ಡೊಂಬಿವಲಿ : ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಡೊಂಬಿವಲಿ – ಕಲ್ಯಾಣ ಪರಿಸರದ ನಮ್ಮ ಸಂಘದ ಮಹಿಳಾ ಸದಸ್ಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆಯನ್ನು ಫೆಬ್ರವರಿ 18 ರಂದು ಮೊಗವೀರ ವ್ಯವಸ್ಥಾಪಕ ಮಂಡಳಿ, ವೇದ ಬ್ರಹ್ಮ ಬಿಲ್ಡಿಂಗ್, 2ನೇ ಮಹಡಿ, ಲಿಜ್ಜತ್ ಪಾಪಡ್ ನ ಮೇಲೆ, ಸ್ಟೇಟ್ ಬ್ಯಾಂಕ್ ಹತ್ತಿರ, ಎಂ ಜಿ ರೋಡ್, ಡೊಂಬಿವಲಿ ಪಶ್ಚಿಮ – 421202 ಇಲ್ಲಿ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಷ್ಮಾ ದಿವಾಕರ್ ಶೆಟ್ಟಿ ((ಕಾರ್ಯಾಧ್ಯಕ್ಷೆ, ಲಲಿತ ಕಲಾ ವಿಭಾಗ, ಕರ್ನಾಟಕ ಸಂಘ ಡೊಂಬಿವಲಿ) ಮತ್ತು ಶ್ರೀಮತಿ ಯೋಗಿನಿ ಸುಕುಮಾರ್ ಶೆಟ್ಟಿ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ) ಇವರು ಆಗಮಿಸಿ ದೀಪ ಪ್ರಜ್ವಲನೆ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಹಾಗೇನೆ ಸ್ಪರ್ಧೆಯು ಮುಂಜಾನೆ 10 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ ಎಂದು ಸಂಘದ ಅಧ್ಯಕ್ಷರಾದ ರಾಜು ಎ ಮೊಗವೀರ ಮತ್ತು ಕಾರ್ಯದರ್ಶಿ ಸಂತೋಷ ಬಿ ಪುತ್ರನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಸಂತೋಷ ಬಿ ಪುತ್ರನ್ ಮೊ ನಂ – 9930023998,
ನಿಶಾ ಮೆಂಡನ್ ಮೊ ನಂ – 9967371724,
ಶೇಖರ್ ಮೊಗವೀರ ಮೊ ನಂ – 9819001083 ಕ್ಕೆ ಸಂಪರ್ಕಿಸಬಹುದು.