
ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ವು ಶನಿವಾರ ದಿನಾಂಕ 24-02-2024 ರಂದು ಅಪರಾನ್ಹ 12 ರಿಂದ ರಾತ್ರಿ 8 ರ ತನಕ ಜರಗಲಿದೆ. ತದ ನಂತರ ಮಹಾ ಮಂಗಳಾರತಿ, ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ಜರಗಲಿದೆ. ಡೊಂಬಿವಲಿ ಪರಿಸರದ ಸಮಾಜ ಬಾಂಧವರು , ಹಿತೈಸಿಗಳು, ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ತೀರ್ಥಪ್ರಸಾದ ಸ್ವೀಕರಿಸ ಬೇಕಾಗಿ ಡೊಂಬಿವಿಲಿ ಸ್ಥಳೀಯ ಸಮಿತಿ, ಮಹಿಳಾ ವಿಭಾಗ, ಯುವಬ್ಯೂದಯ ಉಪ ಸಮಿತಿ.ಡೊಂಬಿವಲಿ ಸ್ಥಳೀಯ ಕಚೇರಿಯ ಪರವಾಗಿ ಗೌರವ ಕಾರ್ಯದರ್ಶಿ ಸಚಿನ್ ಜಿ ಪೂಜಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.