ಜಗಜ್ಯೋತಿ ಕಲಾವೃಂದದ ವತಿಯಿಂದ ಮಹಾ ಶಿವರಾತ್ರಿ ಪೂಜೆಯನ್ನು ತಾ. 08.03.2024 ಶುಕ್ರವಾರ ದಂದು ವಿವೇಕಾನಂದ ಶಾಲೆಯ ಹತ್ತಿರದ ಪಂಚಮ್ ಕಟ್ಟಡದ ವೃಂದದ ಕಚೇರಿಯಲ್ಲಿ ನೆರವೇರಿಸಲಾಗುವುದು.
ಮಧ್ಯಾಹ್ನ 4.00 ರಿಂದ 7.00 ರವರೆಗೆ ಭಜನೆ 7.15 ಕ್ಕೆ ಮಂಗಳಾರತಿ, ತದನಂತರ ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾದಿಗಳು ಮತ್ತು ಸಂಘದ ಹಿತೈಷಿಗಳಾದ ತಾವೆಲ್ಲರೂ ಅಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕಾಗಿ ಅಧ್ಯಕ್ಷರು ಮತ್ತು ಸರ್ವಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.