
ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರ ವಸಯಿ ಭಜನಾ ಮಂಡಳಿಯ ಸದಸ್ಯರು ಪಂ. ನಾಗರಹಳ್ಳಿ ಪ್ರಹ್ಲಾದಚಾರ್ ಆಶೀರ್ವಾದದೊಂದಿಗೆ
ಫೆ. 26ರಂದು ಕಜೆ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮ ಕಳಶದ ಪ್ರಯುಕ್ತ ಹರಿದಾಸರ ಕೀರ್ತನೆಯನ್ನು ಸೇವೆಯ ರೂಪದಲ್ಲಿ ಮಮತಾ ಡಿ ಶೆಟ್ಟಿ ಅವರ ನೇತೃತ್ವದಲ್ಲಿ ನೆರವೇರಿಸಿದರು.
ಆನಂತರ ಪುಣ್ಯಕ್ಷೇತ್ರಗಳಾದ ಕೊಡಡ್ಕ ಅನ್ನಪೂರ್ಣೇಶ್ವರಿ, ಕೊಲ್ಲೂರು ಮೂಕಾಂಬಿಕಾ, ಕಮಲಶಿಲೆ ಮತ್ತು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಹರಿದಾಸರ ಕೀರ್ತನೆಯನ್ನು ಪ್ರಸ್ತುತಪಡಿಸಿದ್ದರು. ತಂಡದಲ್ಲಿ ಶೀಲಾ ಪುಂಜ, ಲಕ್ಷ್ಮೀ ಶೆಟ್ಟಿ , ಲೀಲಾಶೆಟ್ಟಿ ,ಜಯಂತಿ ಕೋಟ್ಯಾನ್, ಲತಾ ಶೆಟ್ಟಿ, ಮಾಲತಿ ಶೇರಿಗಾರ್, ರೇಖಾ ಶೆಟ್ಟಿ, ಮತ್ತು ಶ್ಯಾಮಲ ಶೆಟ್ಟಿ ಪಾಲ್ಗೊಂಡಿದ್ದರು.