
ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ, ಲೋಕಸಭೆಯ ಮಾಜಿ ಸ್ಪೀಕರ್, ಶಿವ ಸೇನಾ ನಾಯಕ ಮನೋಹರ್ ಜೋಶಿ ಅವರು ಇಂದು ಬೆಳ್ಳಿಗ್ಗೆ (ಫೆ.23) ನಿಧನರಾಗಿದ್ದಾರೆ.
86 ವರ್ಷದ ಜೋಶಿ ಅವರು ಅಸೌಖ್ಯದ ನಿಮ್ಮಿತ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕೆತ್ಸೆಗೆ ಸ್ಪಂದಿಸದ ಜೋಶಿ ಅವರು ಇಂದು ಬೆಳ್ಳಿಗೆ 5 ಗಂಟೆಗೆ ಇಹಲೋಕ ತ್ಯಜಿಸಿದರು, ಎಂದು ಅವರ ಕುಟುಂಬಸ್ತರು ತಿಳಿಸಿದ್ದಾರೆ.
ಶಿಕ್ಷಕರಾಗಿ ತನ್ನ ವೃತ್ತಿ ಜೀವನ ಆರಂಭಿಸಿದ ಮನೋಹರ್ ಜೋಶಿ ಶಿವಸೇನೆಗೆ ಸೇರ್ಪಡೆಯಾಗಿ ರಾಜಕೀಯ ರಂಗ ಪ್ರವೇಶಿಸಿದ್ದರು. ಬಳಿಕ ಮುಖ್ಯಮಂತ್ರಿ ಆಗಿ 1995 ರಿಂದ 1999ರ ತನಕ ಸೇವೆ ಸಲ್ಲಿಸಿದ್ದರು.
2002 ರಿಂದ 2004ರ ತನಕ ಲೋಕಸಭಾ ಸ್ಪೀಕರ್ ಆಗಿ ಅವರು ಕಾರ್ಯ ನಿರ್ವಹಿಸಿದ್ದರು.ಶಿವಸೇನೆಯ ಸುಪ್ರೀಮೋ ದಿ. ಬಾಳಸಾಹೇಬ್ ಠಾಕ್ರೆ ಅವರ ಆಪ್ತರಾಗಿ ಮನೋಹರ್ ಜೋಶಿ ಗುರುತಿಸಿ ಕೊಂಡಿದ್ದರು.
ಅವರ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈ ನ ಶಿವಾಜಿ ಪಾರ್ಕ್ ನ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಸ್ತರು ತಿಳಿಸಿದ್ದಾರೆ.