September 6, 2026
Mumbai News Kannada
ಸುದ್ದಿ

ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡ ನಟ ಗೋವಿಂದ, ಐಸಿಯುಗೆ ದಾಖಲು





ನಟ ಗೋವಿಂದ ಅವರು ತಮ್ಮದೇ ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸದ್ಯ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದು ಆಕಸ್ಮಿಕವಾಗಿ ನಡೆದಿರೋ ಘಟನೆ. ಗನ್​ನಿಂದ ಫೈಯರ್ ಆದ ಬುಲೆಟ್ , ಅವರ ಕಾಲಿಗೆ ತಾಗಿದೆ. ಮುಂಜನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅವರನ್ನು ಅಂಧೇರಿಯ ಕೃತಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗುಂಡಿನ ಶಬ್ದ ಕೇಳಿದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಗೋವಿಂದ ಅವರ ಗನ್​ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ‘ನಟ ಹಾಗೂ ಶಿವಸೇನಾ ಮುಖ್ಯಸ್ಥ ಗೋವಿಂದ ಕೋಲ್ಕತ್ತಾ ತೆರಳಲು ರೆಡಿ ಆಗುತ್ತಿದ್ದರು. ಅವರು ತಮ್ಮ ಪರವಾನಗಿ ಗನ್​ನ ಇಟ್ಟುಕೊಳ್ಳುತ್ತಿದ್ದರು. ಅದು ಅವರ ಕೈ ತಪ್ಪಿದ್ದು, ಬುಲೆಟ್​ ಸಿಡಿದಿದೆ. ಅವರ ಕಾಲಿಗೆ ಗುಂಡು ತಾಗಿದೆ. ವೈದ್ಯರು ಬುಲೆಟ್​ನ ತೆಗೆದಿದ್ದಾರೆ. ಅವರು ಆಸ್ಪತ್ರೆಯಲ್ಲಿ ಇದ್ದು, ಆರೋಗ್ಯ ಸ್ಥಿರವಾಗುತ್ತಿದೆ’ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ.

ಗೋವಿಂದ ಅವರು ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆದರೆ, ಈಗ ಮೊದಲಿನ ಬೇಡಿಕೆ ಉಳಿದಿಲ್ಲ. ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಬ್ರ್ಯಾಂಡ್​ಗಳನ್ನು ಪ್ರಚಾರ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ.



Related posts

ಕಲ್ಯಾಣ್ : ವಾಮನ ಎಂ ಕಾಂಚನ್ ನಿಧನ

Mumbai News Desk

ಮುಂಬೈ ಕನ್ನಡತಿ ನ್ಯಾ. ಮೀನಾಕ್ಷಿ ಅಚಾರ್ಯರಿಗೆ ಗ್ಲೋಬಲ್ ಲೀಗಲ್ ಅವಾರ್ಡ್ಸ್ ನಿಂದ, “ವರ್ಷದ ವ್ಯವಸ್ಥಾಪಕಿ ಪಾಲುದಾರ ಮಹಿಳೆ” ಪ್ರಶಸ್ತಿ.

Mumbai News Desk

ಶೆರೋನ್ ಶೆಟ್ಟಿ ಐಕಳರವರ ಮಹಾಕುಂಭಾಶ್ವಮೇಧ ಕೃತಿ ಬಿಡುಗಡೆ ಸಮಾರಂಭ

Mumbai News Desk

ಯಕ್ಷಗಾನದ ಮಧುರ ದ್ವನಿ, ಕರಾವಳಿ ಕೋಗಿಲೆ ಸುಬ್ರಮಣ್ಯ ಧಾರೇಶ್ವರ್ ಇನ್ನಿಲ್ಲ

Mumbai News Desk

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಉಡುಪಿ: ಕರ್ನಾಟಕದ ಮೊಟ್ಟಮೊದಲ ‘ಸಂಪೂರ್ಣ ಸಾಕ್ಷರ’ ಜಿಲ್ಲೆಯಾಗಿ ಉಡುಪಿ

Mumbai News Desk

ಪೆರುವಾಯಿ ನಾರಾಯಣ ಭಟ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ.

Mumbai News Desk