32 C
Mumbai
March 7, 2026
Mumbai News Kannada
ಪ್ರಕಟಣೆ

ಸಾಫಲ್ಯ ಸೇವಾ ಸಂಘ.ಮುಂಬಯಿ ಮಾ 9;ಸಾಫಲ್ಯ ಸ್ತ್ರೀ ಶಕ್ತಿ ಕಾರ್ಯಕ್ರಮ





ಮುಂಬಯಿ ಮಾ 6.ಸಾಫಲ್ಸಾಫಲ್ಯ ಸಮಾಜ ಬಾಂಧವರ ಅಭಿವೃದ್ಧಿಗಾಗಿ ಸಾಫಲ್ಯ ಸೇವಾ ಸಂಘವು  ಮುಂಬಯಿ ಮಹಾನಗರದಲ್ಲಿ  ನಿರಂತರ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದರ ಮಹಿಳಾ ವಿಭಾಗದ ವತಿಯಿಂದಮಹಿಳಾ ದಿನಾಚರಣೆಯ ಪ್ರಯುಕ್ತ ಸಾಫಲ್ಯ ಸ್ತ್ರೀ ಶಕ್ತಿ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

 ಮಾರ್ಚ್ 9 ರ ಶನಿವಾರ ಮಧ್ಯಾಹ್ನ   3.00 ರಿಂದ ಕುರ್ಲಾ  ಬಂಟರ ಭವನದ ಆನೆಕ್ಸ್ ಹಾಲ್ ನಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಪಲ್ಯರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಾಟ್ಯಗುರು ಕುಮಾರಿ ಲತಿಕಾ ಶ್ರೀಯಾನ್, ಸಮಾಜ ಸೇವಕಿ  ಶಕುಂತಲಾ ಪುತ್ರನ್, ಲೇಖಕಿ  ಸುಮಿತ್ರಾ ಬಿ ಗುಜರನ್, ಸಂಪಾದಕಿ, ಲೇಖಕಿ ಡಾ. ಜಿ ಪಿ ಕುಸುಮಾ, ಮತ್ತು ಸಮಾಜ ಸೇವಕಿ ಸುಮಿತ್ರ ವಿ ಕುಂಜರ್ ಅತಿಥಿಗಳಾಗಿ ಆಗಮಿಸಲಿದ್ದಾರೆ. 

  ಈ ಸಂದರ್ಭದಲ್ಲಿ ಸ  ಸಾಫಲ್ಯ ಸಮಾಜದ ಯಶಸ್ವಿ ಮಹಿಳೆಯರಾದ  ರತ್ನಾ ಕುಂದರ್, ಮಂಜುಳಾ ಅಮೀನ್, ಸುನೀತಾ ಬಂಗೇರ, ಉಷಾ  ವಿ. ಸಪಳಿಗ ಹಾಗೂ ದೀಪಾ ಸುವರ್ಣ ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ,

ಕಾರ್ಯಕ್ರಮವು ಲಲಿತಾ ಸಹಸ್ರನಾಮ , ಹಳದಿ ಕುಂಕುಮ, ದಿ ಆರ್ಟ್ ಆಫ್  ಲೀವಿಂಗ್  ವಿಶೇಷ  ಕಾರ್ಯಕ್ರಮ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ  ಮನೋರಂಜನೆಗಾಗಿ ಗೇಮ್ಸ್ ಗಳನ್ನೂ ಒಳಗೊಂಡಿದೆ.   

ಸಮಾಜ ಬಾಂಧವರೆಲ್ಲರೂ  ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಸಹಕರಿಸಬೇಕಾಗಿ  ಸಾಫಲ್ಯ ಸೇವಾ ಸಂಘದ  ಪದಾಧಿಕಾರಿಗಳು  ವಿನಂತಿಸಿದ್ದಾರೆ.,

ವಿ.ಸೂ: ಕಾರ್ಯಕ್ರಮ ಮುಗಿದ ಬಳಿಕ ಕುರ್ಲಾ ರೈಲ್ವೆ ಸ್ಟೇಷನ್ ಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

💫 Subscribe, Like, Share



Related posts

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk

ಮುಂಬಯಿ: ಡಿ. 25ರಂದು ಶ್ರೀ ಕೃಷ್ಣ-ವಿಠ್ಠಲ ಪ್ರತಿಷ್ಠಾನದ 28ನೇ ವರ್ಷದ ಧಾರ್ಮಿಕ ಉತ್ಸವ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆ. 11 ರಿಂದ 15 ರವರೆಗೆ ಕುಂಭ ಮಹೋತ್ಸವ

Mumbai News Desk

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ

Mumbai News Desk

ತೋಕೂರು ಮದ್ದೇರಿ ದೈವಸ್ಥಾನ. ಮೇ 7 ರಿಂದ 9 ವರೆಗೆ ಪ್ರತಿಷ್ಠಿತೆ, ನೇಮೋತ್ಸವ.

Mumbai News Desk

ಸೆ.7 ರಂದು ಡೊಂಬಿವಲಿಯಲ್ಲಿ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮಹೋತ್ಸವ: ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತ

Mumbai News Desk