
ಡೊಂಬಿವಲಿ ಅಜ್ಜೆಗಾಂವ್ ತಿಲಕ ಕಾಲೇಜ ಹತ್ತಿರದ
ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಮಹಾಗಣಪತಿ, ಜೈ ಭವಾನಿ ಹಾಗೂ ಶನೀಶ್ವರ ಅಷ್ಟಬಂಧ ಪುನರ್ ಪ್ರತಿಷ್ಠಾ ಮಹೋತ್ಸವವು 29-02-2024ನೇ ಗುರುವಾರ ಸಂಜೆ 6 ಗಂಟೆಯಿಂದ ತಾ. 02.03.2024ರ ಶನಿವಾರ ರಾತ್ರಿ 9ಗಂಟೆಯ ತನಕ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ ಭಟ್ ಕಾನಂಗಿಯವರ ನೇತೃತ್ವದಲ್ಲಿ ಜರಗಲಿರುವುದು.
ಕಾರ್ಯಕ್ರಮ :
29.02.2024 ಗುರುವಾರ
ಸಂಜೆ 6.30 ರಿಂದ ವಾಸ್ತುಹೋಮ, ವಾಸ್ತುಪೂಜೆ, ಪ್ರಕಾರ ಬಲಿ, ಬಿಂಭ ಶುದ್ಧಿ
01.03.2024 ಶುಕ್ರವಾರ
ಬೆಳಿಗ್ಗೆ 6.30 ರಿಂದ ತೋರಣ ಮುಹೂರ್ತ, ಪುಣ್ಯಾಹವಾಚನ, ನವಕ ಪ್ರದಾನ ಹೋಮ, ಗಣಹೋಮ, ಬಿಂಬ ಶುದ್ಧಿ ನಂತರ ಮಹಾಗಣಪತಿ, ಜೈ ಭವಾನಿ ಹಾಗೂ ಶನೀಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ. ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ನವಕ ಕಲಶಾಭಿಷೇಕ ಹಾಗೂ ಅಷ್ಟಬಂಧ, ನಂತರ ದೇವರಿಗೆ ಪ್ರಭಾವಳಿ ಅರ್ಪಣೆ, ಅಲಂಕಾರ ಪೂಜೆ, ಅಷ್ಟೋತ್ತರ ಸೇವೆ ಹಾಗೂ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ತದನಂತರ ಮಹಾಪ್ರಸಾದ.
ಭಜನಾ ಕಾರ್ಯಕ್ರಮ
ಮಧ್ಯಾಹ್ನ 2ರಿಂದ 3 ಶ್ರೀ ಜೈ ಭವಾನಿ ಶನೀಶ್ವರ ಮಂದಿರ,ಡೊಂಬಿವಲಿ (ಪೂ.)
ಮಧ್ಯಾಹ್ನ 3ರಿಂದ 4 ಶ್ರೀ ಭ್ರಮರಾಂಬಿಕೆ ಭಜನಾ ಮಂಡಳಿ, ಡೊಂಬಿವಲಿ (ಪೂ.)
ಸಂಜೆ 4ರಿಂದ 5 ಶ್ರೀ ರಾಧಾಕೃಷ್ಣ ಮತ್ತು ಶನೀಶ್ವರ ಮಂದಿರ, ಡೊಂಬಿವಲಿ (ಪ.)
ಸಂಜೆ 5ರಿಂದ 6 ಶ್ರೀ ಮಹಾವಿಷ್ಣು ಮಂದಿರ,
ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ, ಡೊಂಬಿವಲಿ (ಪ.)
ಸಂಜೆ 6ರಿಂದ 8 ಮಹಾ ರಂಗಪೂಜೆ
ರಾತ್ರಿ 8 ರಿಂದ 9.00 ಧಾರ್ಮಿಕ ಸಭಾ ಕಾರ್ಯಕ್ರಮ ತದನಂತರ ಮಹಾಪ್ರಸಾದ.
02.03.2024 ಶನಿವಾರ
ಬೆಳಿಗ್ಗೆ 6.00 ರಿಂದ ಪ್ರಾತಃಕಾಲ ಪೂಜೆ, ಅಲಂಕಾರ ಪೂಜೆ
9 ರಿಂದ 12 ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಮಹಾ ಮಂಗಳಾರತಿ, ತೀರ್ಥಪ್ರಸಾದ
ಮಧ್ಯಾಹ್ನ 1.00 ಗಂಟೆಗೆ ಶ್ರೀ ಶನಿದೇವರ ಕಲಶ ಪ್ರತಿಷ್ಠೆ ಹಾಗೂ ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣ ಪೂಜೆ (ತಾಳಮದ್ದಳೆ ಶೈಲಿಯಲ್ಲಿ)
ರಾತ್ರಿ 8.30 ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಮಹಾ ಪ್ರಸಾದ ನಡೆಯಲಿದೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯಗಳಲ್ಲಿ ಭಾಗಿಗಳಾಗಿ ತನು ಮನ ಧನಗಳೊಂದಿಗೆ ಸಹಕರಿಸಿ ಶ್ರೀದೇವರ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ಅಧ್ಯಕ್ಷರಾದ ರವಿ ಎಂ.ಸುವರ್ಣ, ಕಾರ್ಯದರ್ಶಿ ಸೂರಜ್ ಡಿ. ಸಪಲಿಗ ಕೋಶಾಧಿಕಾರಿ ರಂಜಿತ್ ಕೆ. ಶೆಟ್ಟಿ ಕಾರ್ಯಕಾರಿ ಸಮಿತಿಯ ಸದಸ್ಯರು, ಸರ್ವ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವವಿಭಾಗದ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.