
ಚಿತ್ರ ವರದಿ : ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಫೆ. 26: ತಿರುಪತಿ ತಿರುಮಲ ದೇವಸ್ಥಾನ( ಟಿ.ಟಿ.ಡಿ) ಹಾಗೂ ಡಾ ಶ್ರೀಕಾಂತ ಶಿಂಧೆ ಫೌಂಡೇಶನ್ ವತಿಯಿಂದ ಡೊಂಬಿವಲಿಯ ಪ್ರೀಮಿಯರ್ ಗ್ರೌಂಡ್ ನಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಂತ ಭಕ್ತರ ಆರಾಧ್ಯ ದೇವರಾದ ಶ್ರೀ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ದೇವರ ಪ್ರೀತಿಯ ಸೇವೆಯಾದ ಕಲ್ಯಾಣ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಭವ್ಯ ಶೋಭಾಯಾತ್ರೆಗೆ ತಿರುಪತಿ ಬಾಲಾಜಿ ದೇವಸ್ಥಾನದ ಹಾಗೂ ಡೊಂಬಿವಲಿ ಪೂರ್ವದ ಸಾಗರ್ಲಿ ಬಾಲಾಜಿ ದೇವಸ್ಥಾನದ ನೂರಾರು ಪಂಡಿತರ ವೇದಘೋಷಗಳ ಮಧ್ಯೆ ಡೊಂಬಿವಲಿ ಪೂರ್ವದ ಸಾಗರ್ಲಿಯ ಬಾಲಾಜಿ ಮಂದಿರದಿಂದ ಕಲ್ಯಾಣ ಲೋಕಸಭಾ ಕ್ಷೇತ್ರದ ಸಂಸದ ಡಾ ಶ್ರೀಕಾಂತ ಶಿಂಧೆ ಅವರ ಹಾಗೂ ಇತರ ರಾಜಕೀಯ ನೇತಾರ ಮತ್ತು ಡೊಂಬಿವಲಿ ಹೋಟೆಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಅಜಿತ್ ಶೆಟ್ಟಿ, ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಮತ್ತು ತುಳು- ಕನ್ನಡಿಗರ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ಅಸಂಖ್ಯಾತ ಭಕ್ತರ ಜಯಘೋಷಗಳ ಮಧ್ಯೆ ಅದ್ದೂರಿಯ ಚಾಲನೆಯನ್ನು ನೀಡಲಾಯಿತು.






ತಿರುಪತಿ ತಿರುಮಲ ದೇವಸ್ಥಾನ ( ಟಿ.ಟಿ.ಡಿ.) ಯಿಂದ ವಿಶೇಷ ವಾಹನದಲ್ಲಿ ಬರಮಾಡಿಕೊಂಡ ಶ್ರೀಶ್ರೀನಿವಾಸ ದೇವರ ಹಾಗೂ ಶ್ರೀದೇವಿ ಹಾಗೂ ಭೂದೇವಿಯ ವಿಗ್ರಹಗಳನ್ನು ಪುಷ್ಪಲಂಕೃತವಾದ ರಥದಲ್ಲಿ ಓಂ ನಮೋ ವೆಂಕಟೇಶಾಯ ನಮ: ಹಾಗೂ ಗೋವಿಂದಾ ಗೋವಿಂದ ನಾಮಸ್ಮರಣೆ ಯೊಂದಿಗೆ ಭಕ್ತರ ಪುಷ್ಪ ವೃಷ್ಷಿಯೊಂದಿಗೆ ರಥೋತ್ಸವದ ಭವ್ಯವಾದ ಮೆರವಣಿಗೆ ನಡೆಯಿತು.








ಈ ಸಂದರ್ಭದಲ್ಲಿ ಉಡುಪಿ ಬೇಂಗ್ರೆಯ ಸುಮಾರು 500 ಕಲಾವಿದರ ತಂಡ ಡೊಂಬಿವಲಿ ಹೋಟೆಲ್ ಅಸೋಸಿಯೇಷನನ ವತಿಯಿಂದ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಶೋಬಾ ಯಾತ್ರೆಗೆ ಮೆರಗು ನೀಡಿತು. ಶೋಭಾ ಯಾತ್ರೆಯಲ್ಲಿ ಗೊಂಬೆ, ಯಕ್ಷಗಾನದ ಪ್ರಾತ್ಯಕ್ಷತೆ , ಉಡುಪಿ, ಮಂಗಳೂರಿನ ದೈವ, ದೇವರ ವಿವಿಧ ಟ್ಯಾಬ್ಲೊ, ಹುಲಿ ವೇಷದ ತಂಡ, ಹನುಮಂತ, ನಾಗ ಸಾಧುಗಳ ತಂಡ , ಅಶೋಕ್ ದೇವಾಡಿಗ ಮತ್ತು ಮಂಜುನಾಥ ದೇವಾಡಿಗ ಬಳಗದ ಚಂಡೆ, ಉಡುಪಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜಾನಪದ ಕಂಗೀಲು ನೃತ್ಯ, ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿಯ ಪುಟಾಣಿಗಳ ಕುಣಿತ ಭಜನೆ, ಬಣ್ಣ ಬಣ್ಣದ ಕೊಡೆ ಹಿಡಿದ ಮಹಿಳೆಯರು, ಕಲಶ ಹಿಡಿದ ಮಹಿಳೆಯರು, ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರು ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಹಾಗೂ ಸರ್ವ ಸದಸ್ಯೆಯರು, ಶ್ರೀ ಅಯ್ಯಪ್ಪ ದೇವಸ್ಥಾನ ಡೊಂಬಿವಲಿಯ ಅದ್ಯಕ್ಷರು ಕಾರ್ಯಕಾರಿ ಸಮಿತಿ ಸದಸ್ಯರು, ಮಹಾ ವಿಷ್ಣು ದೇವಸ್ಥಾನ ಡೊಂಬಿವಲಿಯ ಸದಸ್ಯರು ಮತ್ತು ಸದಸ್ಯೆಯರು, ಜಗಜ್ಯೋತಿ ಕಲಾವೃಂದದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಸದಸ್ಯ ಬಾಂದವರು, ಸಾಯಿನಾಥ ಮಿತ್ರ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯ ಬಾಂಧವರು, ಜೈ ಭವಾನಿ, ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಹಾಗೂ ಸದಸ್ಯ ಬಾಂಧವರು, ಕಲ್ಯಾಣ್, ಉಲ್ಲಾಸನಗರ, ಪರಿಸರದ ಹೋಟೆಲ್ ಉದ್ಯಮಿಗಳ ತಂಡ, ಡೊಂಬಿವಲಿಯ ಎಲ್ಲಾ ಸಂಘ- ಸಂಸ್ಥೆಗಳ ಸದಸ್ಯರು ತುಳು ನಾಡಿನ ಸಂಸ್ಕೃತಿಯಂತೆ ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಎಲ್ಲರ ಗಮನ ಸೆಳೆದರು.
ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಧರ್ಮ , ಕಲೆ ಹಾಗೂ ಸಂಸ್ಕೃತಿಯ ಪ್ರತಿಕವಾದ ವಾರಕರಿ ಸಂಪ್ರದಾಯದ ಹರಿನಾಮ ಸ್ಮರಣೇಯ ಭಜನೆ , ದಿವಾ ಪರಿಸರದ ಕೃಷ್ಣ ಪಂಥದ ಭಜನೆ, ಕೇರಳದ ಚಂಡೆ, ಬಂಗಾಲಿ ಸಮೂದಾಯದ ಕುಣಿತ ಭಜನೆ, ತಮಿಳರ ವಾದ್ಯ ಬ್ಯಾಂಡ್, ಡೊಂಬಿವಲಿ ಆಂದ್ರ ಕಲಾ ಸಮೀತಿಯ ಮಹಿಳೆಯರ ಕೊಲಾಟ ಮತ್ತಿತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು







ಡೊಂಬಿವಲಿ ಹೋಟೆಲ್ ಅಸೋಸಿಯೇಷನ್ ನ ವತಿಯಿಂದ ನಡೆದ ಭವ್ಯ ಮೆರವಣಿಗೆಯಲ್ಲಿ ತುಳುನಾಡಿನ ಸಂಪ್ರದಾಯ ಉಡುಗೆ- ತೊಡುಗೆ, ದೈವ ದೇವರ 50 ಕ್ಕೂ ಮಿಕ್ಕಿದ ಟ್ಯಾಬ್ಲೋ, ಹುಲಿ ಕುಣಿತ, ಚಂಡೆ, ನಾಗ ಸಾಧು, ಕಂಗೀಲು ನೃತ್ಯ ಭೂಮಿ ಪುತ್ರರ ಹಾಗೂ ಸಾಲೂದ್ದದಲ್ಲಿ ನೆರೆದವರ ಗಮನ ಸೆಳೆಯಿತು