April 5, 2025
ಮುಂಬಯಿ

ಮಲಾಡ್ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ,



ಸನಾತನ ಹಿಂದೂ ಧರ್ಮದ ಜಾಗ್ರತವಾಗ ಬೇಕಾದರೆ ಧಾರ್ಮಿಕ ವಿಚಾರಗಳನ್ನು ಹೆಚ್ಚು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ನ್ಯಾ. ಜಗನ್ನಾಥ್  ಶೆಟ್ಟಿ ಪಣಿಯೂರು

 ಮುಂಬಯಿ :  ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ವತಿಯಿಂದ ಫೆ. ೧೮ ರಂದು ಅರಸಿನ ಕುಂಕುಮ ಕಾರ್ಯಕ್ರಮವು ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ಯವರ ಅಧ್ಯಕ್ಷತೆಯಲ್ಲಿ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ದಿನೇಶ್ ಕುಲಾಲ್ ಇವರ ನೇತೃತ್ವದಲ್ಲಿ, ಮಲಾಡ್ ಪೂರ್ವ ಉತ್ಕರ್ಷ ವಿದ್ಯಾ ಮಂದಿರದಲ್ಲಿ ಜರಗಿತು.

ನ್ಯಾ, ಜಗನ್ನಾಥ್ ಶೆಟ್ಟಿ , ಮತ್ತು ಮೋಹಿನಿ ಜಗನ್ನಾಥ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ನೀಡಿದರು 

ಬಳಿಕ ಮಹಿಳಾ ವಿಭಾಗದ ಸದಸ್ಯರಿಂದ ಭಜನೆ ಯುವ ವಿಭಾಗದ ಸದಸ್ಯರಿಂದ ಕುಣಿತ ಭಜನೆ ನಡೆಯಿತು, ಅನಂತರಾ ಶ್ರೀ ದೇವರಿಗೆ ಮಹಾಮಂಗಳಾರತಿಯನ್ನು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನ ಕುಲಾಲ್, ವಿಶೇಷ ಆಮಂತ್ರಿತ ಅತಿಥಿಗಳಾದ ಪ್ರಭ ಸಿಎ ಸುರೇಂದ್ರ ಶೆಟ್ಟಿ, ಅಕ್ಷತಾ ಸುರೇಂದ್ರ ಶೆಟ್ಟಿ ಹೊಸ್ಮಾರು, ಲಲಿತಾ ಭಂಡಾರಿ,ರಾಜಶ್ರೀ ಸಂತೋಷ್ ಪೂಜಾರಿ, ಮಲಾಡ್ ಶನಿ ಮಂದಿರದ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಸೀತಾಲ್ ಕೋಟ್ಯಾನ್, ವಿಜಯ ಸುರೇಂದ್ರ ಪೂಜಾರಿ, ಶಾರದಾ ಪೂಜಾರಿ ,ಪುಷ್ಪ ಆಚಾರ್ಯ ಮತ್ತಿತರರು ಮಹಾರತಿಯನ್ನು ನಡೆಸಿದರು,

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ತಬುಲ ಶಿಬಿರಕ್ಕೆ ಶಿಬಿರವನ್ನು ಉದ್ಘಾಟಿಸಿದ   ನ್ಯಾಯವಾದಿ ಜಗನ್ನಾಥ್ ಶೆಟ್ಟಿಪಣಿಯೂರುಬಳಿಕಮಾತನಾಡುತ್ತಾ ಮಹಿಳೆಯರಲ್ಲಿ ಧರ್ಮ ಜಾಗೃತಿಯನ್ನು  ಹಳದಿ ಕುಂಕುಮದ ಕಾರ್ಯಕ್ರಮ ಮೂಲಕ ನಡೆಯುತ್ತಿದೆ, ಪರಿಸರದ ಮಹಿಳೆಯರು ಈ ಕಾರ್ಯಕ್ರಮದ ಮೂಲಕ ದೊಡ್ಡ ಮಟ್ಟದಲ್ಲಿ ಸಂಘಟಿಕರಾಗಿದ್ದಾರೆ. ರಾಮನ ಯುಗ ಪ್ರಾರಂಭವಾಗಿದೆ ಸನಾತನ ಹಿಂದೂ ಧರ್ಮದ ಜಾಗ್ರತವಾಗ ಬೇಕಾದರೆ ಧಾರ್ಮಿಕ ವಿಚಾರಗಳನ್ನು ಹೆಚ್ಚು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ,ಪೂಜಾ ಸಮಿತಿಯ ಮಹಿಳಾ ವಿಭಾಗ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಮಹಿಳೆಯರ ಅನ್ನು ಒಗ್ಗಟ್ಟಿಸಿದೆ ಎಂದು ನುಡಿದರು

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ರತ್ನಾ ದಿನೇಶ್ ಕುಲಾಲ್ ಮಾತನಾಡುತ್ತಾ ನಾವು ಇದೇ ರೀತಿ ಒಗ್ಗಟ್ಟಿನಿಂದ ಸಮಿತಿಯ ಎಲ್ಲಾ ಕಾರ್ಯಕ್ರಮದಲ್ಲಿ ಸೇರೋಣ, ಸಾಮಾಜಿಕ ಧಾರ್ಮಿಕ ಸೇವೆಯ ಅನುಭವ ಪಡೆಯಲು ಇದು ಸರಿಯಾದ ವೇದಿಕೆ. ಮಹಿಳೆಯರು ಕೇವಲ ಮನೆ ಕೆಲಸ ಮಾತ್ರ ಅಲ್ಲ ಸಮಾಜ ಸೇವೆಯನ್ನು ಮಾಡುತ್ತಿರುವುದನ್ನು ಇಲ್ಲಿ ನಾವು ಕಾಣಬಹುದು, ಇದು ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯಕ್ರಮ ಎಂದರು.

ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ  ಆಚಾರ್ಯ

ಪ್ರಾಸ್ತಾವಿಕ ಮಾತುಗಳನ್ನಾಡಿ ಮಹಿಳಾ ವಿಭಾಗದ ಕಾರ್ಯ ಚಟುವಟಿಕೆಗಳನ್ನು ವಿಸ್ತಾರವಾಗಿ ತಿಳಿಸಿದರು,

ವಿದ್ಯಾ ಡಿ ಆಚಾರ್ಯ ಹಳದಿ ಕುಂಕುಮದ ಬಗ್ಗೆ ತಿಳಿಸಿದರು,

ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜಗನ್ನಾಥ್ ಮೆಂಡನ್, ಸಂದರ್ಭ ಉಚಿತವಾಗಿ ಮಾತನಾಡಿದರು,

ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುದೀಪ್ ಪೂಜಾರಿ ಮತ್ತು  ಲಾಸ್ಯ ಕುಲಾಲ್ ನಿರೂಪಿಸಿದರು,

ಯುವ ವಿಭಾಗದ ಸಂಚಾಲಕ ಡಾಕ್ಟರ್ ಶಶಿನ್ ಕೆ ಆಚಾರ್ಯ, ಜೊತೆ ಕಾರ್ಯದರ್ಶಿ ಪವನ್ ರಾವ್, ನಿಧಿ ನಾಯಕ್, ಹರ್ಷ ಕುಂದರ್ ಮತ್ತಿತರ ಯುವ ವಿಭಾಗದ ಸದಸ್ಯರಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದರು,

ಮಹಿಳಾ ವಿಭಾಗದಜೊತೆ ಕಾರ್ಯದರ್ಶಿ ಶೋಭಾ ಲಕ್ಷ್ಮಣರಾವ್, ಜೊತೆ ಕೋಶ ಧಿಕಾರಿ ನಲಿನಿ ಕರ್ಕೇರ ಕಾರ್ಯಕ್ರಮವನ್ನು ನಿರೂಪಿಸಿದರು,

ದಾನಿಗಳ ಯಾದಿಯನ್ನು ಉಪ ಕಾರ್ಯಾಧ್ಯಕ್ಷೆ ರಾದ ಗೀತಾ ಜೆ ಮೆಂಡನ್, ಸಂಧ್ಯಾ ಪ್ರಭು ಓದಿದರು,

 ಕೋಶಾಧಿಕಾರಿ ಶೀಲಾ ಎಂ ಪೂಜಾರಿ ಧನ್ಯವಾದ ನೀಡಿದರು,

ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿಶೇಷ ಹುಡುಗರೆಯನ್ನು “ಕೌಶಿಕಿ ಸಿಲ್ಕ್ ” ವಸಯಿ ಯವರು ಮೂರು  ಸೀರೆಯನ್ನು ಉಚಿತವಾಗಿ ನೀಡಿರುವರು, ಅದನ್ನು ಸಭೆಯಲ್ಲಿ ಲಕ್ಕಿ  ಗೂಪನ್ ಮೂಲಕ ಸೀರೆಯನ್ನು   ವಿಜೇತರಿಗೆ ಮಹಿಳಾ ವಿಭಾಗದ ಸಲಹಾ  ಸಮಿತಿಯ ಸದಸ್ಯರಾದ ಮೋಹಿನಿ ಜೆ ಶೆಟ್ಟಿ , ಕಾರ್ಯಾಧ್ಯಕ್ಷೆ ರತ್ನ ಕುಲಾಲ್, ಕಾರ್ಯದರ್ಶಿ ಶ್ರೀಮತಿ ಆಚಾರ್ಯ, ಕೋಶಧಿಕಾರಿ ಶೀಲಾ ಪೂಜಾರಿ  ,ಉಪಕಾರ್ಯಧ್ಯಕ್ಷರುಗಳಾದ ಗೀತಾ ಜೆ. ಮೆಂಡನ್, ಸಂಧ್ಯಾ ಪ್ರಭು ಮತ್ತು   , ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್,  ಜೊತೆ ಕೋಶಾಧಿಕಾರಿಕಾರಿಗಳಾದ ನಳಿನಿ ಪಿ ಕರ್ಕೇರ  ನೀಡಿ ಗೌರವಿಸಿದರು ,

ಕಾರ್ಯಕ್ರಮದ ಕೊನೆಯಲ್ಲಿ ಮಲಾಡನ ಉಡುಪಿ ಕ್ಯಾಟ್ರಗಿನ ಮಾಲಕ ದಿನೇಶ್ ಕಾಮತ್ ಅವರ ಪ್ರೀತಿ ಭೋಜನ ನಡೆಯಿತು,

ಕಾರ್ಯಕ್ರಮದ ಯಶಸ್ವಿಯಲ್ಲಿ ಯಶಸ್ವಿಯಲ್ಲಿ ವಿದ್ಯಾ ನಾಯಕ್, ಶೋಭಾ ಶಾಲಿಯನ್, ಪದ್ಮಾವತಿ ಪೂಜಾರಿ ,ಪುಷ್ಪಲತಾ ಸಾಲಿಯಾನ್, ಹರಿಣಾಕ್ಷಿ ಮೂಲ್ಯ, ರೇವತಿ ಪೂಜಾರಿ, ಅನುರಾಧ ಸಾಲ್ವಂಕರ್, ಜಯಂತಿ ಸಾಲಿಯಾನ್, ಸುಮಿತ್ರ ಡಿ ಪೂಜಾರಿ, ಕುಸುಮ ಶೆಟ್ಟಿ, ರತ್ನ ಪೂಜಾರಿ, ಶ್ರೀದೇವಿ ಆಚಾರ್ಯ, ಶೃತಿ ಎಸ್ ಪೂಜಾರಿ, ಸುನಂದ ವೈ ಬಂಗೇರ, ಪೂಜಾ ಸಮಿತಿಯ ಉಪಾಧ್ಯಕ್ಷ  ಕುಮಾರೇಶ್ ಆಚಾರ್ಯ, ಕೋಶ ಧಿಕಾರಿ ಜಗನ್ನಾಥ್ ಮೆಂಡನ್, ಜೊತೆ ಕಾರ್ಯದರ್ಶಿ ಸನತ್ ಪೂಜಾರಿ, ಲಕ್ಷ್ಮಣ ರಾವ್ , ದಿನೇಶ್ ಕಾಮತ್,ರಾಮ  ಪೂಜಾರಿ, ನಿತ್ಯಾನಂದ ಪೂಜಾರಿ, ಜಯ ಪೂಜಾರಿ,ಭೋಜ ಮೂಲ್ಯ, ಈಶ್ವರ್ ಕುಲಾಲ್, ಗೋಪಾಲ್ ಪೂಜಾರಿ, ನಿತ್ಯಾನಂದ ಕೋಟ್ಯಾನ್, ರಘುರಾಮ್ ನಾಯಕ್,

Related posts

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ, ಇದರ ದಶಮಾನೋತ್ಸವ ಕಾರ್ಯಕ್ರಮ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಅದ್ಧೂರಿ ಕ್ರೀಡಾ ಕೂಟ ದಂಗಲ್ 2024 ಸಮಾರೋಪ ಸಮಾರಂಭ

Mumbai News Desk

ಆಸರೆ ಸೇವಾ ಮಿತ್ರ ಬಳಗ ವಸಯಿ : ಇದರ ಉದ್ಘಾಟನಾ ಕಾರ್ಯಕ್ರಮ, ಮಕ್ಕಳ ಯಕ್ಷಗಾನ

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬೈ ಸಂಭ್ರಮೊಲ್ಲಸದ ರಜತ ಮಹೋತ್ಸವ ಸಮಾರಂಭ

Mumbai News Desk

ಗೋವಂಡಿ ಬೈಂಗನ್‌ವಾಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರದ 46 ನೇ ವಾರ್ಷಿಕೋತ್ಸವ

Mumbai News Desk

ಕರ್ನಾಟಕ ಮಹಾಮಂಡಲ ಮೀರಾ-ಭಾಯಂದರ್ – ಜಾಗತಿಕ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ