24.7 C
Karnataka
April 3, 2025
ಮುಂಬಯಿ

ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಗ್ರಹಣ



ವರದಿ : ಈಶ್ವರ ಎಂ. ಐಲ್

ಮುಂಬಯಿ : ಮೀರಾ – ಭಾಯಂದರ್ ಪರಿಸರದಲ್ಲಿ ಸಾವಿರಾರು ಸಮಾಜ ಬಾಂಧವರಿದ್ದು ಅವರೆಲ್ಲರನ್ನು ಸಂಘದ ಸದಸ್ಯರನ್ನಾಗಿ ಮಾಡಬೇಕಾಗಿದೆ. ಬಂಟರ ಸಂಘ ದಲ್ಲಿ ಸಮಾಜ ಬಾಂಧವರಿಗಾಗಿ ಪ್ರಯೋಜನಕಾರಿ ಯೋಜನೆಗಳಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕು. ಸಂಘ ಸೀನಿಯರ್ ಸಿಟಿಜನ್ ವೆಲ್ಫೇರ್ ಕಮಿಟಿ ರಚಿಸಲು ಯೋಚಿಸುತ್ತಿದೆ. ಇದರಲ್ಲಿ 75 ವರ್ಷಕ್ಕೆ ಮಿಕ್ಕಿರುವ ನಮ್ಮವರನ್ನು ಸಂಪರ್ಕಿಸಿ ಅವರಿಗೆ ಸಾಂತ್ವನ ನೀಡಲಾಗುವುದು. ನಮ್ಮ ಸಂಘ ಮುಂದಿನ ಮೂರು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಸಮಾಜದಲ್ಲಿ ಬಡವರು ಎಂಬುದು ಇಲ್ಲದಂತಾಗಲಿ ಎಂದು ಬಂಟರ ಸಂಘ ಮುಂಬಯಿಯ  ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ನುಡಿದರು.

ಫೆ. 11ರಂದು ಸಂಜೆ ಹೋಟೆಲ್ ಸನ್ ಶೈನ್ ಇನ್, ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇ, ದಹಿಸರ್ ಚೆಕ್ ನಾಕಾದ ಸಮೀಪ, ಬಂಟರ ಸಂಘದ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಗ್ರಹಣ ಸಮಾರಂಭವು ನಡೆದಿದ್ದು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು ಬಂಟರ ಸಂಘ ಮುಂಬಯಿ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಕರಿಸುತ್ತಿದ್ದು ಅದನ್ನು ಬಡ್ಡಿ ರಹಿತ ನಂತರ ಅವರು ಹಿಂತಿರುಗಿಸುತ್ತಾರೆ.  ಸಂಘ ಶಿಕ್ಷಣಕ್ಕೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಯಾವತ್ತೂ ಹಿಂಜರಿಯುವುದಿಲ್ಲ. ಸಮಾಜದಲ್ಲಿ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಆನಂದವಾಗಿದೆ. ಇಂತಹ ತಂಡಗಳಿಂದ ಇದ್ದಲ್ಲಿ ಸಂಘ ಇನ್ನೂ ಎತ್ತರಕ್ಕೆ ಬೆಳೆಯುವಲ್ಲಿ ಸಂದೇಹವಿಲ್ಲ.  ಮನುಷ್ಯ ಕಲಿತ ವಿದ್ಯೆ ಕಡಿಮೆಯಾದರೂ ತೊಂದರೆ ಇಲ್ಲ ಆದರೆ ಸಂಸ್ಕಾರದಲ್ಲಿ ಎನೂ  ಕಡಿಮೆಯಾಗಬಾರದು.  ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಇವರ ನೇತ್ವತ್ವದಲ್ಲಿ ಉತ್ತಮವಾದ ತಂಡ ರಚನೆಯಾಗಿದ್ದು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಎಲ್ಲಾ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳಿಗೆ ಅಬಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ದೀಪ ಬೆಳಗಿಸಿ ಚಾಲನೆಯಿತ್ತರು. ನೂತನ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಉಪಸಮಿತಿಗಳ ಹೆಸರನ್ನು ಪ್ರಕಟಿಸಿ ಪುಷ್ಪ ಗುಚ್ಚ ನೀಡಿ ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡುತ್ತಾ ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ  ಅವರನ್ನು ಶಕ್ತಿವಂತ ಅಧ್ಯಕ್ಷರನ್ನಾಗಿ ಮಾಡೋಣ. ಮೂರು ವರ್ಷಗಳಲ್ಲಿ ಅವರು ಸಂಘದಲ್ಲಿ ಒಂದು ಇತಿಹಾಸ ನಿರ್ಮಿಸುವಂತಾಗಲಿ. ಇಲ್ಲಿ ಸೇರಿದ ಎಲ್ಲಾ ಬಂಟ ಬಾಂಧವರು ಸಮಾಜಕ್ಕೆ ತಮ್ಮ ಋಣವನ್ನು ತೀರಿಸಬೇಕು. ಸಮಾಜ ಸೇವೆಯಲ್ಲಿ ಎಲ್ಲರನು ಸಂತುಷ್ಟಗೊಳಿಸುವುದು ಅಸಾಧ್ಯ. ಆದರೆ ಯಾರ ಮಸಸ್ಸಿಗೂ ನೋವಾಗದ ರೀತಿಯಲ್ಲಿ ಸಮಾಜ ಸೇವೆ ಮಾಡೋಣ.  ಸಮಾಜಕ್ಕೆ ನಾವು ಒಳ್ಳೆಯ ಕೆಲಸವನ್ನು ಮಾಡಿ ತೋರಿಸೋಣ ಎನ್ನುತ್ತಾ ನೂತನ ಸಮಿತಿಗೆ ಶುಭ ಕೋರಿದರು

ಗೌರವ ಅತಿಥಿ ತುಳು ಸಂಘ ಬರೋಡದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಅವರು ಮಾತನಾಡುತ್ತಾ ನೂತನ ಸಮಿತಿ ಹಾಗೂ ಉಪಸಮಿತಿಗೆಳಿಗೆ

ಅಭಿನಂದನೆ ಹಾಗೂ ಶುಭಾಶಯ ಸಲ್ಲಿಸುತ್ತಾ  ಇಂದು ಅಧಿಕ ಸಂಸ್ಥೆಯಲ್ಲಿ ಜನ ಸೇರಿದ್ದು ನಮ್ಮ ಸಂಘಕ್ಕೆ ಶಕ್ತಿ ಎಷ್ಟು ಇದೆ ಎಂದು ತೋರಿಸುತ್ತದೆ.  ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡುವಾಗ ನನಗೆ ಇಲ್ಲಿಯೇ ಇರುಬೇಕಾದಷ್ಟು ಆನಂದವಾಗುತ್ತಿದೆ. ಮಹಿಳೆಯರು ಇದ್ದಲ್ಲಿ ಸಂಘಟನೆ ಗಟ್ಟಿ ಆಗುತ್ತದೆ.  ಜನಸಂಖ್ಯೆಯಲ್ಲಿ ಮೀರಾ-ಭಾಯಂದರ್ ಬಲಿಷ್ಠವಾದ ಟೀಮ್ ಆಗಿದ್ದು 5000 ಮಂದಿ ಸದಸ್ಯರಾಗಿದ್ದು ಉಳಿದ 5000 ಮಂದಿ ಸದಸ್ಯರಾದಲ್ಲಿ ಸಮಿತಿ ಇನ್ನೂ ಪ್ರಭಲವಾಗುವುದು.  ಬಂಟರ ಇತಿಹಾಸದಲ್ಲಿ ಬಂಟ ಬಾಂಧವರನ್ನು ಒಗ್ಗೂಡಿಸಿದ ಶ್ರೇಯಸ್ಸು ಐಕಳ ಹರೀಶ್ ಶೆಟ್ಟಿಯವರಿಗೆ ಸಲ್ಲುತ್ತದೆ. ಉದ್ಯಮ ಕ್ಷೇತ್ರದಲ್ಲಿ ಯುವ ಜನಾಂಗದವರಲ್ಲಿ ಹೊಸ ಯೋಜನೆ ಇದ್ದಲ್ಲಿ ನನ್ನಂತಹ  ಇಪ್ಪತೈದು ಮಂದಿ ಅವರಿಗೆ ಪ್ರೋತ್ಸಾಹ ನೀಡಿದಲ್ಲಿ ಅವರು ದೊಡ್ಡ ಉದ್ಯೋಗಪತಿಯಾಗಬಹುದು ಇದರಿಂದ ಅನೇಕರಿಗೆ ಪ್ರಯೋಜನಕಾರಿಯಾಗುವುದು.

ಬಂಟರ ಸಂಘ ಮುಂಬಯಿ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ನೂತನ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಮತ್ತು ಅವರ ಎಲ್ಲಾ ತಂಡಗಳಿಗೆ ಶುಭಹಾರೈಸುತ್ತಾ ನಾನು  ಯಾವುದೇ ಜವಾಬ್ಧಾರಿಯನ್ನು ತೆಗೆದುಕೊಂಡಲ್ಲಿ ಅದನ್ನು ನಿಸ್ವಾರ್ಥವಾಗಿ ಪೂರೈಸುತ್ತೇನೆ. ನನ್ನ ಯಶಸ್ಸಿಗೆ ಕಾರಣರಾದವರಲ್ಲಿ ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ಹಾಗೂ ವಿಜಯ ಬಂಡಾರಿ ಇವರು ಪ್ರಮುಖರು. ನನಗೆ ಸಿಕ್ಕಿದ ಇಂದಿನ ಸನ್ಮಾನ ನಾನು ಮಾಡಿದ ಕೆಲಸಕ್ಕೆ ಹೊರತು ಯಾವುದೇ ಸಾಧನೆಗಲ್ಲ ಅದುದರಿಂದ ಅದನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದರು.

ಉದ್ಯಮಿ ಸಮಾಜ ಸೇವಕ  ಮಹೇಶ್ ಶೆಟ್ಟಿ ತೆಳ್ಳಾರ್  ಮಾತನಾಡುತ್ತಾ ನೂತನ ಸಮಿತಿ ಹಾಗೂ ಉಪಸಮಿತಿಗಳಿಗೆ ಅಭಿನಂದನೆ ಸಲ್ಲಿಸುತ್ತಾ ಬಂಟರ ಸಂಘದ  ಇವತ್ತಿನ ಕಾರ್ಯಕ್ರಮ ನಮ್ಮ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ವಾಗಿದೆ.  ನಮ್ಮ ಜಾತಿಯ ಸಂಘ ಈಗ ಬಲಿಷ್ಠವಾಗಿದೆ ಆದ್ದರಿಂದ ನಮ್ಮ ಸಂಘದ ಪದಾಧಿಕಾರಿಗಳು ನಮ್ಮ ಹಿಂದು ಸಂಸ್ಕೃತಿ ಉಳಿಸಿ ಬೆಳೆಸುವ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಚಿಂತಿಸಿದಲ್ಲಿ ಅದನ್ನು ಇತರರೂ ಅನುಸರಿಸಿಯಾರು ಎಂದರು.

ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮಾತನಾಡುತ್ತಾ ನಿರಂತರ ಪರಿಶ್ರಮದಿಂದ ಒಬ್ಬ ವ್ಯಕ್ತಿ ನಾಯಕನಾಗುತ್ತಾನೆ. ಈ ಗುಣ ರವೀಂದ್ರ ಶೆಟ್ಟಿ ಕೊಟ್ರಪಾಡಿ ಯವರಲ್ಲಿದೆ. ಆದುದರಿಂದಲೇ ಅವರು ಇಂದು ಇಲ್ಲಿನ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದಾರೆ. ಐಕಳ ಹರೀಶ್ ಶೆಟ್ಟಿ ಯ ಸಮಾಜ ಸೇವೆಗೂ ಅವರ ನಿರಂತರವಾದ ಕಠಿಣ ಪರಿಶ್ರಮವಿದೆ. ಲೀಡರ್ ಆಗಲು ಎಲ್ಲರಿಂದ ಸುಲಭ ಸಾಧ್ಯವಲ್ಲ ಎಂದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಧಿಕಾರವನ್ನು ವಹಿಸಿ ಸನ್ಮಾನ ಸ್ವೀಕರಿಸಿದ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಅವರು ಮಾತನಾಡುತ್ತಾ ಎಲ್ಲರಿಗೂ ಕೃತಜ್ನತೆ ಸಲ್ಲಿಸುತ್ತಾ ಸಂಘದ ನಿಯಮದಂತೆ ನಾನು ನನ್ನ ಜವಾಬ್ಧಾರಿಯನ್ನು ನಿರ್ವಹಿಸುವೆನು ಎಂದರು. ನಮ್ಮ ತಂಡದಲ್ಲಿರುವವರೆಲ್ಲರೂ ವಿದ್ಯಾವಂತರಾಗಿದ್ದು ನಾನು ತಪ್ಪು ಮಾಡುವ ಅವಕಾಶವಿಲ್ಲ. ಅವರೆಲ್ಲರ ಪ್ರೋತ್ಸಾಹ ನನಗಿದೆ. ಸಾದನೆ ಮಾತಾಗಲಿ ಮಾತು ಸಾದನೆಯಾಗದಿರಲಿ ಎಂದರು. 

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ  ಶ್ರೀಮತಿ ವಸಂತಿ ಎಸ್. ಶೆಟ್ಟಿಯವರು ಅಧಿಕಾರ ಸ್ವೀಕರಿಸಿ ಸನ್ಮಾನ ಪಡೆದು ಮಾತನಾಡುತ್ತ  ನನಗೆ ಪ್ರಸಾದ ರೂಪದಲ್ಲಿ ದೊರೆತ ಈ ಪದವಿಯನ್ನು ಪ್ರಸಾದದಂತೆ ಸ್ವೀಕರಿಸುತ್ತಿದ್ದೇನೆ. ಮುಂದಿನ ಮೂರು ವರ್ಷದ ಅವಧಿಯಲ್ಲಿ ನಾನು ನನ್ನ ತಂಡ ಹಾಗೂ ಎಲ್ಲಾ ಸಮಿತಿಗಳ  ಸಹಾಯದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುವ ಪ್ರಯತ್ನವನ್ನು ಮಾಡುವೆನು ಎಂದರು.

ಯುವ ವಿಭಾಗ ಕಾರ್ಯಧ್ಯಕ್ಷ ವೃಷಬ್ ಶೆಟ್ಟಿ ಯವರು ಸನ್ಮಾನ ಸ್ವೀಕರಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಎಲ್ಲರ ಸಹಾಯದಿಂದ ನನ್ನ ಜವಾಬ್ಧಾರಿಯನ್ನು ಸಾಧ್ಯವಾದಷ್ಟು ಉತ್ತಮವಾಗಿ ನಿರ್ವಹಿಸುವೆನು ಎಂದರು.

ಸಂಚಾಲಕ ಹಾಗೂ ನಿರ್ಗಮನ ಕಾರ್ಯಾಧ್ಯಕ್ಷ ಶಿವ ಪ್ರಸಾದ್ ಶೆಟ್ಟಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅದೇ ರೀತಿ ಮುಂದೆಯೂ ಎಲ್ಲರೂ ಸಹಕರಿಸಬೇಕೆಂದರು.

ಯುವ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ಶ್ರುತಿ ದಿವಾಕರ ಶೆಟ್ಟಿಯವರು ಸನ್ಮಾನ ಸ್ವೀಕರಿಸಿ ಮಾತನಾಡಿ ತನ್ನ ಆಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.

ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ಸುಜಾತ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಸಮರ್ಥ್ ರೈ ಹಾಗೂ ಶರಣ್ಯ ಸುರೆಶ್ ಶೆಟ್ಟಿಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯ ಶೆಟ್ಟಿ ಮೂಡುಬೆಳ್ಳೆ ಯವರು ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕಾರ್ಯಕ್ರಮವನ್ನು ನಿರ್ವಹಿಸುದ್ದು ಸಾಂಸ್ಕ್ಟುತಿಕ ಕಾರ್ಯಕ್ರಮವನ್ನು ಇ. ಉದ್ಯೋಗ ಸಮಿತಿಯ ಕಾಯಾಧ್ಯಕ್ಷ ಕೃುತಿಕ ಶೆಟ್ಟಿ ನಿರ್ವಹಿಸಿದರು. ಕೋಶಾಧಿಕಾರಿಯಾಗಿ ಶಂಕರ್ ಶೆಟ್ಟಿ, ವಂದನಾರ್ಪಣೆ ಮಾಡಿದರು.

ವೇದಿಕೆಯಲ್ಲಿ ಬಂಟರ ಸಂಘದ  ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ,  ಗೌ. ಪ್ರ. ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಗೌ. ಕೋಶಾಧಿಕಾರಿ ಸಿ ಎ ರಮೇಶ್ ಬಿ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್ ಶೆಟ್ಟಿ ತೆಲ್ಲಾರ್, ಜೊತೆ ಕೋಶಾಧಿಕಾರಿ ಶಶಿಧರ ಕೆ ಶೆಟ್ಟಿ ಇನ್ನಂಜೆ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ, ಕವಿತ ಐ ಅರ್. ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಧ್ಯಕ್ಷ ತಾರನಾಥ್ ಕೆ.ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಧ್ಯಕ್ಷ ಅರವಿಂದ ಎ. ಶೆಟ್ಟಿ, ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ,  ಉಪ ಕಾರ್ಯಧ್ಯಕ್ಷೆ ಸುಜಾತ ಪಿ. ಶೆಟ್ಟಿ, ಕಾರ್ಯದರ್ಶಿ  ಸುಮಂಗಳ ಕಣಂಜಾರ್, ಕೋಶಾಧಿಕಾರಿ ವಂದನ ಶೆಟ್ಟಿ, ಜೊತೆ ಕಾರ್ಯದರ್ಶಿ  ಶಿಲ್ಪ ಶೆಟ್ಟಿ, ಜೊತೆ ಕೋಶಾಧಿಕಾರಿ ಅಶ್ವಿನಿ ಶೆಟ್ಟಿ, , ಉಪ ಕಾರ್ಯಧ್ಯಕ್ಷ  ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ನಿರೀಕ್ಷ ಶೆಟ್ಟಿ,  ಕೋಶಾಧಿಕಾರಿ ಸ್ವಾತಿ ಶೆಟ್ಟಿ, ಜೊತೆ ಕಾರ್ಯದರ್ಶಿ  ಅನುಷ ಶೆಟ್ಟಿ, ಜೊತೆ ಕೋಶಾಧಿಕಾರಿ ಧನೇಶ್ ಶೆಟ್ಟಿ,  ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಮಹಿಳಾ ವಿಭಾಗದ ಸಲಹಾ ಸಮಿತಿ  ಸಂಧ್ಯಾ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ  ಸಂಪತ್ ಶೆಟ್ಟಿ ಪಂಜದ ಗುತ್ತು, ವೈದ್ಯಕೀಯ ಸಮಿತಿ ಡಾ. ರಿಯಾ ಶೆಟ್ಟಿ, ಕ್ರೀಡಾ ಸಮಿತಿ  ಸಾಯಿ ಪ್ರಸಾದ್ ಪೂಂಜ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗ ರಾಜೇಶ್ ಶೆಟ್ಟಿ, ಸದಸ್ಯ ನೋಂದಣಿ  ರವೀಂದ್ರ ಶೆಟ್ಟಿ ದೇರಳ ಕಟ್ಟೆ , ಅಶೋಕ್ ಶೆಟ್ಟಿ , ವಿಶಲಾಕ್ಷಿ ಶೆಟ್ಟಿ, ವಿವಾಹ ನೋಂದಣಿ ಆಶಾಲತ ಶೆಟ್ಟಿ, ಮಾಹಿತಿ ಹಾಗೂ ತಂತ್ರಜ್ಞಾನ  ಅಭಿಜಿತ್ ಶೆಟ್ಟಿ, ಕ್ಯಾಟರಿಂಗ್ ವಿಭಾಗ  ಕರುಣಾಕರ್ ಶೆಟ್ಟಿ, ಭಜನೆ ಸಮಿತಿ  ಜಯಶ್ರೀ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಂಟರ ಸಂಘದ  ಟ್ರಷ್ಟಿಗಳು, ವಿವಿಧ ಪ್ರಾದೇಶಿಕ ಸಮಿತಿಯ ಗಣ್ಯರು ಉಪಸ್ಥಿತರಿದ್ದರು.

Related posts

ಗೊರೆಗಾಂವ್ ಕರ್ನಾಟಕ ಸಂಘದ 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ, ಸಮಾರೋಪ ಸಮಾರಂಭ

Mumbai News Desk

ಶ್ರೀ ಜಗದಂಬಾ ಮಂದಿರದ 9 ನೇ ವಾರ್ಷಿಕ ಮಹೋತ್ಸವ

Mumbai News Desk

ಶ್ರೀ ಕಟೀಲ್ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವ

Mumbai News Desk

ನವಿಮುಂಬಯಿಯ ಪನ್ವೆಲ್ ನಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಸಮಾಲೋಚನೆ ಸಭೆ,

Mumbai News Desk

ಬೋಂಬೆ ಬಂಟ್ಸ್  ಎಸೋಸಿಯೇಶನ್  ವತಿಯಿಂದ ಮಾಜಿ  ಅಧ್ಯಕ್ಷರಾದ ಜಯ ಎನ್ ಶೆಟ್ಟಿಯವರಿಗೆ ನುಡಿ ನಮನ .

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ

Mumbai News Desk