
ಮುಂಬೈಯ ನಾಟ್ಯ ಕಲಾವಿದೆ ಜ್ಯೋತಿ ರಂಜಿತ್ ಶರ್ಮ ಅವರಿಂದ ಅಯೋಧ್ಯೆಯಲ್ಲಿ ನ್ರತ್ಯ ಸೇವೆ.
ಮುಂಬಯಿಯ ಖ್ಯಾತ ಭರತನಾಟ್ಯ ಕಲಾವಿದೆ ಥಾಣೆಯ ಜ್ಯೋತಿ ರಂಜಿತ್ ಶರ್ಮಾವರು ಮಾರ್ಚ್ 3 ರಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಇನ್ನಷ್ಟು ಬೇಕಿತ್ತಾ ಹೃದಯಕ್ಕೆ ರಮಾ ಹಾಡಿಗೆ ಕುಚ್ಪುಡಿ ನೃತ್ಯದ ಮೂಲಕ ಶ್ರೀ ಬಾಲ ರಾಮ ದೇವರ ಸೇವೆ ಮಾಡಿದರು.

ಈ ಸಂಧರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಜ್ಯೋತಿಯವರನ್ನು ಹರಸಿದರು. ಮಾಜಿ ಶಾಸಕ ಉಡುಪಿ ರಘುಪತಿ ಭಟ್ ,ಜಿ ಎಸ್ ಸಿ ಸೇವಾ ಮಂಡಲದ ಆರ್ ಜಿ ಭಟ್, ಉಡುಪಿ ಸುವರ್ಧನ್ ನಾಯಕ್ ಹಾಗೂ ಮುಂಬಯಿ ಸ್ಯಾಕ್ಸೋಫೋನ್ ವಾದಕ ಹರೀಶ್ ಪೂಜಾರಿ ಯಾತ್ರೆಗೆ ಸಹಕರಿಸಿದ್ದರು.
