
ಸಂಕಷ್ಟದ ಸಮಯದಲ್ಲಿ ಸಂಘ ಸಂಸ್ಥೆಗಳೇ ನಮಗೆ ಸಹಕರಿಸುತ್ತದೆ – ಸಂತೋಷ್ ಜಿ ಶೆಟ್ಟಿ ಪನ್ವೆಲ್
ಮುಂಬಯ : ಕುಲಾಲ ಸಂಘ ಮುಂಬಯಿ ಯುವ ವಿಭಾಗದ ವತಿಯಿಂದ ಕ್ರೀಡೋತ್ಸವ ವು ಪೆ. 25 ರಂದು ಕರ್ನಾಲ ಸ್ಪೋರ್ಟ್ಸ್ ಅಕಾಡೆಮಿ ಪನ್ವೆಲ್, ಸೆಕ್ಟರ್ -16 ಕಾಲ್ ಶೇಖರ್ ಕಾಲೇಜ್ ನ ಹತ್ತಿರ ಇಲ್ಲಿ , ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷರಾದ ರಘು ಎ ಮೂಲ್ಯ ಪಾದೆ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಮತ್ತು ಗೌ .ಅಧ್ಯಕ್ಷರಾದ ದೇವದಾಸ್ ಎಲ್ ಕುಲಾಲ್ ಇವರ ಉಪಸ್ಥಿತಿಯಲ್ಲಿ ದಿನಪೂರ್ತಿ ನಡೆಯಿತು,

ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ, ಪನ್ವೆಲ್ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸಂತೋಷ್ ಜಿ ಶೆಟ್ಟಿ ಕ್ರೀಡೆಯಲ್ಲಿ ಬಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಕುಲಾಲ ಸಮಾಜ ನನಗೆ ಬಹಳ ಹತ್ತಿರವಾದ ಸಮಾಜ, ನನ್ನ ಊರಿನ ಸುತ್ತು ಮುತ್ತ ಇರುವ ಹೆಚ್ಚಿನವರು ಕುಲಾಲರು. ಈ ಸಮಾಜ ಬಾಂದವರೊಂದಿಗೆ ನಾನು ನನ್ನ ಶಾಲಾ ಜೀವನವನ್ನು ನಡೆಸಿದ್ದೆ. ಕೊರೋನಾ ಸಮಯದಲ್ಲಿ ಮಾತ್ರವಲ್ಲ ಇತ್ತೀಚೆಗೆ ವ್ಯಕ್ತಿಯೋರ್ವರು ಅಪಘಾತದಿಂದ ಮಡಿದಿದ್ದು ಆ ವ್ಯಕ್ತಿ ಯಾವುದೇ ಸಂಘಟನೆಯಲ್ಲಿಲ್ಲದ ಕಾರಣ ಇಲ್ಲಿ ಯಾರಿಗೂ ತಿಳೆಯದೇ ಇದ್ದು ಊರಿನಿಂದ ನನಗೆ ಪೋನಿನ ಮೂಲಕ ತಿಳಿದುಬಂದಿದ್ದು ನಾನು ಅದಕ್ಕೆ ಸರಿಯಾದ ವ್ಯವಸ್ತೆಯನ್ನು ಮಾಡಿದ್ದೆ. ಆದುದರಿಂದ ಸಮಾಜ ಬಾಂದವರು ಸಮಾಜ ಸಂಘಟನೆಯಲ್ಲಿದ್ದಲ್ಲಿ ಒಬ್ಬರಿಗೊಬ್ಬರು ಪರಿಚಿತರಾಗುತ್ತಾರೆ ಹಾಗೂ ಕಷ್ಟದ ಸಂದರ್ಭದಲ್ಲಿ ಅಗತ್ಯಕ್ಕೆ ಬರುತ್ತಾರೆ ಎನ್ನುತ್ತಾ ಇಂತಹ ಕ್ರೀಡೋತ್ಸವದಲ್ಲಿ ಸಮಾಜ ಬಾಂದವರು ಒಟ್ಟಿಗೆ ಇದ್ದು ಮಾತುಕತೆ ನಡೆಸುವ ಅವಕಾಶ ಸಿಗುತ್ತದೆ. ಇದರಿಂದ ಸಮಾಜ ಬಾಂಧವರು ಬಹಳ ಹತ್ತಿರಕ್ಕೆ ಬರುವಂತಾಗುತ್ತದೆ. ಕ್ರೀಡೋತ್ಸವದಲ್ಲಿ ಬಾಗವಹಿಸಿದ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆಗಳು ಎಂದರು.
ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಇಂತಹ ಕ್ರೀಡೊತ್ಸವ ಪ್ರತೀವರ್ಷ ನಡೆಯಲಿ ಎಲ್ಲರೂ ಕ್ರೀಡೊತ್ಸವದಲ್ಲಿ ಬಾಗವಹಿಸುವಂತಾಗಲಿ. ಎಲ್ಲಾ ಸ್ಥಳೀಯ ಕಾರ್ಯಾಧ್ಯಕ್ಷರು ಸೇರಿ ಇನ್ನೂ ಉತ್ತಮ ರೀತಿಯಲ್ಲಿ ಕ್ರೀಡೋತ್ಸವ ನಡೆಯಲಿ ಎನ್ನುತ್ತಾ ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ನವಿ ಮುಂಬೈ ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ಮಹೇಶ್ ಶೆಟ್ಟಿ
ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಅಂಬರ್ನಾಥ್ ನ ಜೈದೀಪ್ ಕನ್ಸ್ಟ್ರಕ್ಷನ್ ನ ಮಾಲಕ ಜಗದೀಶ್ ಆರ್ ಬಂಜನ್, ಉಪಾಧ್ಯಕ್ಷರು ಡಿ ಐ ಮೂಲ್ಯ ,ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್,ಕೋಶಾಧಿಕಾರಿ ಜಯ ಅಂಚನ್, ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯ ಧ್ಯಕ್ಷ ಸಂಜೀವ ಬಂಗೇರ , ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಲಕ್ಷಣ್ ಸಿ. ಮೂಲ್ಯ, , ವಾಸು ಎಸ್ ಬಂಗೇರ, ಸಂಜೀವ ಬಂಗೇರ, ಉಪಸ್ತರಿದ್ದರು

ಕ್ರೀಡಾ ಉತ್ಸವ ಆಯೋಜಿಸನ ವಲ್ಲಿ ಶ್ರಮಿಸಿದ ಸಂಘದ ವಿವಿಧ ಸ್ಥಳೀಯ ಸಮಿತಿಯ ಯುವ ವಿಭಾಗದ ಪ್ರಸಾದ್ ಮೂಲ್ಯ,ದೀಕ್ಷಿತ್ ಕುಲಾಲ್,ಯುವ ಕ್ರೀಡಾ ಸಂಘಟಕರುದ ಸೂರಜ್ ಕುಲಾಲ್, ಬಿನಿತ್ ಸಾಲಿಯಾನ್, ವೇಣುಗೋಪಾಲ ಕರ್ಕೇರ, ವಿನಯ ಎಸ್. ತೇಜೇಶ್ ಮೂಲ್ಯ,ರೋಶನ್ ಬಂಗೇರ, ಅಕ್ಷತ್ ಮೂಲ್ಯ, ದೀಕ್ಷಾ ಮೂಲ್ಯ, ಗುರುಪ್ರಸಾದ್ ಮೂಲ್ಯ, ಚೇತನ್ ಬಂಗೇರ , ಅಮಿತ ಬಂಗೇರ,ಭಾಗ್ಯ ಬಂಗೇರ, ನಿಶಿತಾ ಬಂಗೇರ,ನವ್ಯಾ ಮೂಲ್ಯ,ಮೇಘಾ ಬಂಜನ್ ವೇದಿಕೆ ಗಣ್ಯರು ಗೌರವಿಸಿದ್ದರು

ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್, ನಿರೂಪಿಸಿದರು, ಎಲ್. ಅರ್, ಮೂಲ್ಯ ಅತಿಥಿಗಳನ್ನು ಪರಿಚಯಿಸಿದರು. ಕ್ರೀಡೋತ್ಸವ ಯಶಸ್ಸಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಸದಸ್ಯರನ್ನು ಗೌರವಿಸಲಾಯಿತು.
——————
ಕುಲಾಲ ಸಂಘದ ಯುವ ಕ್ರೀಡೋತ್ಸವ 2024.
ಯುವ ಕ್ರಿಕೆಟ್ ನಲ್ಲಿ ಮೊದಲ ಬಹುಮಾನ ಚರ್ಚ್ ಗೇಟ್ ದಹಿಸರ್.ದ್ವಿತೀಯ ಬಹುಮಾನ : ಸಿ ಏಸ್ ಟಿ, ಮುಲುಂಡು.
50ವರ್ಷ ಮೇಲಿನವರ ಬಾಕ್ಸ್ ಕ್ರಿಕೆಟ್ ಪಂದ್ಯ:
ಮೊದಲ ಬಹುಮಾನ: ಮೀರಾ ರೋಡ್- ವಿರಾರ್.
ದ್ವೀತಿಯ ಬಹುಮಾನ: ಠಾಣೆ-ಕಸಾರ -ಕರ್ಜತ್.
ವನಿತೆಯರ ಬಾಕ್ಸ್ ಕ್ರಿಕೆಟ್ ಪಂದ್ಯ:
ಮೊದಲ ಬಹುಮಾನ: ಮೀರಾ ರೋಡ್ – ವೀರಾರ್.
ದ್ವಿತೀಯ ಬಹುಮಾನ,: ಸಿ ಎಸ್ ಟಿ – ಮುಲುಂಡ್ – ಮನ್ ಖುರ್ಡ್.,
ಮಹಿಳೆಯರ ತ್ರೋಬಾಲ್:
ಮೊದಲ ಬಹುಮಾನ: ಠಾಣೆ – ಕಶಾರ – ಖರ್ಜತ್.
ದ್ವಿತೀಯ ಬಹುಮಾನ: ಮೀರಾ ರೋಡ್ – ವಿರಾರ್.
————-**–**———————–
ರಘು ಮೂಲ್ಯ ಪಾದೆ ಬೆಟ್ಟು
ಕುಲಾಲ ಸಂಘದ ಅಧ್ಯಕ್ಷರಾದ ರಘು ಮೂಲ್ಯ ಅವರು ಮಾತನಾಡುತ್ತ ಕ್ರೀಡೋತ್ಸವ ಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಸಂದಿಗ್ದ ಪರಿಸ್ಥಿತಿಯಲ್ಲಿ ಸಮಾಜ ಬಾಂಧವರಿಗೆ ಸಹಕರಿಸಿದ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಯವರನ್ನು ಅಭಿನಂದಿಸಿ, ಕ್ರೀಡಾ ಉತ್ಸವ ಯಶಸ್ವಿಯಾಗುವಲ್ಲಿ ಎಲ್ಲಾ ಸ್ಥಳೀಯ ಸಮಿತಿಯ ಸದಸ್ಯರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ, ಸಂಘದ ಚಟುವಟಿಕೆಗಳಿಗೆ ಸಮಾಜ ಬಾಂಧವರು ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವುದರಿಂದ ಸಂಘದ ಎಲ್ಲಾ ಯೋಜನೆಗಳು ಯಶಸ್ವಿಯಾಗು ನಡೆಯುವಲ್ಲಿ ಸಹಕಾರಿಯಾಗುತ್ತದೆ, ಮುಂದೆ ಕ್ರೀಡೋತ್ಸವ ಇನ್ನು ಅದ್ದೂರಿಯಾಗಿ ನಡೆಯುವಂತೆ ಮಾಡಲು ಎಲ್ಲರು ಸಹಕರಿಸ ಬೇಕೆಂದರು. ,
———————-
ಮಂಗಳೂರಿನ ಕುಲಾಲ ಭವನದ ಯೋಜನೆ ಈ ವರ್ಷ ಪೂರ್ಣಗೊಳ್ಳಲು ಸಿದ್ಧತೆ: ದೇವದಾಸ್ ಎಲ್ ಕುಲಾಲ್,
ಸಂಘದ ಗೌರವ ಅಧ್ಯಕ್ಷ ದೇವದಾಸ್ ಎಲ್ ಕುಲಾಲ್ ಪ್ರಸ್ತಾವಿಕ ಮಾತನಾಡುತ್ತಾ ಎಂಟು ದಶಕಗಳಿಂದ ಮುಂಬೈ ನಗರದಲ್ಲಿ ಕುಲಾಲ ಸಮಾಜ ಬಾಂಧವರನ್ನು ಒಗ್ಗಟ್ಟು ಮಾಡುವಲ್ಲಿ ಅವರಿಗೆ ಆಶ್ರಯ ನೀಡುವಲ್ಲಿ ಸಂಘ ಅಪಾರವಾಗಿ ಕ್ಷಮಿಸಿದೆ ಮಂಗಳೂರಿನಲ್ಲಿ ಸುಮಾರು 15 ಕೋಟಿ ವೆಚ್ಚದ ಭವ್ಯ ಕುಲಾಲ ಭವನ ನಿರ್ಮಾಣ ಕಾರ್ಯ ವೇಗದಲ್ಲಿ ನಡೆಯುತ್ತಿದ್ದು ಈ ವರ್ಷ ಪೂರ್ತಿ ಗೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದು ಸಮುದಾಯ ಭವನ ಲೋಕರ್ಪಣೆಗೊಂಡ ಬಳಿಕ ಸಮಾಜದ ಬಂಧುಗಳಿಗೆ ಇದರ ಆದಾಯದ ಮೂಲಕ ಇನ್ನಷ್ಟು ಸಹಕಾರ ನೀಡಲು ಸಾಧ್ಯವಾಗುತ್ತದೆ ಎಂದು ನುಡಿದರು