
ಬಿಲ್ಲವರ ಅಸೋಸಿಯೇಷನ್ , ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶನಿವಾರ ದಿನಾಂಕ 24.02.2024 ರಂದು ಮದ್ಯಾನ 12 ರಿಂದ ರಾತ್ರಿ 8.30 ರ ತನಕ ಸಾಮೂಹಿಕ ಶನಿ ಗ್ರಂಥ ಪಾರಾಯಣವು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಸ್ಥಳೀಯ ಕಚೇರಿಯ ಕಾರ್ಯಕಾರಿ ಸಮಿತಿಯ ಸದಸ್ಯರ ಮುಂದಾಳತ್ವದಲ್ಲಿ ಬಹಳ ವಿಜೃಂಭಣೆಯೊಂದಿಗೆ ನೆರವೇರಿತು.
ಸ್ಥಳೀಯ ಕಚೇರಿಯ ಉಪ ಕೋಶಾಧಿಕಾರಿಯಾದ ಶ್ರೀಯುತ ಜಗನಾಥ್ ಸನಿಲ್ ದಂಪತಿಗಳು ಶ್ರೀ ಶನಿ ಗ್ರಂಥ ಪಾರಾಯಣದ ಪೂಜೆಯಲ್ಲಿ ಸಹಕರಿಸಿದರು. ಶ್ರೀ ವೆಸ್ಟೆರ್ನ್ ಇಂಡಿಯಾ ಶನಿ ಮಹಾತ್ಮಾ ಸೇವಾ ಸಮಿತಿಯ ಪ್ರದಾನ ಅರ್ಚಕರಾದ ಶ್ರೀ ಸತೀಶ್ ಕೋಟಿಯನ್ ರವರು ಶನಿ ದೇವರ ಕಳಸ ಪ್ರತಿಷ್ಠೆ ಮಾಡಿ ಪೂಜೆ ವಿಧಿವಿಧಾನ ವನ್ನು ನೆರವೇರಿಸಿದರು. ಶ್ರೀ ಈಶ್ವರ್ ಕೋಟಿಯನ್, ಶ್ರೀ ಚಂದ್ರಪಾಲ್ ಪೂಜಾರಿ ಸಹಕರಿಸಿದರು. ಕಾರ್ಯಕಾರಿ ಸಮಿತಿ ಸದ್ಯಸರಾದ ಶ್ರೀಯುತ ಜಗದೀಶ್ ಕೋಟಿಯನ್ ಹಾಗು ಅರ್ಚಕರಾದ ಶ್ರೀ ಸತೀಶ್ ಕೋಟಿಯನ್ ಭಕ್ತರ ಪರವಾಗಿ ಪ್ರಾರ್ಥನೆ ಗೈದರು. ಕಾರ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸುವುದರೊಂದಿಗೆ ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು.








ಜೆ. ಜೆ ಕೋಟ್ಯಾನ್ ರವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಶನಿ ಪೂಜೆ , ಶನೇಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ನೆರವೇರಿತು , ಇದರಲ್ಲಿ ಪಾತ್ರಧಾರಿಗಳಾಗಿ. ಹಿಮ್ಮೇಳನದಲ್ಲಿ ಭಾಗವತರಾಗಿ
ರವಿಶಂಕರ್ ಆಚಾರ್ಯ , ನಾರಾಯಣ ಪೂಜಾರಿ , ಜಗದೀಶ್ ಪೂಜಾರಿ , ನಿಟ್ಟೆ ಚೆಂಡೆ ಮೃದಂಗ ವಾದಕರಾಗಿ
ಪ್ರವೀಣ್ ಶೆಟ್ಟಿ, ಸುರೇಶ ಶೆಟ್ಟಿ, ಕಣಂಜಾರ್ , ನಿಶಿತ್ ಪೂಜಾರಿ ಮುಮ್ಮೇಳನದಲ್ಲಿ – ವಿಕ್ರಮಾದಿತ್ಯನಾಗಿ ಅನಿಲ್ ಹೆಗ್ಡೆ ಹಾಗು ಜೆ.ಜೆ.ಕೋಟಿಯನ್ , ಶನಿ ಯಾ ಪಾತ್ರದಲ್ಲಿ ತಾರಾನಾಥ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ , ಪುರೋಹಿತರಾಗಿ -ಪ್ರವೀಣ್ ಪೂಜಾರಿ, ಕರವಾಹನ – ಸಚಿನ್ ಪೂಜಾರಿ, ನಂದಿಶೇಸ್ತಿ ಯಾಗಿ ಸಚಿನ್ ಪೂಜಾರಿ, ಆಲೋಲಿಕಾಲಾಗಿ ದಿವ್ಯ ಸುವರ್ಣ , ಚಂದ್ರಸೇನರಾಜನಾಗಿ ರವಿ ಹೆಗ್ಡೆ , ಹೆರ್ಮುಂದ್ದೆ , ರಾಮಣ್ಣ ಗಾಣಿಗನಾಗಿ ತಾರಾನಾಥ್ ಶೆಟ್ಟಿ, ಸುಶೀಲೆಯಾಗಿ ದಿವ್ಯ ಸುವರ್ಣ , ಪದ್ಮಾವತಿ ಯಾಗಿ ಅಶೋಕ್ ಶೆಟ್ಟಿ , ಸಹಕರಿಸಿದರು. ನಂತರ ಭಜನೆ ನಡೆದು. ಶ್ರೀ ಶನೀಶ್ವರ ದೇವರಿಗೆ ಮಹಾಪೂಜೆ ನೆರವೇರಿತು.






ಅನ್ನಸಂತರ್ಪಣೆ ಸೇವೆಗೆ ದಾನಿಗಳಾದ ಶ್ರೀಮತಿ ಗಿರಿಜಾ ಸಂಜೀವ ಪಾಲನ್ (ಹೋಟೆಲ್ ಚಂದ್ರಹಾಸ್ , ಡೊಂಬಿವಲಿ ) , ಶ್ರೀ ನವೀನ್ & ಮಮತಾ ಅಂಚನ್ , ಶ್ರೀಮತಿ ಗಿರಿಜಾ ಕೆ.ಅಂಚನ್ & ಶ್ರೀಮತಿ ಸವಿತಾ ಉದ್ಯಾವರ್ , ಶ್ರೀ ಸತೀಶ್ & ಸೌಜನ್ಯ ಕೋಟಿಯನ್ ಪರಿವಾರ,ರಾಮಚಂದ್ರ & ಚಾಂದಿನಿ ಬಂಗೇರ, ರವಿ ಪೂಜಾರಿ ಹೋಟೆಲ್ ವರ್ಷ, ಅನಿತಾ ಸುವೀತ್ ಸುವರ್ಣ , ಸುಮಂಗಲ ಕರ್ಕೇರ , ಲಕ್ಷ್ಮಣ್ ಪೂಜಾರಿ , ದೇವದಾಸ್ ಗುಜರಾನ್ , ರವಿ ಬಂಗೇರ , ಶ್ರೀಧರ್ ಅಮೀನ್, ರಾಜೇಶ್ ಕೋಟಿಯನ್ , ಸಚಿನ್ ಜಿ.ಪೂಜಾರಿ, ಹೇಮಾ ದೇವರಾಜ್ ಪೂಜಾರಿ, ಕೃಷ್ಣ ಪೂಜಾರಿ, ಕುಶ ರವಿ ಸನಿಲ್, ಲೋಕಃನಾಥ್ ಸನಿಲ್, ಪುರಂದರ ಪೂಜಾರಿ, ಶ್ರೀ ನಿತ್ಯಾನಂದ್ ಜತ್ತನ್, ವಿಠ್ಠಲ್ ಅಮೀನ್, ರಿಕಿತ ಜಿತೇಶ್ ಅಮೀನ್, ಜಗದೀಶ್ ಸುವರ್ಣ , ಶ್ರೀ ಹರೀಶ್ ಶೆಟ್ಟಿ, ( ಹೋಟೆಲ್ ಗೌರವ್ , ಡೊಂಬಿವಲಿ), ಇವರಿಗೆ ಶಾಲು ಹೊದಿಸಿ ಪ್ರಸಾದ ನೀಡಲಾಯಿತು. ಹಾಗೆಯೆ ಈ ಪೂಜೆಗೆ ಸಂಪೂರ್ಣ ಸಹಕಾರ ವಿವಿಧ ಸೇವೆಯನ್ನು ನೀಡಿ ಯಶಸ್ವಿ ಗೊಳಿಸಿದ ಗಣ್ಯರುಗಳು. ಹಾಗು ಇತರ ಅನೇಕ ಭಕರು ದೇಣಿಗೆ ಹಾಗು ಪೂಜೆಯನ್ನು ನೀಡಿ ಸಹಕರಿಸಿದರು.




ಬಿಲ್ಲವರ ಅಸೋಸಿಯೇಷನ್ ನ ಉಪಧ್ಯಕ್ಷರಾದ ಶ್ರೀ ಸುರೇಶ ಕುಮಾರ್, ಶ್ರೀ ಧರ್ಮಪಾಲ್ ಅಂಚನ್, ಪ್ರದಾನ ಕಾರ್ಯದರ್ಶಿ ಶ್ರೀ ಹರೀಶ್ ಜಿ. ಸಾಲಿಯಾನ್, ಜೊತೆ ಕೋಶಾಧಿಕಾರಿಗಳಾದ ಶ್ರೀ ರವಿ ಸನಿಲ್, ಭಾರತ್ ಬ್ಯಾಂಕಿನ ಮಾಜಿ ನಿರ್ದೇಶಕರುಗಳಾದ ಶ್ರೀ ರಾಜ ವಿ. ಸಾಲಿಯಾನ್, ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಭಾರತ್ ಬ್ಯಾಂಕ್ ನ ಕಾರ್ಯಾಧ್ಯಎಕ್ಷರಾದ ಶ್ರೀಯುತ ಸೂರ್ಯಕಾಂತ್ ಜಯ ಸುವರ್ಣ , ನಿರ್ದೇಶಕರಾದ ಶ್ರೀಯುತ ನಾರಾಯಣ ಸುವರ್ಣ , ಮೋಹನ್ದಾಸ್ ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಭಾರತ್ ಕೋ-ಅಪ್ ಬ್ಯಾಂಕ್ ನ ಪ್ರಬಂಧಕರು, ಸಿಬ್ಬಂದಿ ವರ್ಗದವರು, ಡೊಂಬಿವಲಿ, ಕಲ್ಯಾಣ್ ಪರಿಸರದ ಪರಿಸರದ ಗಣ್ಯರು, ವಿವಿಧ ಸಂಸ್ಥೆಯ ಪದಾಧಿಕಾರಿಗಳು ಹಾಗು ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಶನಿ ದೇವರ ಕೃಪೆಗೆ ಪಾತ್ರರಾದರು.



ಕಾರ್ಯಾಧ್ಯಕ್ಷರಾದ ಶ್ರೀ ಚಂದ್ರಹಾಸ್ ಪಾಲನ್ ರವರ ಮುಂದಾಳತ್ವದಲ್ಲಿ ನೆಡೆದ ಈ ಪೂಜೆಗೆ ಡೊಂಬಿವಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷರಾದ ಶ್ರೀ ದೇವರಾಜ್ ಪೂಜಾರಿ , ಮಾಜಿ ಕಾರ್ಯಾಧ್ಯಕ್ಷರಾದ ಶ್ರೀ ರವಿ ಎಸ್ ಸನಿಲ್, ಕೇಂದ್ರ ಶ್ರೀ ಶ್ರೀಧರ್ ಅಮೀನ್ ಹಾಗು ಶ್ರೀ ಪುರಂಧರ್ ಪೂಜಾರಿ, ಗೌರವ ಕಾರ್ಯದರ್ಶಿ ಶ್ರೀ ಸಚಿನ್ ಜಿ.ಪೂಜಾರಿ, ಸಹ ಕಾರ್ಯದರ್ಶಿ ಶ್ರೀ ಕೃಷ್ಣ ಪೂಜಾರಿ, ಗೌರವ ಕೋಶಾಧಿಕಾರಿ ಶ್ರೀ ಆನಂದ ಪೂಜಾರಿ, ಸಹ ಕೋಶಾಧಿಕಾರಿ ಶ್ರೀ ಜಗನಾಥ್ ಸನಿಲ್, ಶ್ರೀ ಮಂಜಪ್ಪ ಪೂಜಾರಿ, ಶ್ರೀ ಈಶ್ವರ್ ಕೋಟಿಯನ್, ಶ್ರೀ ತಿಲಕ್ ಸನಿಲ್, ಶ್ರೀ ಜಗದೀಶ್ ಕೋಟಿಯನ್, ಶ್ರೀ ಸೋಮನಾಥ್ ಪೂಜಾರಿ , ಶ್ರೀ ಅನ್ನು ಪೂಜಾರಿ, ಶ್ರೀ ಅಶೋಕ್ ಅಮೀನ್, ಇತರ ಸಮಿತಿ ಸದ್ಯಸರು,ಸ್ಥಳೀಯ ಸದ್ಯಸ್ಯರು,ಮಹಿಳಾ ವಿಭಾಗದ ಸದಸ್ಯರು,ಹಾಗು ಯುವಅಭುದಾಯ ಉಪ ಸಮಿತಿಯ ಸದ್ಯಸರುಗಳು ಶ್ರೀ ಸಾಮೂಹಿಕ ಶನೈಶ್ವರ ಗ್ರಂಥ ಪಾರಾಯಣ ಕಾರ್ಯಕ್ರಮ ಯಶಶ್ವಿಯಾಗಲು ಸಹಕರಿಸಿದರು. ಸ್ಥಳೀಯ ಕಚೇರಿಯ ಉಪ ಶ್ರೀಯುತ ಕೃಷ್ಣ ಪೂಜಾರಿ ಎಲ್ಲಾರನ್ನು ಸ್ವಾಗತಿಸಿ ಕೊನೆಗೆ ವಂದಿಸಿದರು.