
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ( KFDC ) ನೂತನ ಅಧ್ಯಕ್ಷರಾಗಿ ಸನ್ಮಾನ್ಯ ಶ್ರೀಮತಿ ಮಾಲಾ ನಾರಾಯಣ ರಾವ್ ಅವರು ಮಂಗಳೂರಿನ KFDC ಸಭಾಂಗಣದಲ್ಲಿ ದಿನಾಂಕ 02-03-2024 ರಂದು ಜವಾಬ್ದಾರಿ ಸ್ವೀಕರಿಸಿದರು.

ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷರಾದ ಡಾ.ದೇವಿಪ್ರಸಾದ್ ಹೆಜಮಾಡಿ, ಮಂಗಳೂರು ಕರಾವಳಿಯ ಯಾಂತ್ರಿಕ ಬೋಟ್ ಯೂನಿಯನ್ ಅಧ್ಯಕ್ಷರಾದ ಶ್ರೀ ಚೇತನ್ ಬೆಂಗ್ರೆ , ಮಾತಾ ಅಮ್ರತಾನಂದಮಯಿ ಮಠದ ನಿರ್ದೇಶಕರಾದ ಶ್ರೀ ಯತೀಶ್ ಬೈಕಂಪಾಡಿ, ಉರ್ವ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರರಾದ ಶ್ರೀ ಲಕ್ಷ್ಮಣ ಅಮೀನ್ ಕೋಡಿಕಲ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಬಂಗೇರ ಬೋಳೂರು, ನಿರ್ದೇಶಕರಾದ ಶ್ರೀ ಪುರುಷೋತ್ತಮ್ , ಶ್ರೀ ಮಾತಾ ಅಮ್ರತಾನಂದಮಯಿ ಮಠದ ಉಪಾಧ್ಯಕ್ಷರಾದ ಶ್ರೀ ಸುರೇಶ್ ಅಮೀನ್, ಹಾಗೂ ಮೀನುಗಾರ ಸಮುದಾಯದ ಅನೇಕ ಮುಖಂಡರ ಸಮ್ಮುಖದಲ್ಲಿ ಶ್ರೀ ಉರ್ವ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.