
ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ಅಧ್ಯಕ್ಷರಾಗಿ ಲವ ಎನ್. ಕರ್ಕೇರ ಮರು ಆಯ್ಕೆ.
ಕಾಪು , ಮಾ5:: ಕಾಪುವಿನಲ್ಲಿ ಹಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ಜನಪ್ರಿಯ ಆರ್ಥಿಕ ಸಂಸ್ಥೆ ” ಅಕ್ಷಯಧಾರ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ” ಇದರ ನಿರ್ದೇಶಕ ಮಂಡಳಿಯ ಸಭೆಯು ಮಾರ್ಚ್ 5ರಂದು ನಡೆಯಿತು.

ಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ , ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲವ ಕರ್ಕೆರ ಅವರು ಸತತ ಮೂರನೇ ಅವಧಿಗೆ ಆರ್ಥಿಕ ಸಂಸ್ಥೆಯ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಕ್ಷಯಧಾರಾ ಸೊಸೈಟಿಯ ಉಪಾಧ್ಯಕ್ಷರಾಗಿ ಇರ್ಫಾನ್ , ನಿರ್ದೇಶಕರುಗಳಾಗಿ ಜಗದೀಶ್ ಮೆಂಡನ್, ಶಿವರಾಂ ಆಚಾರ್ಯ , ಉತ್ತಮ್ ಕುಮಾರ್ ಬಂಗೇರಾ, ಪ್ರದೀಪ್ .ಯು. , ರಮೇಶ್ ಶೆಟ್ಟಿ ಕಲ್ಯ , ಯೊಗೀಶ್ ಆಚಾರ್ಯ , ಶಾಫಿ , ನಂದಕಿಶೊರ್ , ಶ್ರೀಮತಿ ಸುಜಾತ ಹಾಗೂ ಶ್ರೀಮತಿ ವಿಮಲ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಜಯಂತಿ ಅವರು ಕರ್ತವ್ಯ ನಿರ್ವಹಿಸಿದರು.
ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಳೆದ 14 ವರ್ಷಗಳಿಂದ ತನ್ನ ಉತ್ಕರ್ಷ ಸೇವೆ, ಹಾಗೂ ಆಕರ್ಷಕ ಬಡ್ಡಿದರದ ಸಾಲ, ಸೌಲ್ಯಭ್ಯದಿಂದ ಗ್ರಾಹಕರ, ಠೇವಣಿದಾರರ, ಉದ್ದಿಮೆದಾರರ ಮೆಚ್ಚಿನ ಆರ್ಥಿಕ ಸಂಸ್ಥೆಯಾಗಿದೆ.