July 23, 2026
Mumbai News Kannada
ಪ್ರಕಟಣೆ

ಆಗಸ್ಟ್ 22 ರಂದು ಭಾರತ್ ಬ್ಯಾಂಕಿನ 49ನೇ ವಾರ್ಷಿಕ ಮಹಾಸಭೆ







ಮಹಾರಾಷ್ಟ್ರ , ಕರ್ನಾಟಕ ಮತ್ತು ಗುಜರಾತ್ ನಲ್ಲಿ ನೂರಕ್ಕಿಂತ ಹೆಚ್ಚು ಶಾಖೆ ಹೊಂದಿರುವ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿ. ನ 49ನೇ ವಾರ್ಷಿಕ ಮಹಾಸಭೆ ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಹಾಲ್‌ನಲ್ಲಿ ನಡೆಯಲಿದೆ.

ಮುಂಬಯಿ ಮಹಾನಗರದಲ್ಲಿ ಭಾರತ್ ಬ್ಯಾಂಕ್ ಎಂದು ಕರೆಯಲ್ಪಡುವ ಬ್ಯಾಂಕ್ 21ಆಗಸ್ಟ್ 1978 ರಂದು ಸ್ಥಾಪನೆಗೊಂಡಿದೆ. ಕಳೆದ 4 ದಶಕಗಳಿಂದ ಮಹಾರಾಷ್ಟ್ರ ಸಹಿತ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಸೇವೆ ಒದಗಿಸುತ್ತ ಬರುತ್ತಿದೆ.

ಭಾರತ್‌ ಬ್ಯಾಂಕ್‌ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಪ್ರಸಿದ್ಧಿ ಪಡೆದಿದೆ. ಅದರ ಪ್ರೀಮಿಯಂ ಠೇವಣಿ ಖಾತೆಗಳು ಮತ್ತು ಉದ್ಯಮಿಗಳಿಗೆ ಅನುಗುಣವಾಗಿ ಸಾಲಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಭಾರತ್ ಬ್ಯಾಂಕ್ ವಿದೇಶಿ ವಿನಿಮಯ ವ್ಯವಹಾರ ಮಾಡುವ ಕೆಲವೇ ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ವರ್ಗ ಒಂದರ ಅಧಿಕೃತ ಡೀಲರ್ ಆಗಿ ಪ್ರಸಿದ್ದಿ ಪಡೆದಿದೆ.

ಭಾರತ್ ಬ್ಯಾಂಕಿನ ಹೆಚ್ಚಿನ ಶಾಖೆಗಳ ಕಟ್ಟಡ ಬ್ಯಾಂಕಿನ ಮಾಲಕತ್ವದ್ದಾಗಿರುವುದು ಮತ್ತೊಂದು ವಿಶೇಷತೆಯಾಗಿದೆ.

ಪ್ರಸ್ತುತ ಕಾರ್ಯಾಧ್ಯಕ್ಷ ಶ್ರೀ ಸೂರ್ಯಕಾಂತ್ ಜಯ ಸುವರ್ಣರ ನೇತೃತ್ವದಲ್ಲಿ ಭಾರತ್ ಬ್ಯಾಂಕನ್ನು ವೃತ್ತಿಪರವಾಗಿ ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಪರಿಣಿತರನ್ನು ಒಳಗೊಂಡ ಸಮರ್ಥ ನಿರ್ದೇಶಕರ ಮಂಡಳಿ ಮತ್ತು ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ನಿರ್ವಹಿಸುತ್ತಿದೆ. ಇದು ಬ್ಯಾಂಕನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ತನ್ನ ಗ್ರಾಹಕರ ಮತ್ತು ಷೇರುದಾರರ ಅಚಲ ವಿಶ್ವಾಸ ಬ್ಯಾಂಕಿನ ಯಶಸ್ಸಿಗೆ ಮುಖ್ಯ ಕಾರಣವಾಗಿದೆ.

70 ಕ್ಕಿಂತ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಭಾರತ್ ಬ್ಯಾಂಕ್ ಪಡೆದಿರುತದೆ.



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ನಾಯ್ಗಾಂವ್ – ವಿರಾರ್ ಶಾಖೆಜು. 28ಕ್ಕೆ “ಪ್ರಸ್ತುತ ಶಿಕ್ಷಣ ವ್ಯವಸ್ಥೆ” ಬಗ್ಗೆ ವಿಚಾರ ಸಂಕಿರಣ

Mumbai News Desk

ಏಪ್ರಿಲ್ 4 ರಂದು ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ), ಮುಂಬೈ ವತಿಯಿಂದ ಶನಿ ಪೂಜೆ ಮತ್ತು ಭಜನಾ ಸಂಧ್ಯಾ

Mumbai News Desk

ಡೊಂಬಿವಿಲಿ ಕನ್ನಡಿಗರ ಸ್ನೇಹ ಬಳಗ – ಸೆ.28 ರಂದು ನವರಾತ್ರಿ ವಿಶೇಷ: ಅರಿಶಿನ-ಕುಂಕುಮ ಕಾರ್ಯಕ್ರಮ

Mumbai News Desk

ಕುಲಾಲ ಸಂಘ ಮುಂಬಯಿ ಇದರ  ಸಿ ಎಸ್ ಟಿ – ಮುಲುಂಡ್ – ಮನ್ ಕ್ಹುರ್ಡ್ ಸ್ಥಳೀಯ ಸಮಿತಿಯವರಿಂದ ಅ. 26ರಂದು ಮಂಗಳೂರು ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ:

Mumbai News Desk

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ

Mumbai News Desk