬಹು ದಿನದ ಕನಸೊಂದು ನನಸಾಗಿದೆ.
ಗ್ಲೋಬಲ್ ಅಲ್ಯೂಮಿನಿ ಎಸೋಸಿಯೇಶನಿನ ವಿಶೇಷ ಮಹಾಸಭೆಯು ಇತ್ತೀಚೆಗೆ ದಿನಾಂಕ 03.02.2024 ರಂದು ಸಾಕಿನಾಕದ ಮೆಟ್ರೋ ಹೋಟೇಲಿನ ಸಭಾಂಗಣದಲ್ಲಿ ಜರಗಿ 2024-2026 ರ ವರ್ಷಾವಧಿಗೆ ನೂತನ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರ ಆಯ್ಕೆ ನಡೆಯಿತು.
ನೂತನ ಗೌರವ ಅಧ್ಯಕ್ಷರಾಗಿ ಆನಂದ ಶೆಟ್ಟಿ, ಅಧ್ಯಕ್ಷರಾಗಿ ವಾಸುದೇವ್ ಎಂ. ಸಾಲಿಯಾನ್ ಉಪಾಧ್ಯಕ್ಷರಾಗಿ ನ್ಯಾಯವಾದಿ ಶೇಖರ್ ಎಸ್. ಭಂಡಾರಿ, ಗೌ.ಪ್ರ. ಕಾಯದರ್ಶಿಯಾಗಿ ಭಾಸ್ಕರ್ ಬಿ. ಶೆಟ್ಟಿ, ಗೌ.ಪ್ರ. ಕೋಶಾಧಿಕಾರಿ CA ರೋಹಿತಾಕ್ಷ ದೇವಾಡಿಗ ಮತ್ತು ಸಮಿತಿ ಸದಸ್ಯರಾಗಿ CA ಶಂಕರ್ ಶೆಟ್ಟಿ, CA ಸೋಮನಾಥ ಕುಂದರ್, CA ಕಿಶೋರ್ ಕುಮಾರ್ ಸುವರ್ಣ, ಅಶೋಕ್ ದೇವಾಡಿಗ, ಪ್ರವೀಣ್ ಬಿ. ಶೆಟ್ಟಿ, ರಂಜನ್ ಶೆಟ್ಟಿ, ಲಾರೆನ್ಸ್ ಡಿ’ಸೋಜಾ, ಪ್ರಸಾದ್ ಭಂಡಾರಿ, ಲಕ್ಷ್ಮೀಶ್ ರಾವ್, ಸರಿತಾ ರಾವ್, ಸ್ವರ್ಣಜ್ಯೋತಿ ಆಯ್ಕೆಗೊಂಡಿದ್ದಾರೆ.
ವಾರ್ಷಿಕ ಸ್ನೇಹಮಿಲನವು ಇದೇ ಬರುವ ಮಾರ್ಚ್ 2 ಶನಿವಾರ ಸಾಯಂಕಾಲ ಗಂಟೆ 5.30 ಸಾಕಿನಾಕದಲ್ಲಿರುವ ಮುಂಬಯಿ ಮೆಟ್ರೋ ಹೋಟೇಲ್‌ನಲ್ಲಿ ಜರಗಲಿರುವುದು. ಈ ಸಂದರ್ಭದಲ್ಲಿ ಬಂಟರ ಸಂಘದ ನೂತನ ಅಧ್ಯಕ್ಷ, ವಿಜಯಾ ಕಾಲೇಜಿನ ಹಳೆ ವಿದ್ಯಾರ್ಥಿ ಪ್ರವೀಣ್ ಭೋಜ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಜಯಾ ಕಾಲೇಜಿನ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲೆ ಡಾ| ಶ್ರೀಮನಿ ಶೆಟ್ಟಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ವರ್ಷದ ಗುರುವಂದನೆಯನ್ನು ಕಾಲೇಜಿನ ನಿವೃತ್ತ ಪ್ರಾಚಾರ್ಯರುಗಳಾದ ಪ್ರೊ| ನಾಗರಾಜ ನಾಯಕ್ ಮತ್ತು ಪ್ರೊ|ಅನುಸೂಯ ಕರ್ಕೇರ ಸ್ವೀಕರಿಸಲಿದ್ದಾರೆ. ಹಳೆ ವಿದ್ಯಾರ್ಥಿಗಳಾದ ಐಕಳ ವಿಶ್ವನಾಥ ಶೆಟ್ಟಿ, ಮೋಹನದಾಸ್ ಹೆಜ್ಜಾಡಿ, ಶಶಿಕಾಂತ್ ಎಂ. ಕೋಟ್ಯಾನ್, ಶ್ರೀಮತಿ ವಾಗ್ರೇವಿ ಕಾಂಚನ್ ಇವರು ವಿಶೇಷ ಸಾಧಕ ಪುರಸ್ಕಾರವನ್ನು ಪಡೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿಗಳ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಗೌರವಿಸಲಾಗುವುದು ಎಂದು ವಿಜಯಾ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಗ್ಲೋಬಲ್ ಎಸೋಸಿಯೇಶನ್ ಮುಂಬಯಿ ಇದರ ಪತ್ರಿಕಾ ಪ್ರಕಟಣೆ ತಿಳಿಸಿದೆ.