
ಕುಲಶೇಖರ ಪೆ ,:ಶ್ರೀ ವೀರನಾರಾಯಣ ದೇವಸ್ಥಾನದ ಕುಂಭ ಮಹೋತ್ಸವದ ಮೂರ ದಿನ ಪೆ 14 ರಂದು ಕ್ಷೇತ್ರದ ಸಾಂಸ್ಕೃತಿಕ ವೇದಿಕೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು.
ಯಕ್ಷಗಾನದ ಸೇವಕರ್ತರಾದ ಸ್ರವಂತಿ ಮತ್ತು ಬಿ ಪ್ರೇಮಾನಂದ ಕುಲಾಲ್ ಹಾಗೂ ಕುಮಾರಿ ಶ್ರೇಯಾ ಮತ್ತು ಬೇಬಿ ಹಶ್ಮಿತಾ ಕೋಡಿಕಲ್ಲ್ ಇವರನ್ನು ವೇದಿಕೆಯಲ್ಲಿ ಕಟೀಲಿನ ಲಕ್ಷ್ಮಿ ನಾರಾಯಣ ಅಸ್ರಣರು ಮತ್ತು ಜಿಲ್ಲಾ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಇವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು ಆದ ಪುರುಷೋತ್ತಮ ಕುಲಾಲ್ ಕಲ್ಬಾವಿ,ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಶ ಸದಾಶಿವ ಕುಲಾಲ್ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಾಮೋದರ ಎ,ಶ್ರೀ ಸುರೇಶ್ ಮಂಗಳಾದೇವಿ, ಗಿರಿಧರ್ ಜೆ ಮೂಲ್ಯ ಜೀರ್ಣೋದ್ಧಾರ ಮುಂಬಯಿ ಸಮಿತಿಯ ಅಧ್ಯಕ್ಷರಾದ ಬಿ ದಿನೇಶ್ ಕುಲಾಲ್ ಸೇವ ಸಮಿತಿಯ ಅಧ್ಯಕ್ಷರಾದ ಸುಂದರ ಕುಲಾಲ್, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರವೀಣ್ ಬಸ್ತಿ ನಿರೂಪಿಸಿದರು.