
ಬೈಂಗನ್ ವಾಡಿ, ಗೋವಂಡಿ, ಪ್ಲಾಟ್ ನಂಬರ್6-ಟಿ-7/8, ರೋಡ್ ನಂಬರ್ 8, ಇಲ್ಲಿನ ದಿ. ಭವಾನಿ ಶಂಕರ್ ಶೆಟ್ಟಿಯವರಿಂದ ಸ್ಥಾಪಿತ ಶ್ರೀ ಕ್ಷೇತ್ರ ಬೈಂಗನ್ ವಾಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರದಲ್ಲಿ 45 ನೇ ವಾರ್ಷಿಕೋತ್ಸವ ಹಾಗೂ ಕಲ್ಕುಡ-ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲವು ಫೆ. 24 ಶನಿವಾರ ವಿಜೃಂಭಣೆಯಿಂದ ಜರಗಿತು.

45 ನೇ ವಾರ್ಷಿಕೋತ್ಸವದ ಅಂಗವಾಗಿ ಫೆ.22 ರಂದು ಗುರುವಾರ ಬೆಳಿಗ್ಗೆ ವಾಸುದೇವ ವೈಲಾಯರವರ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಪತಿ ಹೋಮ, ನವಗ್ರಹ ಶಾಂತಿ, ಗಣಪತಿ ಕಲಶಾಭಿಷೇಕ , ಮಧ್ಯಾಹ್ನ ಮಹಾಪೂಜೆ, ಮತ್ತು ಭಜನೆ ಹಾಗೂ ಅನ್ನ ಸಂತರ್ಪಣೆ ,ಸಾಯಂಕಾಲ ರಂಗ ಪೂಜೆ ರಾತ್ರಿ ಅನ್ನಸಂತರ್ಪಣೆ ನಡೆದಿದೆ .ಫೆ.23 ರಂದು ಶುಕ್ರವಾರ ಬೆಳಿಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ದುರ್ಗಾ ಹೋಮ, ಮಧ್ಯಾಹ್ನ ಭಜನೆ ಹಾಗೂ ಅನ್ನ ಸಂತರ್ಪಣೆ ,ಸಾಯಂಕಾಲ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವಿಕೆಯಲ್ಲಿ ವಿವಿಧ ವೇಷಭೂಷಣ,ಹುಲಿವೇಷ ದೊಂದಿಗೆ ಶ್ರೀ ದುರ್ಗಾದೇವಿ ಬೆಳ್ಳಿಯ ಪಲ್ಲಕಿಯ ಅದ್ದೂರಿಯ ಪುರ ಮೆರವಣಿಗೆ ಆ ಬಳಿಕ ಭಜನೆ ಮತ್ತು ಅನ್ನ ಸಂತರ್ಪಣೆ ನಡೆಯಿತು.

ಫೆ. 24 ರಂದು ಶನಿವಾರ ಬೆಳಿಗ್ಗೆ ಧರ್ಮದೈವಗಳ ಕಲಶಾಭಿಷೇಕ ,ಪ್ರಧಾನ ಹೋಮ,ಆ ಬಳಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ. ರಾತ್ರಿ 7 ಗಂಟೆಗೆ ದೈವಗಳ ಭಂಡಾರ ಇಳಿದ ಬಳಿಕ ಅನ್ನ ಸಂತರ್ಪಣೆ ನಡೆಯಿತು. ತದ ನಂತರ ಧರ್ಮ ದೈವ ಕಲ್ಕುಡ- ಕಲ್ಲುರ್ಟಿ- ಗುಳಿಗ ದೈವಗಳಿಗೆ ಕೋಲವು ಜರಗಿತು .ಮೂಡುಶೆಡ್ಡೆ ಶೀನ, ರಾಜೇಶ್ ಮೂಡಬಿದ್ರಿ, ಆನಂದ್ ಕೆಲ್ಲತೆ ದೈವ ನರ್ತನ ಸೇವೆಗೈದರು. ಹಳೆಯಂಗಡಿ ಮಠ ತೋಟ ಮೋಹನ್ ಪೂಜಾರಿಯವರಿಂದ ದೈವ ದರ್ಶನ ನಡೆಯಿತು. ಮಧ್ಯಸ್ಥ ರಾಗಿ ಧಾರ್ಮಿಕ ಸಂಘಟಕ ಉಮೇಶ್ ಕಾಂತಾವರ ಸಹಕರಿಸಿದರು. ಹಳೆಯಂಗಡಿ ದಿವಾಕರ್ ಸುವರ್ಣ, ರವಿಕುಮಾರ್ ಹಳೆಯಂಗಡಿ, ಸಾಯಿ ಪೂಜಾರಿ ಖೇತ್ವಾಡಿ ಅಲ್ಲದೆ ವಾದ್ಯವಾಲಗದಲ್ಲಿ ಉತ್ತಮ ಕೋಟ್ಯಾನ್ ಬಳಗದವರು ಸೇವೆಯನ್ನು ಸಲ್ಲಿಸಿದರು. ಕೋಲದಲ್ಲಿ ಉಪಸ್ಥಿತರಿದ್ದ ಉದ್ಯಮಿ, ಖ್ಯಾತ ಯೂಟ್ಯೂಬರ್ ಧೀರಜ್ ಶೆಟ್ಟಿ ಅಲ್ಲದೆ ಅನೇಕ ಗಣ್ಯರನ್ನು, ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ದೇವಸ್ಥಾನದ ವತಿಯಿಂದ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.

45 ನೇ ವಾರ್ಷಿಕೋತ್ಸವದ ಅಂಗವಾಗಿ ಮೂರು ದಿನಗಳಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಹಾಗೂ ದೈವಗಳ ಕೋಲದಲ್ಲಿ ಸಾವಿರಾರು ಮಂದಿ ದೈವ ಭಕ್ತರು, ವಿವಿಧ ಧಾರ್ಮಿಕ ಸಾಮಾಜಿಕ ಸಂಸ್ಥೆಗಳ ಪದಾಧಿಕಾರಿಗಳು ,ಸದಸ್ಯರು ,ಸ್ಥಳೀಯ ರಾಜಕೀಯ ನೇತಾರರು, ಪಾಲ್ಗೊಂಡಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಚಿತಾ ಭವಾನಿ ಶಂಕರ್ ಶೆಟ್ಟಿ ಪರಿವಾರದವರ ಮುಂದಾಳತ್ವದಲ್ಲಿ ಜರಗಿದ ಕೋಲದ ಯಶಸ್ವಿಗೆ ಭಕ್ತರೆಲ್ಲ ಸಹಕರಿಸಿದರು.