
ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ ಮತ್ತು ಜಾಗರಣೆ ಜರಗಲಿದೆ.
ಕಾರ್ಯಕ್ರಮದ ವಿವರ :
ದಿನಾಂಕ 08-03-2024ನೇ ಶುಕ್ರವಾರ
ಬೆಳಿಗ್ಗೆ 7:30ಕ್ಕೆ ಕಾಲಭೈರವ ಸ್ವಾಮಿಗೆ ಸಿಯಾಳ ಅಭಿಷೇಕ ಹಾಗೂ ಪಂಚಾಭಿಷೇಕ 8:00ಕ್ಕೆ ಅಲಂಕಾರ ಪೂಜೆ 8:30ಕ್ಕೆ ಶ್ರೀ ಸಾಯಿನಾಥರಿಗೆ ಅಭಿಷೇಕ ಬಳಿಕ ಸಹಸ್ರಬಿಲ್ಚಾರ್ಚನೆ
ಮಧ್ಯಾಹ್ನ 12:30ಕ್ಕೆ ಮಧ್ಯಾಹ್ನ ಆರತಿ 01:00ಕ್ಕೆ ಅನ್ನ ಪ್ರಸಾದ ಬಳಿಕ ಭಜನೆ ಸಂಜೆ 7:00ಕ್ಕೆ ಕಾಲಭೈರವ ಧುನಿ ಸ್ಥಾಪನೆ(ಅಗ್ನಿ ಕುಂಡ), ಕಾಲಭೈರವ ಹೋಮ ವಿಶೇಷ ಪೂಜೆ ಹಾಗೂ ಜಾಗರಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.