
ಚಿತ್ರ, ವರದಿ : ಧನಂಜಯ ಪೂಜಾರಿ
ಮುಂಬಯಿ ಉಪನಗರ ಭಾಂಡುಪ್ ಪಶ್ಚಿಮದ ಬ್ಯಾಂಕ್ ಆಫ್ ಬರೋಡ ಸ್ಟಾಪ್ ಕ್ವಾರ್ಟರ್ಸ್ ನ ಹತ್ತಿರದ ಶ್ರೀ ಶನೀಶ್ವರ ಭಕ್ತ ವೃಂದ ಮಿತ್ರ ಮಂಡಳಿಯ ಪಿಂಪಾಲೇಶ್ವರ ಮಹಾದೇವ ಮಂದಿರದ ಜೀರ್ಣೋದ್ಧಾರದ ಭವ್ಯ ಉದ್ಘಾಟನ ಸಮಾರಂಭ ಅಷ್ಟಬಂಧ ಬ್ರಹ್ಮಕಲಶೋತ್ಸವ ಕುಂಬಾಭಿಷೇಕ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಫೆಬ್ರವರಿ 19 ನೇ ಸೋಮವಾರ ದಿಂದ ಫೆಬ್ರವರಿ 24 ರ ಶನಿವಾರದ ವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯುತ್ತಿದ್ದು ಮೊದಲನೆ ದಿನ ಫೆಬ್ರವರಿ 19 ರ ಸೋಮವಾರ ಸಂಜೆ ಪುರೋಹಿತೆರಾದ ರಮಣಿ ಶರ್ಮಾ ಹಾಗೂ ಶ್ರೀರಾಮ್ ಶರ್ಮಾ ಇವರ ನೇತೃತ್ವದಲ್ಲಿ ಗಣಪತಿ ಪೂಜೆ, ವಾಸ್ತು ಪೂಜೆ, ತೋರಣ ಪ್ರತಿಷ್ಠೆ, ಉಗ್ರಾಣ ಪೂಜೆ, ಹೋಮ, ನಡೆಯಿತು. ಅನೇಕ ಭಕ್ತರು ಈ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.






.
ರಾತ್ರಿ ಶ್ರೀ ಕೃಷ್ಣ ಪ್ರಸಾದಿತ ಭಜನಾ ಮಂಡಳಿ, ಶ್ರೀ ನಿತ್ಯಾನಂದ ಮಂದಿರ, ಭಾಂಡುಪ್ ಇವರಿಂದ ಭಜನೆ ನಡೆಯಿತು.










ಗೌರವ ಅಧ್ಯಕ್ಷರಾದ ಶ್ಯಾಮ್ ಪ್ಯಾರೆ ಯಾದವ್, ಅಧ್ಯಕ್ಷರಾದ ಕಿಶೋರ್ ಅರ್ ಸಾಲ್ಯಾನ್, ಉಪಾಧ್ಯಕ್ಷರಾದ ನಿತಿನ್ ಸಾವಂತ್, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕೆ ಸಾಲ್ಯಾನ್, ಕೋಶಾಧಿಕಾರಿ ಕಿಶೋರ್ ಎನ್ ಬಂಗೇರ, ಸ್ಥಾಪಕ ಸದಸ್ಯರಾದ ಸದಾನಂದ ಬಂಗೇರ, ನಾರಾಯಣ ಸುವರ್ಣ, ಸಿ ಲಕ್ಷ್ಮಣ್, ಹಾಗೂ ಎಲ್ಲಾ ಸದಸ್ಯರು ಪೂಜೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.