
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಮೊಗವೀರ ಮಹಿಳೆಯರಿಗಾಗಿ ಫೆ 18ರಂದು ಮೊಗವೀರ ವ್ಯವಸ್ಥಾಪಕ ಮಂಡಳಿ, ಡೊಂಬಿವಲಿ ಶಾಖೆಯ ಸಭಾಗ್ರಹದಲ್ಲಿ ಹೂವಿನ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಬೆಳಿಗ್ಗೆ 9 ಗಂಟೆಗೆ ಸಂಘದ ಕಚೇರಿಯಲ್ಲಿ ಕುಲಮಾತೆ ಶ್ರೀ ಮಹಿಷಾಸುರ ಮರ್ದಿನಿ ದೇವಿಗೆ ಪೂಜೆ ಸಲ್ಲಿಸಿ ನಂತರ ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆಯ ಸಭಾಗ್ರಹದಲ್ಲಿ ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಅಧ್ಯಕ್ಷರಾದ ರಾಜು A ಮೊಗವೀರ ತಗ್ಗರ್ಸೆ ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಯೋಗಿನಿ ಸುಕುಮಾರ್ ಶೆಟ್ಟಿ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ) ಮತ್ತು ಶ್ರೀಮತಿ ಗೀತಾ ಶೇಖರ್ ಮೆಂಡನ್ ( ಮಹಿಳಾ ವಿಭಾಗ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಲಿ ಶಾಖೆ) ಜೊತೆಗೆ ಸಂಘದ ಮುಖ್ಯ ಕಚೇರಿಯಿಂದ ಆಗಮಿಸಿದ ಗೌರವ ಪ್ರಧಾನ ಕಾರ್ಯದರ್ಶಿಯವರಾದ ಗಣೇಶ್ ಮೆಂಡನ್ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾದ ಯೋಗಿನಿ ಶೆಟ್ಟಿಯವರು ಮಾತಾಡುತ್ತ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಇದ್ದಾರೆ, ನಾವು ಅವಕಾಶ ಸಿಕ್ಕಿದಾಗ ಕಲೆ, ಸಾಹಿತ್ಯ ಇವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇದೀಗ ಪ್ರತಿಯೊಂದು ಸಂಘದಲ್ಲೂ ಕೂಡ ಮಹಿಳೆಯರ ಪಾತ್ರ ಪ್ರಧಾನವಾಗಿದೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಡೊಂಬಿವಲಿ ಸ್ಥಳೀಯ ಸಮಿತಿ ಆಯೋಜಿಸಿದ ಮಹಿಳೆಯರ ರಂಗೋಲಿ ಸ್ಪರ್ಧೆಗೆ ಶುಭವನ್ನು ಕೋರಿದರು.
ಗೌರವ ಪ್ರಧಾನ ಕಾರ್ಯದರ್ಶಿಯವರಾದ ಗಣೇಶ್ ಮೆಂಡನ್ ರವರು ಮಾತನಾಡುತ್ತ ಸಂಘದ ಶಾಖೆಯ ಕಾರ್ಯ ಚಟುವಟಿಕೆಗಳು ಹೀಗೆ ನಿರಂತರ ನಡೆಯುತ್ತಿರಲಿ, ಮುಖ್ಯ ಕಚೇರಿಯಿಂದ ಸಂಪೂರ್ಣ ಸಹಕಾರ ದೊರಕಲಿದೆ ಎಂದು ನುಡಿಯುತ್ತ ಬಂದಿರುವ ಎಲ್ಲಾ ಸ್ಪರ್ಧಾಳುಗಳಿಗೆ ಶುಭವನ್ನು ಕೋರಿದರು.






ಅಧ್ಯಕ್ಷರಾದ ರಾಜು ಮೊಗವೀರರವರು ಮಾತಾಡುತ್ತ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಒಟ್ಟು ಗೂಡಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು ಮತ್ತು ನಾವೆಲ್ಲರೂ ಆತುರದಿಂದ ಕಾಯುತಿರುವ ಮಾರ್ಚ್ ತಾ.3 ರ ಕುಂದರಂಜನಿ 2024 ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೊಗವೀರ ಬಂಧುಗಳು ಬಂದು ಯಶಸ್ವೀಗೊಳಿಸಬೇಕೆಂದು ಕೇಳುತ್ತಾ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಶುಭವನ್ನು ಕೋರಿದರು.
ಸುಮಾರು 17ಕ್ಕೂ ಹೆಚ್ಚು ಮಹಿಳೆಯರು ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಸ್ಪರ್ಧೆಯ ಮುಂದಾಳತ್ವವನ್ನು ಸಂಘದ ಮಹಿಳಾ ವಿಭಾಗದ ನಿಶಾ ಮೆಂಡನ್ ರವರು ವಹಿಸಿ ನಡೆಸಿಕೊಟ್ಟರು.
ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಶ್ರೀಮತಿ ಪುಷ್ಪ ಭಾಸ್ಕರ್ ಕಾಂಚನ್ ಹಾಗೂ ಸಂಘದ ಮಹಿಳಾ ವಿಭಾಗದಿಂದ ಆಗಮಿಸಿದ ಕಾರ್ಯದರ್ಶಿ ವಸಂತಿ ಕುಂದರ್ ಮತ್ತು ಕೋಶಾಧಿಕಾರಿ ವನಿತಾ ಸುರೇಶ ತೋಳಾರ್ ರವರ ಹಸ್ತದಿಂದ ಕಿರು ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.
ಹೂವಿನ ರಂಗೋಲಿ ಸ್ಪರ್ಧೆಯ ಫಲಿತಾಂಶ ಹೀಗಿದೆ :
1st prize : ಅನಿತಾ ಸುಭಾಷ್ ಪುತ್ರನ್
2nd Prize : ರತಿ S ನಾಯ್ಕ್
3rd Prize : ಸುಮತಿ ರಾಜು ಮೊಗವೀರ ದೊಂಬೆ
Consolation Prize : ಗಾಯತ್ರಿ ಮೊಗವೀರ.
ಸ್ಪರ್ಧೆಯ ಫಲಿತಾಂಶದ ಬಹುಮಾನವನ್ನು ಮಾರ್ಚ್ 3, 2024 ಆದಿತ್ಯವಾರ ನಡೆಯಲಿರುವ ಕುಂದರಂಜನಿ 2024 ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಸಭೆಗೆ ತಿಳಿಸಲಾಯಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ರಾಜು A ಮೊಗವೀರ ತಗ್ಗರ್ಸೆ, ಉಪಾಧ್ಯಕ್ಷರಾದ ಬಾಬು ಕೆ ಮೊಗವೀರ, ಕಾರ್ಯದರ್ಶಿ ಸಂತೋಷ B ಪುತ್ರನ್, ಕೋಶಾಧಿಕಾರಿ ಶೇಖರ್ ಎಸ್ ನಾಯ್ಕ್, ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಯೋಗಿನಿ ಸುಕುಮಾರ್ ಶೆಟ್ಟಿ (ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ) ಮತ್ತು ಶ್ರೀಮತಿ ಗೀತಾ ಶೇಖರ್ ಮೆಂಡನ್ ( ಮಹಿಳಾ ವಿಭಾಗ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಲಿ ಶಾಖೆ) ಪ್ರೋಗ್ರಾಮ್ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಶ್ರೀಯಾನ್, ಗೌರವ ಪ್ರಧಾನ ಕಾರ್ಯದರ್ಶಿಯವರಾದ ಗಣೇಶ್ ಮೆಂಡನ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀಯುತ ಭಾಸ್ಕರ್ ಕಾಂಚನ್ ರವರ ಧರ್ಮಪತ್ನಿ ಪುಷ್ಪ ಭಾಸ್ಕರ್ ಕಾಂಚನ್ ರವರನ್ನು ಹಾಗೂ ಮುಖ್ಯ ಕಚೇರಿಯ ಸೇವಾ ದಳದ ದಿನೇಶ್ ಹೆಮ್ಮಾಡಿಯವರನ್ನು ಪುಷ್ಪಗುಚ್ಚವನ್ನು ನೀಡಿ ಗೌರವಿಸಲಾಯಿತು.
ಹಾಗೇನೇ ಕಾರ್ಯಕ್ರಮದ ನಿರೂಪಣೆಯನ್ನು ಡೊಂಬಿವಲಿ ಪರಿಸರದ ಉತ್ತಮ ಸಂಘಟಕ ವಸಂತ್ ಸುವರ್ಣ ರವರು ಬಹಳ ಅಚ್ಚು ಕಟ್ಟಾಗಿ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಎಲ್ಲಾ ಸಭಿಕರಿಗೆ ಸಮಿತಿಯವರು ಲಘು ಉಪಹಾರದ ವ್ಯವಸ್ಥೆ ಮಾಡಿದರು. ಕೊನೆಗೆ ಕಾರ್ಯದರ್ಶಿ ಸಂತೋಷ ಪುತ್ರನ್ ರವರು ಮೊಗವೀರ ಬಾಂಧವರಿಗೆ ವಂದನೆಗಳನ್ನು ಅರ್ಪಿಸಿದರು.