
ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಮೆರೆಯುತ್ತಿದೆ- ಶೇಖರ್ ಪಿ ಶೆಟ್ಟಿ ,
ಮುಂಬಯಿ ಪೆ 17 .ದಹಿಸರ್ ಪೂರ್ವ ದ ರಾವಲ್ ಪಾಡ ಸಂತ್ ನಾಮ್ ದೇವ್ ರೋಡ್, ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ (ರಿ) ಸಂಚಾಲಕತ್ವದ,
ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನ38ನೇ ವಾರ್ಷಿಕ ಮಹಾಪೂಜೆ. ಯಕ್ಷಗಾನ ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆಬ್ರವರಿ 10 ರಿಂದ 11 ರವರೆಗೆ ನಡೆಯಿತು,
ಪೆ 10 ರಂದುಮಹಾಪೂಜೆ ಯು ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ, ಡೊಂಬಿವಲಿ ಮತ್ತು ದೇವಸ್ಥಾನದ ಪ್ರಧಾನ ಆರ್ಚಕರಾದ ರಜನೀಶ್ ಸಾಮಗ ಇವರ ನೇತೃತ್ವದಲ್ಲಿ ಹಾಗೂ ತೇಜಸ್ ಭಟ್ ಪುರೋಹಿತರ ಸಹಭಾಗೀತ್ವದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಹಸ್ರ ಸಂಖ್ಯೆಯ ಭಕ್ತರ ಕೂಡುವಿಕೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಗಣಪತಿ ಹಾಗೂ ಶ್ರೀ ಶನಿ ದೇವರಿಗೆ ನವಕಲಶ ಪ್ರಧಾನಹೋಮ, ಶನಿಶಾಂತಿ, ನಾಗದೇವರ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ, ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ, ಶ್ರೀದೇವಿಯ ಸನ್ನಿಧಾನದಲ್ಲಿ 25 ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸ್ವರ್ಣಾಲಂಕಾರ ಸೇವೆ, ಪಲ್ಲ ಪೂಜೆ. ಮಹಾಪೂಜೆಯು ಭಜನೆ ಶ್ರೀ ಶನಿ ಗ್ರಂಥ ಪಾರಾಯಣ , ಹಾಗೂ ಸುರೇಶ್ ಭಟ್ ಕುಂಟಾಡಿ ಯವರಿಂದ ಬಳಿಮೂರ್ತಿ ಉತ್ಸವ ಮೆರವಣಿಗೆ ವಿಜ್ರಮನೆಯಿಂದ ನಡೆಯಿತು , ಭವ್ಯ ಮೆರವಣಿಗೆಗೆದಿನೇಶ್ ಕೋಟ್ಯಾನ್ ಬಳಗದ ಡೋಲು ತಾಸೆ ,ಚೆಂಡೆ, ಕೊಂಬು ಗೊಂಬೆ ವಿವಿಧ ಯಕ್ಷಗಾನದ ವೇಷಭೂಷಣ ಗಳೂ ಕುಣಿತ ಭಜನೆ ಭಕ್ತರನ್ನು ಆಕರ್ಷಿಸಿತು,

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ಶ್ವೇತ ಶೆಟ್ಟಿ ಮತ್ತು ಡಾ. ಶೃತಿ ಶೆಟ್ಟಿ (ಸರ್ವೋದಯ ಡೆಂಟಲ್ ಕ್ಲಿನಿಕ್, ದಹಿಸರ್ ) ಇವರು ಪ್ರಾಯೋಜಕತ್ವದಲ್ಲಿ ,*ಬ್ರಹ್ಮ ಬಲಾ೦ಡಿ’ ಎಂಬ ಪೌರಾಣಿಕ ಕಥಾ ಭಾಗವನ್ನುತುಳುವಿನಲ್ಲಿ ಯಕ್ಷಗಾನ ಬಯಲಾಟ ರೂಪದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾ ಮಿತ್ರ ಮಂಡಳಿ, ಸಾಕಿನಾಕಾ ನಡೆಯಿತು,

ಯಕ್ಷಗಾನದ ಮಧ್ಯಂತರದಲ್ಲಿ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ ಅಧ್ಯಕ್ಷ ರಾದ ಶೇಖರ್ ಪಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಿತಿಯ ಪದಾಧಿಕಾರಿಗಳ ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಎಮ್ ಪೂಜಾರಿ, ಗೌರವ ಕೋಶಧಿಕಾರಿ ದೀಪಕ್ ಕೆ ಪೂಜಾರಿ,
ಬ್ರಹ್ಮ ಶ್ರೀ ಶಂಕರ್ ನಾರಾಯಣ ತಂತ್ರಿ.ರಜನೀಶ್ ಸಾಮಗ ಭಟ್, ಸಿ ಎನ್ ಪೂಜಾರಿ,ಮಾಂಗೇಶ್ ಪಂಗಾರೆ (ಉಪ ವಿಭಾಗ ಪ್ರಮುಖ )ಸಂತೋಷ್ ಶಿಂದೆ (ಶಿವ ಸೇನಾ ಶಾಕ ಪ್ರಮುಖ ) ಇವರು ಉಪಸ್ಥಿತಿಯಲ್ಲಿ ಕ್ಷೇತ್ರದ ದಾನಿ ನಾಗಿನ್ ಚಂದ್ರ ಆರ್ ನಾಯ್ಡು.(K K ಬ್ರದರ್ಸ್ ) ಮತ್ತು ಶ್ರೀ ದುರ್ಗಾಪರಮೇಶ್ವರಿ – ಶನೀಶ್ವರ ಮಂದಿರ ಸೇವಾಕರ್ತ ಕೃಷ್ಣ T ಸಾಲ್ಯಾನ್ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅತೀ ಹೆಚ್ಚು ಧನ ಸಂಗ್ರಹ ಮಾಡಿ ಸಹಕರಿಸಿದ ಸುರೇಶ್ ಇರ್ವತ್ತೂರ್, ಸಿ ಎನ್ ಪೂಜಾರಿ, ಅಮಿತ ಶೆಟ್ಟಿ ಮೊದಲಾದವರನ್ನು ಶಾಲು ಹೊದಿಸಿ, ಪುಷ್ಪ ಗುಚ್ಛ ನೀಡಿ ಅಭಿನಂದಿಸಲಾಯಿತು.
ಸನ್ಮಾನಿತರನ್ನು ಮತ್ತು ಸೇವಾಕರ್ತರನ್ನು ಸನ್ಮಾನಿಸಿದ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಶೇಖರ್ ಪಿ ಶೆಟ್ಟಿ ಅವರು ಮಾತನಾಡುತ್ತಾ ದಹಿಸರ್ ಪರಿಸರದಲ್ಲಿ ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಮೆರೆದಿದೆ. ದೇವಸ್ಥಾನದ ಸರ್ವ ಸದಸ್ಯರು ದೇವಸ್ಥಾನದ ಅಭಿವೃದ್ಧಿಗಾಗಿ ನಿರಂತರ ಸೇವೆಯಲ್ಲಿ ತೊಡಗಿದ್ದಾರೆ ಭಕ್ತರು ಮತ್ತು ದಾನಿಗಳ ಸಹಾಕಾರದಿಂದ ಪೂಜಾ ಕಾರ್ಯಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ. ದೇವಸ್ಥಾನದಲ್ಲಿ ವರ್ಷಪೂರ್ತಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವಾಕಾರಿಗಳು ನಡೆಯುತ್ತಿದೆ. ಭಕ್ತರಲ್ಲರ ಸೇವಾ ಸಹಕಾರ ಮುಂದಿನ ದಿನಗಳಲ್ಲೂ ಅಗತ್ಯ ಬೇಕಾಗಿದೆ ಎಂದು ನುಡಿದರು,.
ಸಭಾ ಕಾರ್ಯಕ್ರಮವನ್ನು ಪೂಜಾ ಸಮಿತಿಯ ಕಾರ್ಯದರ್ಶಿ ಲಕ್ಷಣ್ ಎಮ್. ಪೂಜಾರಿ ನಿರೂಪಿಸಿದರು
ಶ್ರೀ ಕ್ಷೇತ್ರದ ಮುಂಭಾಗದಲ್ಲಿ ರಾತ್ರಿ ಪ್ರಾರಂಭವಾದ. *ಬ್ರಹ್ಮ ಬಲಾoಡಿ *ಯಕ್ಷಗಾನ ಮರುದಿನ ಬೆಳಿಗ್ಗೆ ತನಕ ಕಲಾ ಪ್ರೇಕ್ಷಕರನ್ನು ಮನರಂಜಿಸಿದವು.
ಪೆ 11 ರಂದು ಬೆಳಿಗ್ಗೆ 7 ರಿಂದ ಸಂಪ್ರೂಕ್ಸಣೆ, ಮಹಾಪೂಜೆ, ಮಹಾಮಂತ್ರಾಕ್ಸತೆ ವಾರ್ಷಿಕ ಪೂಜೆ ಸಂಪನ್ನಗೊಂಡಿತು,
ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನಡೆಯಲು ದೇವಸ್ಥಾನದ ಆಡಳಿತ ಪದಾಧಿಕಾರಿಗಳಾದ ಶೇಖರ್ ಪಿ ಶೆಟ್ಟಿ
(ಅಧ್ಯಕ್ಷ)ಆನಂದ್ ಸಿ ಸುವರ್ಣ
(ಉಪಾಧ್ಯಕ್ಷ)ಲಕ್ಷ್ಮಣ್ ಎಂ ಪೂಜಾರಿ
(ಗೌರವ ಪ್ರಧಾನ ಕಾರ್ಯದರ್ಶಿ)ಯೋಗೇಶ್ ಜಿ ಸಾಲಿಯಾನ್
(ಜೊತೆ ಕಾರ್ಯದರ್ಶಿ)
ದೀಪಕ್ ಕೆ ಪೂಜಾರಿ
(ಗೌರವ. ಖಜಾಂಚಿ)ಅಮಿತ ಶೆಟ್ಟಿ
(ಜೊತೆ ಖಜಾಂಚಿ)ADV ಸೌಮ್ಯ ಎಸ್ ಶೆಟ್ಟಿ
(ಆಂತರಿಕ ಲೆಕ್ಕ ಪರಿಶೋಧಕ)ಪ್ರಕಾಶ್ ವಿ ಅಮೀನ್
(ಭುವಜಿ)ಜಗದೀಶ್ ಎನ್ ಶೆಟ್ಟಿ
(ಸಹಾಯಕ ಭುವಜಿ) ಹಾಗೂ ಸಮಿತಿಯ ಜಯ ಕೆ ಪೂಜಾರಿ,
ಸುಂದರ್ ಎಸ್ ಪೂಜಾರಿ
ಚೆನ್ನಪ್ಪ ಎನ್ ಪೂಜಾರಿ
ಗಣೇಶ್ ಬಿ ಸಾಲಿಯಾನ್
ಜಯರಾಮ್ ಎನ್ ಮೆಂಡನ್
ಕರುಣಾಕರ್ ಎಂ ಅಮೀನ್
ಸಂತೋಷ್ ಕೆ ಪೂಜಾರಿ
ರವಿ ಎಂ ಅಮೀನ್
ಚಂದ್ರಶೇಖರ್ ಎ ಪೂಜಾರಿ
ಉಮೇಶ್ ಎಸ್ ಅಮೀನ್
ಸುರೇಶ್ ಬಿ ಇರ್ವತ್ತೂರು
ಶ್ಯಾಮ್ ನಾಯಕ್
ರಾಜೀವಿ ಕೆ ಪೂಜಾರಿ
ವಿಮಲಾ ಎಸ್ ಕೋಟ್ಯಾನ್
ಸುಮತಿ ಜಿ ಮೂಲ್ಯ
ವೀಣಾ ಸಿ ಪೂಜಾರಿ
ಪ್ರಭಾತ ಆರ್ ಹೆಗಡೆ
ಶೋಭಾ ಪಿ ಕೋಟಿಯನ್
ಸುನಿತಾ ಎ ಸುವರ್ಣ
ಉಷಾ ಡಿ ಪೂಜಾರಿ
ಪ್ರದ್ನ್ಯಾ ಪಿ ಕೋಟ್ಯಾನ್,
ಮಲ್ಲಿಕಾ ಎಸ್ ಪೂಜಾರಿ,
ಅಂಕಿತಾ ವೈ ಸಾಲಿಯಾನ್,
ಶಶಿಕಲಾ ಎಸ್ ಕರ್ಕೇರ,
ಸವಿತಾ ಎಸ್ ಕುಂದರ್, ಮತ್ತಿತರ ಸದಸ್ಯರು ಸಹಕರಿಸಿದರು,
ಬೆಳಗ್ಗಿನಿಂದಲೇ ಶ್ರೀ ಕ್ಷೇತ್ರಕ್ಕೆ ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರೀ ದೇವರ ಪ್ರಸಾದ ಹಾಗೂ ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು