30.9 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್- ನಾಲಾಸೋಪಾರ: ಯಕ್ಷಗಾನ  ಶಿಬಿರ, ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ





ಸಂಸ್ಕಾರವಂತ ಮಕ್ಕಳಿಂದಲೇ ಧರ್ಮ ಸಂಸ್ಕೃತಿ ರಕ್ಷಣೆ – ಶಶಿಧರ ಕೆ ಶೆಟ್ಟಿ ಇನ್ನಂಜೆ

 ಚಿತ್ರ ವರದಿ: ದಿನೇಶ್ ಕುಲಾಲ್.

ನಾಲಾಸೋಪಾರ ವಿರಾರ್  ಪರಿಸರದ ತುಳು ಕನ್ನಡಿಗರ ಮಕ್ಕಳಿಗೆ ಸಂಸ್ಕಾರ ನೀಡುವ ಉದ್ದೇಶದಿಂದ ನಾಲಾಸೋಪಾರದ ಹೋಟೆಲ್ ಉದ್ಯಮಿ, ತುಳು ಕೂಟ ಫೌಂಡೇಶನ್ ನಾಲಾಸೋಪಾರ ಇದರ ಸಂಸ್ಥಾಪಕ, ಬಂಟರ ಸಂಘ ಮುಂಬಯಿ ಜೊತೆ ಕೋಶಾಧಿಕಾರಿ ಶಶಿಧರ ಕೆ ಶೆಟ್ಟಿ ಇನ್ನಂಜೆ ನೇತೃತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡಿರುವ ಶ್ರೀ ದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ ವಿರಾರ್ ಇದರ  25/26 ನೇ ಸಾಲಿನ ವರ್ಷದ ಯಕ್ಷಗಾನ ತರಬೇತಿ ಶಿಬಿರ ಹಾಗೂ ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ ಹಾಗೂ ಸಂಸ್ಥೆಯ ವರ್ಷಾಚರಣೆಯ ಸಂದರ್ಭದಲ್ಲಿ ನಡೆಯಲಿರುವ “ಕಟೀಲು ಕ್ಷೇತ್ರ ಮಹಾತ್ಮೆ” ಯಕ್ಷಗಾನದ ಮುಹೂರ್ತ ಕಾರ್ಯಕ್ರಮವು ರಿಜನ್ಸಿ ಬ್ಯಾಂಕ್ವಿಟ್ ಹಾಲ್ ಫೈರ್ ಬ್ರಿಗೇಡ್ ಹತ್ತಿರ ನಾಲಾಸೋಪಾರ ಇಲ್ಲಿ  ಜೂ. 20 ರಂದು ನಡೆಯಿತು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪರಿಸರದ  ಮಕ್ಕಳು ಮತ್ತು ಅವರ ಪಾಲಕರನ್ನುದ್ದೇಶಿಸಿ ಮಾತನಾಡಿದ ಶಶಿಧರ್ ಕೆ  ಶೆಟ್ಟಿ ಇನ್ನಂಜೆ   ಅವರು ಮಕ್ಕಳು ಶಾಲೆಯ ಕಲಿಕೆಯೊಂದಿಗೆ ನಮ್ಮ ಮಾತೃ ಭಾಷೆ, ಭರತನಾಟ್ಯ, ಭಜನೆ ಗಮನದಲ್ಲಿಟ್ಟು ಶ್ರದ್ಧೆಯಿಂದ ಶಿಸ್ತಿನಿಂದ ಕಳಿತುಕೊಳ್ಳಬೇಕು. ಬದುಕಿಗೆ ಇದೆಲ್ಲವೂ ಮುಖ್ಯವಾಗಿರುತ್ತದೆ. ವಿದ್ಯೆ ಬದುಕು ಕಟ್ಟಲು ಸಹಕಾರಿಯಾದರೆ, ಸಂಸ್ಕಾರ ನಮ್ಮನ್ನು ಬದುಕಲು ಕಲಿಸಿದೆ. ಮಕ್ಕಳ ಅನುಗುಣದಂತೆ ಪಾಲಕರು ಅವರಿಗೆ ಸಹಕಾರ ನೀಡಬೇಕು. ಯಕ್ಷಗಾನ, ಭಜನೆಯಿಂದ ಮಕ್ಕಳಲ್ಲಿ ಧಾರ್ಮಿಕತೆ ಮತ್ತು ಧರ್ಮ ಜಾಗೃತಿಯಾಗುತ್ತದೆ. ಪರಿಸರದ ತುಳುವ ಕನ್ನಡಿಗರ ಮಕ್ಕಳು ಸಂಸ್ಕಾರವಂತರಾಗಬೇಕು, ಆ ಮೂಲಕ ಧರ್ಮರಕ್ಷಣೆಯ ಕಾರ್ಯದಲ್ಲಿ ಮತ್ತು ದೇಶ ಕಟ್ಟುವಲ್ಲಿ ತೊಡಗಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ನಮ್ಮಿ ಸಂಸ್ಥೆ ಮತ್ತು ನಾನು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ. ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣವನ್ನು ನೀಡುವ ಗುರುಗಳು ಸಮಯಕ್ಕೆ ಮಹತ್ವವನ್ನ ನೀಡಿ ನಿಮ್ಮೊಂದಿಗೆ ಇರುತ್ತಾರೆ ಅದಕ್ಕೆ ನೀವು ಕೂಡ ಸಮಯದಲ್ಲಿಸೇರಿಕೊಂಡು ತರಬೇತಿಗಳನ್ನು ಪಡೆಯಬೇಕು ಎಂದು ತಿಳಿಸಿದರು. 

ಯಕ್ಷ ಗುರು ನಾಗೇಶ್ ಪೂಳಲಿ ಯಕ್ಷಗಾನಕ್ಕೆ ಮೂರ್ತವನ್ನು ನಡೆಸಿ ವಿದ್ಯಾರ್ಥಿಗಳೆಲ್ಲರೂ ಸಮಯವನ್ನು ಪರಿಪಾಲನೆ ಮಾಡಬೇಕು. ಆಸಕ್ತಿ ಇದ್ದವರು. ಸಮಯವನ್ನು ನೀಡುವವರು ಯಕ್ಷಗಾನದಲ್ಲಿ ಪಾಲ್ಗೊಳ್ಳಬೇಕು. ಪಾತ್ರಗಳು ಸಣ್ಣದಿರಲಿ,ದೊಡ್ಡದಿರಲಿ, ಅದು ಮುಖ್ಯವಲ್ಲ ನಮ್ಮ ನಟನೆ ಕಲಾಭಿಮಾನಿಗಳನ್ನು ಮುಟ್ಟುವಂತಾಗಬೇಕು.. ಯಕ್ಷಗಾನದಿಂದ ಬದುಕಿಗೆ ಎಲ್ಲಾ ರೀತಿಯ ಪಾಠಗಳು ಸಿಗುತ್ತದೆ. ಈ ಪರಿಸರದ ಶಶಿಧರ್ ಶೆಟ್ಟಿ ಅವರ ಪರಿಶ್ರಮ ಮತ್ತು ಅವರ ಸಹಕಾರ ನಿಮ್ಮೆಲ್ಲರ ಕಲಾ ಪ್ರತಿಭೆಗೆ ಪ್ರೋತ್ಸಾಹವಾಗಿದೆ. ಯಕ್ಷಗಾನದಲ್ಲಿ ಪಾತ್ರ ಮಾಡುವುದೇ ದೇವರಿಗೆ ನೀಡಿದ ನೀವು ಸೇವೆ ಎಂದು ತಿಳಿಯಬೇಕು ಈಗ ನುಡಿದರು.

  ಕಾರ್ಯದರ್ಶಿ  ಪ್ರವೀಣ್ ಶೆಟ್ಟಿ ಕಣಂಜಾರ್ ಸ್ವಾಗತಿಸಿ ಪೂರ್ತಿ ಕಾರ್ಯಕ್ರಮದ ಮತ್ತು  ತರಬೇತಿಯ  ವಿಹಾರ ತಿಳಿಸಿದರು.

ಸಂಸ್ಥೆಯ ಸಲಹೆಗಾರರಾದ ಮೋಹನ್ ಬಿ ಶೆಟ್ಟಿ, ಶಶಿಕಲಾ ಶಶಿಧರ್ ಶೆಟ್ಟಿ ಅವರು ಮಕ್ಕಳಿಗೆ ಶುಭ ಹಾರೈಸಿದರು. 

 ನೃತ್ಯ ಗುರು ಮೀನಾಕ್ಷಿ ನಾಯರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. 
ಶ್ರೀದೇವಿ ಯಕ್ಷಕಲಾ ನಿಲಯದ ಕೋಶಾಧಿಕಾರಿ.ಜಗನಾಥ್. ಡಿ. ಶೆಟ್ಟಿ ಪಳ್ಳಿ  ಧನ್ಯವಾದ ನೀಡಿದರು. ನಾಗೇಶ್ ಕೋಟ್ಯಾನ್ ದೇವರಿಗೆ ವಿಶೇಷ ಆರತಿ ಮಾಡಿದರು.

ಶ್ರೀದೇವಿ ಯಕ್ಷಕಲಾ ನಿಲಯದ 9ನೇ ವರ್ಷದ ಸಂಭ್ರಮಾಚರಣೆ ನವಂಬರ್ 22ರಂದು ಶನಿವಾರದಂದು  ನಡೆಯಲಿದ್ದು ಈ ಹಿಂದೆ ಈ ಸಂಸ್ಥೆಯ ಮಕ್ಕಳು.
ಬಪ್ಪನಾಡು ಕ್ಷೇತ್ರ ಮಹಾತ್ಮೆ, ಶ್ರೀದೇವಿ ಮಹಾತ್ಮೆ, ಮುಂಡ್ಕೂರು ಕ್ಷೇತ್ರ ಮಹಾತ್ಮೆ,
ಶ್ರೀ ದೇವಿ ಲಲಿತೋಪಖ್ಯಾನ, ತ್ರಿಜನ್ಮ ಮೋಕ್ಷ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನು ಪ್ರದರ್ಶಿಸಿ ಕಲಾಭಿಮಾನಿಗಳಿಂದ ಪ್ರಶಾಂಶೆಗೆ ಪಾತ್ರರಾಗಿದ್ದರು. ಈ ಬಾರಿ ಮತ್ತೆ ಯಕ್ಷ ಗುರು ನಾಗೇಶ್ ಪೂಳಲಿ ಅವರ ಮಾರ್ಗದರ್ಶನದಲ್ಲಿ ಕಟೀಲು ಕ್ಷೇತ್ರ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಅಲ್ಲದೆ ನೃತ್ಯ, ಭಜನೆ ಮಕ್ಕಳು ಅಭ್ಯಾಸ ಮಾಡಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. 



Related posts

ಅಯ್ಯಪ್ಪ ಸ್ವಾಮಿ ಭಕ್ತವೃಂದ ಚೆಂಬೂರು, ವಾರ್ಷಿಕ ಪಡಿಪೂಜೆ ಮತ್ತು ಮಹಾಪೂಜೆ

Mumbai News Desk

ಮುಂಬೈ ‘ಎನ್ಕೌಂಟರ್ ಸ್ಪೆಶಲಿಸ್ಟ್’ ದಯಾ ನಾಯಕ್ ನಿವೃತ್ತಿಗೆ ಎರಡು ದಿನಗಳ ಮೊದಲು ಎಸಿಪಿ ಹುದ್ದೆಗೆ ಬಡ್ತಿ

Mumbai News Desk

ಸಯನ್ ಮಕರ ಜ್ಯೋತಿ ಫೌಂಡೇಶನ್ ವತಿಯಿಂದ  ನೋಟ್ ಬುಕ್ ವಿತರಣೆ, ಅಭಿನಂದನಾ ಕಾರ್ಯಕ್ರಮ,

Mumbai News Desk

ಬಂಟರ ಸಂಘ ಮುಂಬಯಿ ಗುರುಪೂರ್ಣಿಮೆ ಆಚರಣೆಯಂದು ಶ್ರೀ ಮಹಾವಿಷ್ಣು ಭಜನಾ ತಂಡ ಚಾಲನೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಮುಂಬಯಿ: ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭ

Mumbai News Desk

‘ಶ್ರೀ ರಾಮ ಕಥಾ ಹೃದಯಂ‌’ ಸರಣಿ ತಾಳಮದ್ದಳೆಯ ನಾಲ್ಕನೇ ಪ್ರಸ್ತುತಿ

Mumbai News Desk