September 6, 2026
Mumbai News Kannada
ಮುಂಬಯಿ

ಮೈಸೂರು ಅಸೋಸಿಯೇಷನಲ್ಲಿ ಶ್ರೀರಂಗ ನಾಟಕೋತ್ಸವ  ಸಮರೋಪ





ಮುಂಬಯಿ , ಶ್ರೀರಂಗ ನಾಟಕೋತ್ಸವದ ಕೊನೆಯ ದಿನ ಪೆ 19 ರಂದು ಪ್ರದರ್ಶಿಸಲ್ಪಟ್ಟ ನಾಟಕ: ‘ಸ್ವಾತಂತ್ರ ಸಮರ ಕರುನಾಡು ಅಮರ’.
ಮಾಲೂರಿನಲ್ಲಿ ಆರಂಭವಾಗಿ ಬೆಂಗಳೂರಿನಲ್ಲಿ ನೆಲೆ ನಿಂತು ಕರ್ನಾಟಕದದಾದ್ಯಂತ ಪಸರಿಸಿ ದೇಶದಲ್ಲೆಡೆ ಹಬ್ಬುತ್ತಿರುವ ತಂಡ ‘ರಂಗ ವಿಜಯ’. ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತನ್ನನ್ನು ತಾನು ಸದಾ ನಿರೂಪಿಸಿಕೊಂಡಿರುವ ಈ ತಂಡ ‘ರಂಗಭೂಮಿ ನನ್ನುಸಿರು’ ಎಂಬ ಧ್ಯೇಯದೊಂದಿಗೆ ಕಾರ್ಯೋನ್ಮುಖವಾಗಿದೆ.
ಈ ನಾಟಕವನ್ನು ಖ್ಯಾತ ಚಿತ್ರ ಕಲಾವಿದರು, ಶಿಕ್ಷಕರು ಮತ್ತು ಗಾಯಕರು ಆದಂತ ಡಾ. ಟಿ ಲಕ್ಷ್ಮೀನಾರಾಯಣ ಅವರು ಈ ನಾಟಕವನ್ನು ರಚಿಸಿ, ಸಂಗೀತ ನಿರ್ದೇಶನ ಮಾಡಿ ಸ್ವತಃ ತಾವೇ ಹಾಡಿದ್ದಾರೆ.  ಹಾಗೆಯೇ ತನ್ನ 7ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪಾದರ್ಪಣೆ ಮಾಡಿ ಸಿಜಿಕೆ ಅವರ ಗರಡಿಯಲ್ಲಿ ಪಳಗಿದ ಶ್ರೀ ಮಾಲೂರು ವಿಜಿ ಅವರು ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ.
ಈ ನಾಟಕವು ಸುಮಾರು 30ಕ್ಕೂ ಹೆಚ್ಚು ನಟರನ್ನು ಒಳಗೊಂಡಂತ ಪ್ರಯೋಗ ಎಂದು ಹೇಳುವಲ್ಲಿ ತನ್ನ ವಿಶೇಷತೆಯನ್ನು ಸಾರಿಕೊಳ್ಳುತ್ತದೆ. ರಾಣಿ ಅಬ್ಬಕ್ಕನಂತ ವೀರ ರಾಣಿಯ ಯಶೋಗಾಥೆ ಪೋರ್ಚುಗೀಸರ ವಿರುದ್ಧ ಹೋರಾಡಿದಂತ ಕೆಚ್ಚೆದೆಯ ಕಥೆ ಹೇಳುವ ಮೂಲಕ  ಈ ನಾಟಕ ಆರಂಭವಾಗುತ್ತದೆ.
ಕರ್ನಾಟಕದಲ್ಲಿ ಮನೆ ಮಾತಾಗಿರುವಂತ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರಂಥ ವಿರೋಚಿತ ಸಂದರ್ಭದಲ್ಲಿ ಈ ನಾಟಕದಲ್ಲಿ ಕಟ್ಟಿಕೊಡಲಾಗಿದೆ. ಅಂತೆಯೇ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳಾದ ಉಪ್ಪಿನ ಸತ್ಯಾಗ್ರಹ, ಶಿವಪುರದ ದ್ವಜ ಸತ್ಯಾಗ್ರಹ, ಈಸೂರು ದಂಗೆ,  ವಿದುರಾಶ್ವತದ ಮಾರಣಹೋಮ … ಇಂತಹ ಚರಿತ್ರೆ ಪುಟಗಳಲ್ಲಿ ಬರೆಯಬಲ್ಲಂತ ಸಂದರ್ಭಗಳನ್ನ ಈ ನಾಟಕದಲ್ಲಿ ಕಟ್ಟಿಕೊಟ್ಟು ಅದಕ್ಕಾಗಿ ಬಲಿದಾನ ಮಾಡಿದಂತ ಸರ್ವಸ್ವವನ್ನು ಕಳೆದುಕೊಂಡಂತಹ ಸ್ವಾತಂತ್ರ್ಯ ಯೋಧರ ಸ್ಮರಣೆಯನ್ನು ಮಾಡುವಂತಹ ಪ್ರಯತ್ನದಲ್ಲಿ ಒಂದೊಂದು ದೃಶ್ಯವನ್ನು ಮನದಟ್ಟಾಗುವಂತೆ ಮೂಡಿಸಲಾಗಿದೆ. ಸ್ವಾತಂತ್ರ್ಯಾನಂತರದ ನಾಲ್ಕು ಸಿಂಹಗಳ ತತ್ವಗಳನ್ನು ದೇಶದ ಪ್ರಜೆಗಳಿಗೆ ಅವು ಸಾರಬಹುದಾದ ಸಂದೇಶಗಳನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ

 BMM_8687.JPG



Related posts

ಮುಂಬೈ : ವಿಕ್ರೋಲಿಯ ಪಾರ್ಕ್ ಸೈಟ್‌ನ ವರ್ಷಾ ನಗರದ ಜನಕಲ್ಯಾಣ್ ಸೊಸೈಟಿಯಲ್ಲಿ ಭೂಕುಸಿತ, ಇಬ್ಬರು ಸಾವು

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಅದ್ಧೂರಿ ಕ್ರೀಡಾ ಕೂಟ ದಂಗಲ್ 2024 ಸಮಾರೋಪ ಸಮಾರಂಭ

Mumbai News Desk

ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಸಂಪನ್ನ.

Mumbai News Desk

ಗೋರೆಗಾಂವ್ ಶ್ರೀ ಶಾಂತಾ ದುರ್ಗಾದೇವಿ ದೇವಸ್ಥಾನ -ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ .

Mumbai News Desk

ಬಂಟರ ಸಂಘದಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ,

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಡೊಂಬಿವಲಿ ಇದರ 10ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk