September 6, 2026
Mumbai News Kannada
ಮುಂಬಯಿ

ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ಮುಂಬಯಿ 2ನೇ ವೈಜ್ಞಾನಿಕ ಸಭೆ, ಉಪನ್ಯಾಸ.





ಮುಂಬಯಿ ಮಹಾನಗರದ ಬಂಟ ವೈದರುಗಳ ಸಂಘಟನೆ ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ನ 2ನೇ ವೈಜ್ಞಾನಿಕ ಸಭೆ (2nd Scientific Meeting) ಮೇ 5ರಂದು ಸಂಜೆ, ಕುರ್ಲಾ ಪೂರ್ವ ಬಂಟರ ಭವನದ ವಿಸ್ತಾರಿತ ಸಂಕಿರ್ಣದ 2ನೇ ಮಹಡಿಯ ಸಭಾಗ್ರಹದಲ್ಲಿ ಎಸೋಸಿಯೇಶನ್ ನ ಅಧ್ಯಕ್ಷರಾದ ಡಾ. ಸುಧೀರ್ ಅಡ್ಯಂತಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂಧರ್ಭದಲ್ಲಿ ನಗರದ ಜನಪ್ರಿಯ ಹೃದ್ರೋಗ ತಜ್ಞ, ಸದಾನಂದ ಹೆಲ್ದಿ ಲಿವಿಂಗ್ ನ ಡಾ. ಸದಾನಂದ ಆರ್. ಶೆಟ್ಟಿ ಅವರು ‘ಹೃದಯ ಖಾಯಿಲೆ, ಅದ್ಯಾತ್ಮ ಮತ್ತು ಜೀವನ ಶೈಲಿ” ಕುರಿತು ಉಪನ್ಯಾಸ ನೀಡಿದರು. ಡಾ ಸದಾನಂದ ಶೆಟ್ಟಿ ಅವರು ಅಧ್ಯಾತ್ಮ ಮತ್ತು ಜೀವನ ಶೈಲೈಯಿಂದ ಹೇಗೆ ಸುಖಮಯವಾಗಿ, ಸರಳ ರೀತಿಯಲ್ಲಿ ಬದುಕಬಹುದು ಎಂದು ಬಹು ಸುಂದರವಾಗಿ ವ್ಯಖ್ಯಾನ ನೀಡಿದರು.
ನ್ಯಾಯವಾದಿ ಅಶೋಕ್ ಶೆಟ್ಟಿ ಅವರು “ವಿಲ್ ಮಾಡುವುದು ಹೇಗೆ” ಕುರಿತು (How to Make a Will)ಸೊಗಸಾಗಿ ವಿವರಣೆ ನೀಡಿದರು. ವಿಲ್ ಹೇಗೆ ಮಾಡುವುದು , ಯಾವಾಗ ವಿಲ್ ಮಾಡುವುದು ಮತ್ತು ವಿವಿಧ ಪ್ರಕಾರಗಳ ವಿಲ್ ಕುರಿತು ನ್ಯಾಯವಾದಿ ಅಶೋಕ್ ಶೆಟ್ಟಿ ಸವಿಸ್ತಾರವಾಗಿ ವಿವರಿಸುತ್ತಾ ವಿಲ್ ನ್ನು ಸಾಮಾನ್ಯ ಪೇಪರ್ ನಲ್ಲಿಯೂ ಮಾಡಬಹುದು, ಆದರೆ ಎರಡು ಸಾಕ್ಷಿಗಳು ಅತೀ ಮುಖ್ಯ ಎಂದು ತಿಳಿಸಿದರು.

ಜನಪ್ರಿಯ ವೈದ್ಯ, ಧಾರ್ಮಿಕ, ಸಾಮಾಜಿಕ ಕಳಕಳಿಯ ಡಾ. ರಂಜನ್ ಶೇಣವ ಸೇರಿದ್ದ ಎಲ್ಲರಿಗೂ ಹಾಗೂ ಸಹಕಾರ ನೀಡಿದವರಿಗೆ ಧನ್ಯವಾದ ಸಮರ್ಪಿಸಿದರು. ಡಾ. ಅಜಿತ್ ಶೆಟ್ಟಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.
ಡಾ. ಉದಯ ಶೆಟ್ಟಿ, ಡಾ. ಸುಹಾಸ್ ನಾಯಕ್, ಡಾ. ಶರತ್ ಶೆಟ್ಟಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು.
ಸಭೆಯಲ್ಲಿ ಒಟ್ಟು 87 ವೈದ್ದರುಗಳು ಉಪಸ್ಥಿತರಿದ್ದು,ಡಾ. ಸದಾನಂದ ಶೆಟ್ಟಿ ಹಾಗೂ ನ್ಯಾಯವಾದಿ ಅಶೋಕ್ ಶೆಟ್ಟಿ ಮಂಡಿಸಿದ ಎರಡು ಉಪಯುಕ್ತ, ವಿಭಿನ್ನ ವಿಷಯಗಳ ಬಗ್ಗೆ ವಿಶೇಷ ಮಾಹಿತಿ ಪಡೆದರು.



Related posts

ಮುಂಬೈ : ಎಸ್ ಎಸ್ ಸಿ ಪರೀಕ್ಷೆಯಲ್ಲಿ ಶರುಣ್ ಭಾಸ್ಕರ ಕೋಟ್ಯಾನ್ ಗೆ ಶೇ.95.80 ಅಂಕ.

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿಯ 80ನೇ ವಾರ್ಷಿಕ ಮಹಾಸಭೆ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ) ಮುಂಬಯಿ ನೂತನ ಅಧ್ಯಕ್ಷರಾಗಿ ರವೀಶ್ ಜಿ ಆಚಾರ್ಯ ಆಯ್ಕೆ 

Mumbai News Desk

ಕರ್ನಿರೆ  ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆ.

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ, ಫೋರ್ಟ್, ಮುಂಬಯಿ : 81ನೇ ವಾರ್ಷಿಕ ಮಹಾಸಭೆ

Mumbai News Desk