
ಕುಮಾರ ಕ್ಷತ್ರಿಯ ಸಂಘ ಮುಂಬಯಿ: ಯಶಸ್ವಿಯಾಗಿ ಜರಗಿದ 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ ಮತ್ತು ರಸಿಕರನ್ನು ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ.
ಮುಂಬಯಿ, ಫೆ. 16: ಮಹಾ ನಗರದಲ್ಲಿರುವ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲೊಂದಾದ ಕುಮಾರ ಕ್ಷತ್ರಿಯಸಂಘ, ಮುಂಬಯಿಯು ಸಾಂತಕ್ರೂಜ್ ಪೂರ್ವದ ಪೇಜಾವರ ಮಠ ಸಭಾಗೃಹದಲ್ಲಿ ದಿನ ಇಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಸಂಘದ ಅಧ್ಯಕ್ಷ ಎಂ.ಡಿ. ರಾವ್ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಅವರ ನೇತೃತ್ವದಲ್ಲಿ ಪೆ. 11ರಂದು ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಂತರ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ಸಂಭ್ರಮ ದಿಂದ ನೆರವೇರಿತು. ಮಧ್ಯಾಹ್ನ 12.15 ಗಂಟೆಗೆ ಕುಮಾರ ಕ್ಷತ್ರಿಯ ಸಂಘ, ಮುಂಬಯಿಯ ಅಧ್ಯಕ್ಷ ಎಂ ಡಿ ರಾವ್ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನೆರವೇರಿತು. ಆರಂಭದಲ್ಲಿ ಗಣೇಶ ಸ್ತುತಿಯನ್ನು ಇಂದುಮತಿ ರಾವ್ ಮತ್ತು ಅವರ ಬಳಗ ಸಾದರ ಪಡಿಸಿದರು. ಕಳೆದ ವರ್ಷ ದಿವಂಗತರಾದ ಸಮಾಜದ ಮಹನೀಯರಿಗೆ ಮೌನ ಪ್ರಾರ್ಥನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಎಂ. ಡಿ. ರಾವ್ ಬಂದ ಎಲ್ಲ ಮಹನೀಯರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಬಾಂಧವರ ಶಾಲಾ ಕಾಲೇಜಿನಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳಿಗೆ ಊರಿನಿಂದ ಬಂದ ಗಣ್ಯವ್ಯಕ್ತಿಗಳ ಹಸ್ತದಿಂದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಮತ್ತು ಸಂಘದ ಪ್ರಗತಿಗೋಸ್ಕರ ಶ್ರಮಿಸಿದ ನಾಲ್ಕು ಮಂದಿ ದಿವಂಗತ ಕಾರ್ಯಕರ್ತರ ಕುಟುಂಬದ ವರಿಗೆ ಶಾಲು ಹೊದಿಸಿ ,ನೆನಪಿನ ಕಾಣಿಕೆ ಹಾಗೂ , ಸನ್ಮಾನ ಪತ್ರಿಕೆಯನ್ನು ಸಮಾಜದ ಗಣ್ಯ ಮಹಿಳೆಯರ ಹಸ್ತದಿಂದ ನೀಡಲಾಯಿತು. ಸಂಘದ ಪ್ರಗತಿಕೋಸ್ಕರ ಶ್ರಮಿಸಿದ ಮಾಜಿ ಆಧ್ಯಕ್ಷರಾದ ಪ್ರಕಾಶ ನಾಥರವರ ಅನುಪಸ್ಥಿತಿಯಲ್ಲಿ ಅವರ “ಜೀವಮಾನ ಸಾಧಕ ” ಪ್ರಶಸ್ತಿ ಅವರ ಮನೆಗೆ ಹೋಗಿ ನೀಡುವರೆಂದು ತಿಳಿಸಿದರು. ಕಾರ್ಯಕ್ರಮಕೊಸ್ಕರ ಬೆಂಗಳೂರು, ಮಂಗಳೂರು ಹಾಗೂ ಅಹಮದಾಬಾದ್ ನಿಂದ ಬಂದ ಸಮಾಜ ಬಾಂಧವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಲೆಕ್ಕ ಪತ್ರವನ್ನು ಸಂಘದ ಕೋಶಾಧಿಕಾರಿ ಶಾಂತಾರಾಮ್ ಜೆ. ಮಾಂಗಾಡ್ ಸಾದರ ಪಡಿಸಿದರು.

ನಂತರ ಅಧ್ಯಕ್ಷರ ಭಾಷಣದಲ್ಲಿ ಅದ್ಯಕ್ಷರು ಪೂಜೆಗೆ ಆಗಮಿಸಿದ ಎಲ್ಲಾ ಗಣ್ಯರಿಗೆ ಹೃತ್ಪೂರ್ವಕ ವಂದನೆ ಸಲ್ಲಿಸಿ ಪರ ಊರಿನಿಂದ ಬಂದ ಸಮಾಜ ಬಾಂಧವರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ದೇವಸ್ಥಾನ ಹಾಗೂ ಕಾಂಜ್ಞನ್ ಗಾಡ್ ನಲ್ಲಿರುವ ಸಮಾಜ ಭವನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಊರಿನ ಸಮಾಜದ ಜಾಗದಲ್ಲಿ ಕಟ್ಟುವ ಶಾಪಿಂಗ್ ಮಾಲ್ ಗೆ ಧನ ಸಹಾಯ ಮಾಡಬೇಕೆಂದು ಸಮಾಜ ಬಾಂಧವರಲ್ಲಿ ವಿನಂತಿಸಿದರು.
ಮಧ್ಯಾಹ್ನ 2.45 ರಿಂದ ಇದೇ ಸಭಾಗೃಹದಲ್ಲಿ ಬಹುಮುಖಿ ಪ್ರತಿಭಾವಂತೆ ಹೊಮಿಯೋಪತಿ ವೈದ್ಯೆ ಡಾ. ರೇಣುಕಾ ಬಿ. ಅಮೀನ್ ಅವರು ಹೋಮಿಯೋಪತಿ ಚಿಕಿತ್ಸೆಯ ಮಹತ್ವ ಹಾಗೂ ಆರೋಗ್ಯದ ಬಗ್ಗೆ ವಿವರಣಾತ್ಮಕ ಮಾಹಿತಿಯನ್ನು ಸಭಿಕರಿಗೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಾಜ ಬಾಂಧವರ ಮಕ್ಕಳ ನೃತ್ಯ ಪ್ರದರ್ಶನ ಮತ್ತು ಚೆಂಬೂರು ಕರ್ನಾಟಕ ಹೈಸ್ಕೂಲ್ ಶಾಲೆಯ ಶಿಕ್ಷಕಿಯರಾದ ವಿಜೇತಾ ಮತ್ತು ವೈದ್ಯರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಜಾನಪದ ನೃತ್ಯ ಮತ್ತು ಭಾವಗೀತೆ ನೃತ್ಯ ಪ್ರದರ್ಶನ ರಸಿಕರನ್ನು ರಂಜಿಸಿತು. ಕೊನೆಗೆ ರೇಣುಕಾ ಬಿ. ಅಮೀನ್ ಮತ್ತು ಅವರ ಬಳಗದವರಿಂದ ” ಸ್ವರಲೀಲೆ ಆರ್ಕೆಸ್ಟ್ರಾ” ಜರಗಿತು
ಈ ಸಂದರ್ಭದಲ್ಲಿ ಲಘು ಉಪಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೊಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಕುಮಾರ ಕ್ಷತ್ರಿಯ ಸಂಘ ಮುಂಬಯಿಯ ಉಪಾಧ್ಯಕ್ಷ ರವಿ ಜಿ. ಚಂದ್ರಗಿರಿ, ಗೌ. ಪ್ರ. ಕಾರ್ಯದರ್ಶಿ ಉಮಾನಾಥ ವಿ. ರಾವ್, ಜೊತೆ ಕೋಶಾಧಿಕಾರಿ ಸುರೇಂದ್ರ ಎಚ್. ಎ. ಮತ್ತು ಜೊತೆ ಕಾರ್ಯದರ್ಶಿ ಸಾಗರ ಪಿ. ರಾವ್ ಮತ್ತು ಸಮಿತಿ ಸದಸ್ಯರಾದ ರವಿ ಎಸ್. ಕಲ್ನಾಡ್, ಅನಿಲ್ ಜಿ. ರಾವ್, ಪ್ರಶಾಂತ್ ನಾಥ್, ಪ್ರಶಾಂತ ಆರ್. ರಾವ್, ಅನುಪ್ ಜೆ.ರಾವ್ ಮಹಿಳಾ ವಿಭಾಗದವತಿಯಿಂದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್, ಉಪ ಕಾರ್ಯಾಧ್ಯಕ್ಷೆ ಉಮಾ ಎಸ್. ರಾವ್, ಸಲಹೆಗಾರರಾದ ಪ್ರಭಾ ಎಂ. ರಾವ್ ಮತ್ತು ಕೋಶಾಧಿಕಾರಿ ಇಂದುಮತಿ ಎ. ರಾವ್ ಹಾಗೂ ಮಹಿಳಾ ಸಮಿತಿ ಸದಸ್ಯರಾದ ವಿಶಾಲಾಕ್ಷಿ ಎ. ಚಂದ್ರಗಿರಿ, ಬಿಂದು ಕುಂದರ್ , ಶಯಾತ್ರಿ ವಿ. ರಾವ್ ಮತ್ತು ರೇಖಾ ಸಾವಂತ್ ಇವರೆಲ್ಲರೂ ಉಪಸ್ಥಿತಿತರಿದ್ದರು.
ಬೆಳಗ್ಗಿನ ಕಾರ್ಯಕ್ರಮದ ನಿರೂಪಣೆ ಸಂಘದ ಮಹಿಳಾವಿಭಾಗದ ಗೌ. ಪ್ರ. ಕಾರ್ಯದರ್ಶಿ ಕವಿತಾ ರೋಹನ್ ಹಾಗೂ ಸದಸ್ಯೆ ರಮ್ಯ ಎಸ್. ಮಾಂಗಾಡ್ ಮಾಡಿದರೆ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಕಲ್ಪನ ಎಸ್.ರಾವ್ ಹಾಗೂ ಸದಸ್ಯೆ ಭೈರವಿ ಎಂ. ರಾವ್ ಮಾಡಿದರು. ಸಂಘದ ಗೌ. ಪ್ರ. ಕಾರ್ಯದರ್ಶಿ ಉಮನಾಥ್ ವಿ. ರಾವ್ ಧನ್ಯವಾದ ಅರ್ಪಿಸಿದರು.