23.5 C
Karnataka
April 4, 2025
ಪ್ರಕಟಣೆ

ಫೆ.25 : ಗೋರೆಗಾಂವ್ ಕರ್ನಾಟಕ ಸಂಘ 63ನೇ ನಾಡಹಬ್ಬ, ವಿಚಾರ ಗೋಷ್ಠಿ.



ಮುಂಬೈ ಕನ್ನಡಿಗರ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಗೋರೆಗಾಂವ್ ಕನ್ನಡ ಸಂಘದ ಆಶ್ರಯದಲ್ಲಿ 63ನೇ ನಾಡ ಹಬ್ಬ ಸಮಾರಂಭವು ಫೆಬ್ರವರಿ 25ರಂದು, ರವಿವಾರ, ಗೋರೆಗಾಂವ್ ಪೂರ್ವ ಜಯಪ್ರಕಾಶ್ ನಗರದ ನಂದ ದೀಪ ಹೈಸ್ಕೂಲ್ ನ ಸಭಾಗ್ರಹದಲ್ಲಿ ಕರ್ಮಯೋಗಿ ಜಯ ಸುವರ್ಣ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 10:30 ಗಂಟೆಗೆ ಸಮಾರಂಭವನ್ನು ಸಾಯಿ ಪ್ಯಾಲೇಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ರವಿ ಎಸ್ ಶೆಟ್ಟಿ ಅವರು ಉದ್ಘಾಟಿಸಲಿರುವರು.
ಈ ಸಂದರ್ಭ ಸುರೇಕಾ ಶೆಟ್ಟಿಯವರ “ಮುಂಬೈಯಲ್ಲಿ ಕನ್ನಡದ ಕಂಪು ಸೂಸುವ ಗೋರೆಗಾಂವ್ ಕರ್ನಾಟಕ ಸಂಘ” ಕೃತಿಯನ್ನು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ ಎನ್ ಉಪಾಧ್ಯ ಅವರು ಲೋಕಾರ್ಪಣೆಗೊಳಿಸಲಿರುವರು.
ತ್ರಿಕೋನ್ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಅನಿಲ್ ಶೆಟ್ಟಿ ಅವರು ಸಂಘದ ಮುಖವಾಣಿ ‘ಮುಂಬೆಳಕು ‘ ಬಿಡುಗಡೆ ಮಾಡಲಿರುವರು.
ಅತಿಥಿ ಅಭ್ಯಾಗತರಾಗಿ ಸಾಯಿಕೇರ್ ಲಾಜಿಸ್ಟಿಕ್ಸ್ ನ ಸಿಎಂಡಿ ಸುರೇಂದ್ರ ಎ ಪೂಜಾರಿ ಉಪಸ್ಥಿತರಿವರು.
ಆ ಬಳಿಕ ಸಂಘ ಸಂಸ್ಥೆಗಳಲ್ಲಿ ಯುವಕರ ಪಾತ್ರ -ಅಂದು -ಇಂದು -ನಾಳೆ ವಿಷಯದ ಕುರಿತು ವಿಚಾರಗೋಷ್ಠಿಯು ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ್ ಡಿ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಬಾಂಬೆ ಬಂಟ್ಸ್ ನ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಮಲಾಡ್ ಕನ್ನಡ ಸಂಘದ ಅಧ್ಯಕ್ಷ ನ್ಯಾಯವಾದಿ ಜಗದೀಶ್ ಶೆಟ್ಟಿ ಅತಿಥಿ ಅಭ್ಯಾಗತರಾಗಿರುವರು.
ಮೊಗವೀರ ಮಾಸ ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ, ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಕೆ ಹೆಜ್ಮಾಡಿ, ಉದಯವಾಣಿ ಪತ್ರಿಕೆಯ ಉಪಮುಖ್ಯ ಸಹಾಯಕ ಸಂಪಾದಕ ಡಾ. ದಿನೇಶ್ ಶೆಟ್ಟಿ ರೇಂಜಾಳ ಉಪನ್ಯಾಸಕರಾಗಿ ತಮ್ಮ ವಿಚಾರವನ್ನು ಮಂಡಿಸಲಿರುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ವಹಿಸಲಿರುವರು. ಅತಿಥಿ ಅಭಾಗ್ಯಾತರುಗಳಾಗಿ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ಜಿತೇಂದ್ರ ಜಿ ಗೌಡ, ಮೂಳೆತಜ್ಞ ಡಾ. ಗೌತಮ್ ಎಂ ಶೆಟ್ಟಿ, ಎಚ್ ಡಿ ಎಫ್ ಸಿ ಬ್ಯಾಂಕ್ ನ ಹಿರಿಯ ಉಪಕಾರ್ಯಧ್ಯಕ್ಷ ಶಂಕರ್ ಕೋಟ್ಯಾನ್ ಉಪಸ್ಥಿತರಿರುವರು.
ಸಂಘದ ಉಪ ವಿಭಾಗ ಮತ್ತು ಮುಂಬೈಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.
ಮಧ್ಯಾಹ್ನ 1:45 ರಿಂದ 3:30ರ ತನಕ ಸದಸ್ಯರಿಂದ “ಶ್ರೀ ಕೃಷ್ಣ ರಾಯಭಾರ” ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ.
ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ಮಾರ್ನಾಡ್ ಅವರ ಪ್ರಯೋಜಕತ್ವದಲ್ಲಿ ನಡೆಯಲಿರುವ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅಶೋಕ್ ವಳದೂರು,ಲೀಲ ಗಣೇಶ್ ಪೂಜಾರಿ,ವಿಜಯಲಕ್ಷ್ಮಿ ಪೂಜಾರಿ,ಪ್ರಕಾಶ್ ಪಣಿಯೂರು, ವಾಸುದೇವ ಮಾರ್ನಾಡ್, ನಾಗೇಶ್ ಪೊಳಲಿ ಅರ್ಥದಾರಿಗಳಾಗಿ ಭಾಗವಹಿಸಲಿರುವರು.
63ನೇ ನಾಡಹಬ್ಬ ಸಮಾರಂಭಕ್ಕೆ ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್, ಗೌರವ ಕೋಶಧಿಕಾರಿ ಆನಂದ ಶೆಟ್ಟಿ ಹಾಗೂ ಪಾರುಪತ್ಯಗಾರರಾದ ಸುರೇಂದ್ರ ಸಾಲ್ಯಾನ್, ಜಿ.ಟಿ ಆಚಾರ್ಯ, ದೇವಲ್ಕುಂದ ಭಾಸ್ಕರ ಶೆಟ್ಟಿ ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

Related posts

ಮಾ.8. ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಆಚರಣೆ

Mumbai News Desk

ಕುಲಾಲ ಸಂಘ ಮುಂಬಯಿ, ಮಾ.8ಕ್ಕೆ ಕುಲಾಲ ಭವನ ಮಂಗಳೂರು, ಇದರ ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ.

Mumbai News Desk

ಡಿ.3ರಂದು ಮುಂಬೈಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಷಷ್ಠಿಯಬ್ದ ಮಹೋತ್ಸವ.

Mumbai News Desk

ವಿಜಯಕುಮಾರ್ ಕೊಡಿಯಾಲ್ ಬೈಲ್ ರಿಗೆ ರಂಗಚಾವಡಿ ಪ್ರಶಸ್ತಿ

Mumbai News Desk

ಬೊರಿವಿಲಿ ಶ್ರೀ ಮಹೀಷಮರ್ದಿನಿ ದೇವಸ್ಥಾನ ದಲ್ಲಿ ಶ್ರೀ ರಾಮ ಪ್ರತಿಷ್ಠಾ ಮಹೋತ್ಸವ

Mumbai News Desk

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ : ಮಾ. 8ರಿಂದ 10ನೇ ವಾರ್ಷಿಕೋತ್ಸವ

Mumbai News Desk