
ಗೋರೆಗಾಂವ್ ಕರ್ನಾಟಕ ಸಂಘ ನಾಡಿಗೆ ಮಾದರಿ- ಡಾ.ಜಿ ಎನ್ ಉಪಾಧ್ಯ,
ಚಿತ್ರ ವರದಿ : ವಾಣಿಪ್ರಸಾದ್ ಕರ್ಕೇರ ಕಾಪು
ಮುಂಬಯಿ : ಸಮಯಪ್ರಜ್ಞೆಯನ್ನು ಪಾಲಿಸುವ ಕಾರ್ಯ ಗೋರೆಗಾಂವ್ ಕರ್ನಾಟಕ ಸಂಘ ನಿರಂತರವಾಗಿ ಮಾಡುತ್ತಾ ಬಂದಿದೆ ಅದರ ಪರಿಪಾಲನೆಯನ್ನು ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಮುಂಬೈಯ ಬಹುತೇಕ ಸಂಘ ಸಂಸ್ಥೆಗಳು ಅಳವಡಿಸಿಕೊಂಡು ಬಂದಿದೆ, ಒಂದು ಊರಿಗೆ ಮಹತ್ವ ಬರೋದು ವ್ಯಕ್ತಿಗಳಿಂದ, ಸಂಘ ಸಂಸ್ಥೆಗಳ ಸ್ಮಾರಕಗಳಿಂದ, ಗೋರೆಗಾಂವ್ಅಂದಾಗ ನೆನಪಿಗೆ ಬರುವುದು ಜಯ ಸುವರ್ಣ,ಗೋರೆಗಾಂವ್ ಕರ್ನಾಟಕ ಸಂಘ, ಈ ವೇದಿಕೆಗೆ ಜಯ ಸುವರ್ಣರ ಹೆಸರು ಸಾರ್ಥಕ ಅವರು ಅವರ ವಿಚಾರಧಾರೆಗಳು ಚಿಂತನೆಗಳು ಶಾಶ್ವತವಾಗಿ ಪುಸ್ತಕದ ಮೂಲಕ ಉಳಿದಿದೆ ,ಇದೀಗ ಗೋರೆಗಾಂವ್ ಕರ್ನಾಟಕ ಸಂಘ ಸಾಧನೆಯನ್ನು ಸುರೇಖಾ ಶೆಟ್ಟಿಯವರು ಕೃತಿಯ ಮೂಲಕ ಪ್ರಕಟಿಸಿದ್ದು ಚಾರಿತ್ರಿಕ ಮಹತ್ವ ಬಂದಿದೆ. ಕೃತಿ ಲೋಕಾರ್ಪಣೆ ಮಾಡಲು ಕಾರಣರಾದ ಕರ್ನಾಟಕ ಸಂಘದ ಪ್ರತಿಯೊಬ್ಬರಿಗೂ ಮುಂಬಯಿ ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳು. ಈ ಕೃತಿಯಲ್ಲಿ ಸಂಘದ ಸಾಧನೆ ಬಗ್ಗೆ ತಿಳಿಸಲಾಗಿದ್ದು ಗೊರೆಗಾಂವ್ ಕರ್ನಾಟಕ ಸಂಘದಸಾಧನೆನಾಡಿಗೆಮಾದರಿಎಂದುಮುಂಬಯಿವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ ಎನ್ ಉಪಾಧ್ಯ ಅವರು ಹೇಳಿದರು,




2023ರ ಗಡಿನಾಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋರೆಗಾಂವ್ ಕರ್ನಾಟಕ ಸಂಘದ 63ನೇ ನಾಡಹಬ್ಬ ಸಮಾರಂಭ, ವಿಚಾರಗೋಷ್ಠಿ, ಕೃತಿ ಬಿಡುಗಡೆ ಕಾರ್ಯಕ್ರಮ ಫೆ. 25ರ ಗೋರೆಗಾಂವ್ ಪೂರ್ವ ಜಯಪ್ರಕಾಶ್ ನಗರದ ನಂದಾದೀಪ ಹೈಸ್ಕೂಲ್ ಸಭಾಗೃಹ ಇಲ್ಲಿ ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಕರ್ಮ ಯೋಗಿ ಜಯ ಸುವರ್ಣ ವೇದಿಕೆಯಲ್ಲಿ ಸುರೇಖಾ ಹರಿಪ್ರಸಾದ್ ಶೆಟ್ಟಿ ಯವರ ಮುಂಬೈಯಲ್ಲಿ ಕನ್ನಡದ ಕಂಪು ಸುಸುವ. ಗೋರೆಗಾಂವ್ ಕರ್ನಾಟಕ ಸಂಘ ವೆಂಬ ಕೃತಿಯನ್ನು ಬಿಡುಗಡೆ ಮಾಡಿದ ಅವರು ಸಂಘದ ಪ್ರಗತಿಗಾಗಿ ದುಡಿದ ಮಾಜಿ ಅಧ್ಯಕ್ಷರುಗಳನ್ನು ಸ್ಮರಿಸುತ್ತಾ, ಮುಂಬೈ ಮಹಾನಗರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಹಾಗೂ ಸಂಘಟನೆಗಳನ್ನು , ಹೋಟೆಲ್ ಗಳು ಮತ್ತು ಮಾಲಕರ ಪರಿಚಯ ಕೃತಿಗಳ ಮೂಲಕ ಸ್ಮರಿಸುವ ಅಗತ್ಯವಿದೆ ಎಂದರು.
ಸಾಯಿ ಪ್ಯಾಲೇಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ರವಿ ಎಸ್ ಶೆಟ್ಟಿ ಯವರು ಸಮಾರಂಭವನ್ನು ಉದ್ಘಾಟಿಸಿ ಸಮಾರಂಭಕ್ಕೆ ಶುಭ ಕೋರಿದರು.

ಅತಿಥಿಯಾಗಿ ಪಾಲ್ಗೊಂಡಿದತ್ರಿಕೋನ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಅನಿಲ್ ಶೆಟ್ಟಿ ಏಳಿ0ಜೆ ಯವರು ಸಂಘದ ವಾರ್ಷಿಕ ಸಂಚಿಕೆ ’ಮುಂಬೆಳಕು’ ಬಿಡುಗಡೆಗೊಳಿಸಿ ಮಾತನಾಡುತ್ತಾ 63 ವರ್ಷಗಳಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸೇವ ಕಾರ್ಯವನ್ನು ಈ ಸಂಘ ಮಾಡುತ್ತಾ ಬಂದಿದೆ ಯುವ ಸಮುದಾಯ ಸಂಘಟನೆಯಲ್ಲಿ ಪಾಲ್ಗೊಂಡಾಗ ಸಂಘ ಇನ್ನಷ್ಟು ಬಲಿಷ್ಠಗೊಳ್ಳುತ್ತದೆ, ಯಾವುದೇ ಒಂದು ಸಂಘ ಸಂಸ್ಥೆ ಮುನ್ನಡೆಸಲು ಅಷ್ಟು ಸುಲಭವಲ್ಲ ಆದರೆ ಸುದೀರ್ಘ ಕಾಲದಿಂದ ಈ ಸಂಘ ಸಮಾಜದಲ್ಲಿ ಉತ್ತಮ ಸೇವೆ ಮಾಡುತ್ತಿದೆ ಎಂದು ನುಡಿದರು,
ಸಾಯಿಕೇರ್ ಲಾಜಿಸ್ಟಿಕ್ಸ್ ಲಿ. ಸಿಎಂಡಿ ಸುರೇಂದ್ರ ಎ ಪೂಜಾರಿಯವರು ಅತಿಥಿಯಾಗಿ ಉಪಸ್ಥಿತರಿದ್ದು ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಕಾರಣ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿದವರನ್ನು ಗಣ್ಯರು ಕಾರಣರಾಗಿದ್ದಾರೆ, ಸಂಘಟನೆಯ ಮತ್ತು ಭಾಷೆಯ ಬಗ್ಗೆ ಅಪಾರ ಅನುಭವ ಹೊಂದಿರುವ ಸಂಘದ ಅಧ್ಯಕ್ಷರಾಗಿರುವ ನಿತ್ಯಾನಂದ ಕೋಟ್ಯಂತರ ಅಧ್ಯಕ್ಷತೆಯಲ್ಲಿ ಸಂಘ ಬಹಳಷ್ಟು ಎತ್ತರಕ್ಕೆ ಬೆಳೆಯಲಿ, ಶಿಸ್ತು ಮತ್ತು ಸಮಯವನ್ನು ಪರಿಪಾಲಿಸಿಕೊಂಡು ಬಂದಿರುವ ಗೊರೆಗಾವ್ ಕರ್ನಾಟಕ ಸಂಘದ ಸಾಧನೆಗೆ ಕರ್ನಾಟಕ ಸರಕಾರ ಗುರುತಿಸುವಂತಾಗಲಿ ಎಂದು ನುಡಿದರು,
ಸಂಘದ ಮಾಜಿ ಅಧ್ಯಕ್ಷ, ಪಾರುಪತ್ತಿದಾರ ಜಿ ಟಿ ಆಚಾರ್ಯ ಮಾತನಾಡುತ್ತಾ ಸಂಘದ ಮಹತ್ವಪೂರ್ಣ ಕಾರ್ಯಕ್ರಮಗಳಲ್ಲಿ ಒಂದಾಗಿರುವ ನಾಡಹಬ್ಬ ಕನ್ನಡ, ಭಾಷೆ ಸಂಸ್ಕೃತಿಯನ್ನು ಉಳಿಸುವಲ್ಲಿ ಮತ್ತು ಪರವದ ಕೊಡುಗೆಯನ್ನು ನೀಡುತ್ತಾ ಬಂದಿದೆ, ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈ ಇಂದಿನ ಎಲ್ಲಾ ಅಧ್ಯಕ್ಷರುಗಳು ಮಹತುರವಾದ ಕೊಡುಗೆಯನ್ನು ಸಂಘಕ್ಕೆ ನೀಡುತ್ತಾ ಬಂದಿದ್ದಾರೆ ಎಂದು ನುಡಿದರು,
ಮುಂಬೈಯಲ್ಲಿ ಕನ್ನಡದ ಕಂಪು ಸುಸುವ. ಗೋರೆಗಾಂವ್ ಕರ್ನಾಟಕ ಸಂಘ ಕೃತಿಯನ್ನು ರಚಿಸಿದ ಸುರೇಖಾ ಹರಿಪ್ರಸಾದ್ ಶೆಟ್ಟಿ ಯವರ ಮಾತನಾಡಿ ಗೋರೆಗಾಂವ್ ನಗರಕ್ಕು ನನಗೂ ಅನನ್ಯ ಸಂಬಂಧವಿದೆ, ನನ್ನ ಸಂಬಂಧಿಕರು ಈ ಸಂಘದಲ್ಲಿ ಸುದೀರ್ಘಕಾಲದಿಂದ ಸೇವೆ ಮಾಡುತ್ತಾ ಬಂದಿದ್ದಾರೆ ಆದ್ದರಿಂದ ಈ ಸಂಘದ ಸಾಧನೆಗಳು ಕೃತಿ ಮೂಲಕ ತರಬೇಕು ಎನ್ನುವ ನನ್ನ ಯೋಚನೆಗೆ , ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರು ನನ್ನ ಗುರುಗಳಾಗಿರುವ ಡಾ. ಜಿ ಎನ್ ಉಪಾಧ್ಯಾಯರು ಮಾರ್ಗದರ್ಶನ ಸಂಘದ ಪದಾಧಿಕಾರಿಗಳ ಸದಸ್ಯರ ಸಹಕಾರದಿಂದ ಈ ಕೃತಿ ಬಿಡುಗಡೆಗೊಳ್ಳಲು ಸಾಧ್ಯವಾಗಿದೆ ಎಂದು ನುಡಿದರು,
ಈ ಸಂದರ್ಭದಲ್ಲಿ ಭಾರತ್ ಬ್ಯಾಂಕಿನ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್, ಗೌ. ಕೋಶಾಧಿಕಾರಿ ಎಂ ಆನಂದ ಶೆಟ್ಟಿ, ಪಾರುಪತ್ಯಗಾರರಾದ ಜಿ ಟಿ ಆಚಾರ್ಯ ಉಪಸ್ಥಿತರಿದ್ದರು.
ಕೃತಿಯ ಬಗ್ಗೆ ನಲಿನಿ ಪ್ರಸಾದ್ ಮಾತನಾಡಿದರು, ಸಂಘದ ಮುಖವಾನಿ ಮುಂಬೆಳಕು ಬಗ್ಗೆ ಪದ್ಮಜಾ ಮಣ್ಣೂರು ತಿಳಿಸಿದರು,
ಪ್ರಸ್ತಾವನೆ ಮಾತುಗಳನ್ನು ಸಂಘದ ಕಾರ್ಯದರ್ಶಿ ಸರಿತಾ ನಾಯಕ್ ಮಾಡಿದರು,
ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹನಿ ಶೆಟ್ಟಿ ನಡೆಸಿದರು, ಸಭಾ ಕಾರ್ಯಕ್ರಮವನ್ನು ರಂಗ ಕಲಾವಿದ ಸುರೇಂದ್ರ ಶೆಟ್ಟಿ ಮಾರ್ನಾಡು ನಿರೂಪಿಸಿದರು, ಧನ್ಯವಾದಗಳು ಜೊತೆ ಕಾರ್ಯದರ್ಶಿ ಶಾಂತ ಎನ್ ಶೆಟ್ಟಿ ಮಾಡಿದರು , ಪ್ರಾರ್ಥನೆಯನ್ನು ಮತ್ತು ಸ್ವಾಗತ ಗೀತೆಯನ್ನು ಮಹಿಳಾ ವಿಭಾಗದ ಸದಸ್ಯರು ಮಾಡಿದರು
ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಕುಣಿತ ಭಜನೆ ,ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು
————
ಸಂಘಕ್ಕೆ ವಿಶಾಲವಾದ ನೂತನ ಕಾರ್ಯಾಲಯ ನಿರ್ಮಾಣಕ್ಕೆ ಬೆಂಬಲ ನೀಡಿ: ನಿತ್ಯಾನಂದ ಡಿ. ಕೋಟ್ಯಾನ್,
ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಘದಲ್ಲಿ ಬಹಳಷ್ಟು ಅಧ್ಯಕ್ಷರೊಂದಿಗೆ ಸೇವೆ ಮಾಡಿದ ಅನುಭವ ನನ್ನಲ್ಲಿದೆ, ಮಹಾರಾಷ್ಟ್ರದ ಮಣ್ಣಿಗೆ ವಿಶೇಷವಾದ ಸಮಾಜ ಸೇವೆಯ ಮೂಲಕ ಕೊಡುಗೆಯನ್ನು ನೀಡಿದ ಜಯ ಸುವರ್ಣರ ವೇದಿಕೆಯಲ್ಲಿ ಸೂಕ್ತ ಜನರನ್ನು ಸೇರಿಸಿಕೊಂಡು ನಾಡ ಹಬ್ಬ ಆಚರಿಸುವ ಸಂಭ್ರಮ ನಮಗೆ ಒದಗಿ ಬಂದಿದೆ, ಸಂಘದ ಇತಿಹಾಸದ ಪುಟದಲ್ಲಿ ಇವತ್ತಿ ದಿನ ಚಾರಿತ್ರಿಕವಾದ ದಿನವಾಗಿದೆ 63 ಯ ನಾಡ ಹಬ್ಬದ ಸಂದರ್ಭದಲ್ಲಿ 65 ವರ್ಷದ ಸಾಧನೆಗಳ ಕೃತಿ ಬಿಡುಗಡೆಗೊಂಡಿದೆ ನಾವೆಲ್ಲರೂ ಅಭಿಮಾನ ಪಡುವಂತಾಗಿದೆ , ಈಇಂದಿನ ಅಧ್ಯಕ್ಷರು ಸಮರ್ಥ ನಾಯಕತ್ವದಿಂದ ಸಂಘ ಬೆಳೆದಿದೆ, ಅವರನ್ನೆಲ್ಲ ನೆನಪಿಸುವುದು ಈ ದಿನ ಅಗತ್ಯವಿದೆ ಎನ್ನುವ ನಿಟ್ಟಿನಲ್ಲಿ ಎಲ್ಲರನ್ನೂ ಆಹ್ವಾನಿಸಿದ್ದೇವೆ , ಸಂಘದ ಪ್ರೇಮ ಬಿಂದು ಕಟ್ಟಡ ವಿಸ್ತಾರವಾಗಿ ನೂತನವಾಗಿ ಮಾರ್ಪಾಡು ಗೊಲ್ಲಲಿದೆ, ಒಂದುವರೆ ಸಾವಿರ ಚಡಿ ವಿಸ್ತೀರ್ಣದ ನೂತನ ಸಂಘದ ಕಾರ್ಯಾಲಯ ಸದ್ಯದಲ್ಲಿ ನಮಗೆ ದೊರೆಯಲಿದೆ, ಕಾರ್ಯಾಲಯ ನಿರ್ಮಾಣಕ್ಕೆ ಬೆಂಬಲ ನೀಡಿ:ಎಂದು ನುಡಿದರು,