
ಡೊಂಬಿವಲಿ : ತುಳು ವೆಲ್‌ಫೇರ್ ಅಸೋಸಿಯೇಶನ್ನ ಮಹಿಳಾ విభాగదించి సంభోది కజిరియల్లి నూకనిన ಮಹಿಳಾ ವಿಭಾಗದ ಅಧ್ಯಕ್ಷೆ ವಿನೋದ ಪುತ್ರನ್ ಅವರ ನೇತೃತ್ವದಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ತುಳು ವೆಲ್ ಫೇರ್ ಅಸೋಸಿಯೇಶನ್ ಅಧ್ಯಕ್ಷ ರವಿ ಸನಿಲ್, ಮುಖ್ಯ ಅತಿಥಿಯಾಗಿ ಕರ್ನಾಟಕ ಸಂಘ ಡೊಂಬಿವಲಿ ಮಹಿಳಾ ವಿಭಾಗದ ಕಾರ್ಯದರ್ಶಿ ಮಾಧುರಿಕಾ ಬಂಗೇರ, ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಮತ್ತು ತುಳುಶ್ರೀ ಕೋ- ಆಪರೇಟಿವ್ ಸೊಸೈಟಿಯ ಉಪ ಕಾರ್ಯ ಧ್ಯಕ್ಷ ನಾಗೇಶ್ ಹೊಸಬೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳು ವೆಲ್‌ಫೇರ್ ಅಸೋಸಿಯೇಶನ್‌ನ ಮಾಸಿ ಅಧ್ಯಕ್ಷ ಹಲವಾರು ವರ್ಷಗಳಿಂದ ಸಂಘದ ಏಳಿಗೆಗಾಗಿ ದುಡಿದ ನಾರಾಯಣ ಪೂಜಾರಿ ಮತ್ತು ನೀರಜಾಕ್ಷಿ ದಂಪತಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ನಾರಾಯಣ ಪೂಜಾರಿಯವರು ಸನ್ಮಾನಕ್ಕೆ ಉತ್ತರಿಸುತ್ತಾ ಈ ಅಸೋಸಿಯೇಶನ್ನ ಮಹಿಳಾ ವಿಭಾಗ ಪ್ರಾರಂಭವಾಗಿ 18 ವರ್ಷವಾಯಿತು. ಇಲ್ಲಿ ಎಲ್ಲಾ ತುಳು ಕನ್ನಡಿಗರು ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯ ಮಹಿಳೆಯವರಿಂದ ಉತ್ತಮ ಕೆಲಸ ಒಗ್ಗಟ್ಟಿನಿಂದ ನಡೆಯುತ್ತಿದೆ. ನಿರಂತೆ ಅಭಿವೃದ್ಧಿ ಹೊಂದಲಿ ಎಂದು
ಹಾರೈಸಿದರು. ಉಪಾಧ್ಯಕ್ಷ ವಸಂತ ಸುವರ್ಣ ಮಾತನಡುತ್ತಾ ಯಾವ ಸಂಸ್ಥೆಯಲ್ಲಿ ಮಹಿಳೆಯಲ್ಲಿ ಹೆಚ್ಚಾಗಿ ಮಹಿಳೆಯರು ಇದ್ದಾರೆಯೋ ಅಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತದೆ ಎಂದು ನಾನು ಕಂಡುಕೊಂಡ ಸತ್ಯ. ಹೆಣ್ಣಾಗಿ ಹುಟ್ಟಿದ ನಂತರ ಹೆಣ್ಣಾದವಳು ಕುಂಕುಮ ಹಚ್ಚಬೇಕು. ಮದುವೆಯಾದ ಮೇಲೆಯೇ ಹಚ್ಚಿಬೇಕೆಂದಿಲ್ಲ. ಸಭೆಯಲ್ಲಿ ಯಾರಾದರೂ ಸುಮಂಗಲೆಯರು ಎಂದು ಹೇಳಿದಲ್ಲಿ ಅದಕ್ಕೆ ಬೇಸರಿಸದೆ ಪ್ರತಿಯೊಬ್ಬ ಮಹಿಳೆಯುರ ಇಂತಹ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಬೇಕು. ನಿಮ್ಮಲ್ಲಿ ಉತ್ತಮ ಸಂಘಟನೆ ಇದೆ. ಇನ್ನು ಮುಂದೆಯೂ ಒಳ್ಕೊಳ್ಳೆಯ ಕಾರ್ಯಕ್ರಮಗಳು ನಡೆಯಲಿ ಎಂದರು.
ದೇವದಾಸ್ ಎಲ್. ಕುಲಾಲ್ ಮಾತನಾಡುತ್ತಾ ಈ ಅಸೋಸಿಯೇಶನ್ ಸ್ಥಾಪನೆ ಮಾಡುವಾಗ ಒಳ್ಳೆಯ ಉದ್ದೇಶ ಇಟ್ಟುಕೊಂಡು ನಾವು ಮಾಡಿದ್ದೇವೆ. ದೇವರ ದಯೆಯಿಂದ ನಿಮ್ಮೆಲ್ಲ ಪರಿಶ್ರಮದಿಂದ ಇಂದು ಸಾರ್ಥಕಗೊಂಡಿದೆ. ಅದಕ್ಕೆ ಈ ಜಾಗದ ಮಹತ್ವ ಎಂದು ಹೇಳಬಲ್ಲೆ, ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಬಹಳ ಮಹತ್ವವಿದೆ. ಇನ್ನು ಮುಂದೆಯೂ ಮಹಿಳೆಯವರಿಂದ ಉತ್ತಮ ಕಾರ್ಯಕ್ರಮ ನಡೆಯಲಿ ಎಂದರು.
ತುಳು ವೆಲ್‌ಫೇರ್ ಅಸೋಸಿಯೇಶನ್‌ನ ಮಾಜಿ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿನೋದಾ ಶೆಟ್ಟಿ ಮಾತನಾಡುತ್ತಾ, ಇಂತಹ ಹಳದಿ ಕುಂಕುಮ ಕಾರ್ಯಕ್ರಮಕ್ಕೆ ವಿಧವೆ ಮಹಿಳೆಯವರನ್ನು ಕೂಡ ಆಮಂತ್ರಿಸಬೇಕು. ಅವರಿಗೂ ವೇದಿಕೆಯನ್ನು ಕಲ್ಪಿಸಕೊಡಬೇಕು. ಇದರ ಬಗ್ಗೆ ನನ್ನ ಅಧ್ಯಕ್ಷೀಯ ಕಾಲಾವದಿಯಲ್ಲಿ ಹಲವಾರು ವೇದಿಕೆಯಲ್ಲಿ ಪ್ರಸ್ತಾಪಿಸಿರುವೆನು. ಮಹಿಳೆಯವರ ಜೀವನದಲ್ಲಿ ಒಂದೇ ರೀತಿ ಇರುವುದು ಹೇಳಲು ಆಗುವುದಿಲ್ಲ. ಜೀವನದಲ್ಲಿ
ವ್ಯತ್ಯಾಸ ತೊಂದರೆಗಳು ಆಗುವುದು ಸಹಜ, ವಿಧವೆಯವರನನ್ನು ಇಂತಹ ಕಾರ್ಯಕ್ರಮದಲ್ಲಿ ದೂರವಿಡುವುದು ಸಮಂಜಸ ಅಲ್ಲ. ಸಂಘ-ಸಂಸ್ಥೆಗಳು ಇದಕ್ಕೆ ಪ್ರೋತ್ಸಾಹ ಕೊಡಬೇಕು ಎಂದು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷ ರವಿ ಸನಿಲ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಹಳದಿ ಕುಂಕುಮ ಕಾರ್ಯಕ್ರಮಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಮಹಿಳೆಯವರಿಗೆ ಸಂತೋಷವನ್ನು ವ್ಯಕ್ತಪಡಿಸಿದರು. ಅಂತೆಯೇ ಕುಂಕುಮವು ಆರೋಗ್ಯ ಮತ್ತು ಧೈರ್ಯದ ಸಂಕೇತ ದೇವಿ ಶಕ್ತಿ, ನಾರಿ ಶಕ್ತಿ ನಿಮ್ಮಲ್ಲಿ ಇದೆ. ಸಪ್ತ ದುರ್ಗೆಯವರನ್ನು ಆರಾಧಿಸುವವರು, ಮುಂದೆಯೂ ಈ ಅಸೋಸಿಯೇಶನ್ ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮ ಸಹಕಾರ, ಉಪಸ್ಥಿತಿ ಅಗತ್ಯ. ನನ್ನ ಸಂಪೂರ್ಣ ಬೆಂಬಲ ಇರುವುದಾಗಿ ಆಶ್ವಾಸನೆ ನೀಡಿದರು.
ಮುಖ್ಯ ಅತಿಥಿ ಶ್ರೀಮತಿ ಮಾಧುರಿಕಾ ಬಂಗೇರ ಮಾತನಾಡುತ್ತಾ ಈ ಹಳದಿ ಕುಂಕುಮ ಕಾರ್ಯಕ್ರಮ ನಮ್ಮ ಕರ್ಮ ಭೂಮಿಯಲ್ಲಿ ಹೆಚ್ಚಿವನರು ಆಚರಿಸುತ್ತಾರೆ. ಹಳದಿ ಕುಂಕುಮ ಹಚ್ಚುವುದು ಆರೋಗ್ಯದ ಸಂಕೇತ ಇದಕ್ಕೆ ಕ್ಯಾನ್ಸರ್ ರೋಗ ರೋಗವನ್ನು ವಿರೋಧಿಸುವ ಶಕ್ತಿ ಇದೆ, ಎಲ್ಲಾ ಮಹಿಳೆಯರು ಹಳದಿ ಕುಂಕುಮ ಹಚ್ಚಬೇಕು. ಈ ಅಸೋಸಿಯೇಶನ್ನನ ಮಹಿಳೆಯವರು ಆಚರಿಸಲ್ಪಡ್ಡ ಹಳದಿ ಕುಂಕುಮ ಕಾರ್ಯಕ್ರಮಕ್ಕೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿ ದರು.
ಆನಂದ ಬಿ. ಮೂಲ್ಯ ಮತ್ತು ಗಂಗಾಧರ ಶೆಟ್ಟಿಗಾರ್ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷೆ ವಿನೋದಾ ಪಿ. ಪುತ್ರನ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಆರಸಿನ ಕುಂಕುಮದ ಮಹತ್ವವನ್ನು ತಿಳಿಸುತ್ತಾ ಸನಾತನ ಧರ್ಮದಲ್ಲಿ ಯಾವುದೇ ಒಂದು ಪೂಜೆ ಶುಭ ಸಮಾರಂಭದಲ್ಲಿ ಕುಂಕುಮ ಅರಸಿನಕ್ಕೆ ಪವಿತ್ರವಾದ ಪೂಜನೀಯ ಸ್ಥಾನವಿದೆ. ಮಹಿಳೆಯವರು ಹಳದಿ ಕುಂಕುಮ ಹಾಕಿದ್ದಲ್ಲಿ ತನ್ನ ಶಕ್ತಿ ಜಾಗೃತಿ ಆಗುವುದರ ಮೂಲಕ ದೇವಿಯ ಪ್ರಚಂಡ ಶಕ್ತಿಯಿಂದ ದುಷ್ಟ ಶಕ್ತಿಯು ದೂರವಾಗುವುದು. ಎಲ್ಲರಿಗೂ ದೇವಿಯ ಕೃಪಾಕಟಾಕ್ಷೆಯು ಲಭಿಸಲಿ, ಹಾಗೆಯೇ ಕುಂಕುಮ ಹಾಕಿಕೊಂಡು ಎಳ್ಳುಬೆಳ್ಳ ಸವೆದು ವರ್ಷವಿಡೀ ಪ್ರೀತಿಯಿಂದ ಮಹಿಳೆಯರು ಒಬ್ಬರು ಇನ್ನೊಬ್ಬರನ್ನು ಗೌರವಿಸಿ, ಪ್ರೀತಿಸಿ ಅರ್ಥಮಾಡಿಕೊಂಡು ಸಹಕಾರ ಭಾವನೆಯಿಂದ ಬಾಳೋಣ ಎಂದು ಕಳಕಳಿಯಿಂದ ವಿನಂತಿಸಿದರು.
ಅಂದು ಸಂಜೆ ಭಜನೆ ಕಾರ್ಯಕ್ರಮ ನೆರೆವೇರಿಸಿ, ಮಂಗಳಾರತಿಯ ನಂತರ ಸಭಾ ಕಾರ್ಯಕ್ರಮ ನಂತರ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು, ಅರಸಿನ ಕುಂಕುಮವನ್ನು ಒಬ್ಬೊರಿಗೊಬ್ಬರು ಹಚ್ಚಿ ಕಾರ್ಯಕ್ರಮ ವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ಆರಂಭದಲ್ಲಿ ಯಶೋಧ ಕರ್ಕೇರ ಮತ್ತು ಶೋಭಾ ಶೆಟ್ಟಿ ಪ್ರಾರ್ಥನೆಗೈದರು. ಒಗಟು ಕಾರ್ಯಕ್ರಮವನ್ನು ಕುಶಲಾ ಜಿ.ಬಂಗೇರ ನಡೆಸಿಕೊಟ್ಟರು. ಸುನಂದ ಶೆಟ್ಟಿಯವರು ಜಾನಪದ ಗೀತೆ ಹಾಡಿದರು. ಶಾಂತಾ ಅಮೀನ್ ಮತ್ತು ರೇಖಾ ಬಿ, ಮೂಲ್ಯ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಗೆ ಧನ್ಯವಾದಗೈದರು.