23.5 C
Karnataka
April 4, 2025
ಸುದ್ದಿ

ಸುಧಾಮೂರ್ತಿ ರಾಜ್ಯಸಭೆಗೆ ನೇಮಕ



ಇನ್ಫೋಸಿಸ್ ಫೌಂಡೇಶನ್ ನ ಮುಖ್ಯಸ್ತೆಯಾಗಿರುವ ಡಾ. ಸುಧಾಮೂರ್ತಿ ಅವರನ್ನು ರಾಷ್ಟ್ರಪತಿ ಡ್ರಾಪದಿ ಮುರ್ಮು ಅವರು ಇಂದು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿ, ಸುಧಾ ಮೂರ್ತಿ ಅವರನ್ನು ಅಭಿನಂದಿಸುತ್ತಾ “ರಾಷ್ಟ್ರಪತಿ ಅವರು ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು ಸಂತಸ ತಂದಿದೆ, ಸಮಾಜ ಸೇವೆ, ಶಿಕ್ಷಣ ಸೇರಿದಂತ್ತೆ ವಿವಿಧ ಕ್ಷೇತ್ರದಲ್ಲಿ ಸುಧಾಮೂರ್ತಿ ಅವರ ಕೊಡುಗೆ ಅಪಾರ ಹಾಗೂ ಸ್ಫೂರ್ತಿದಾಯಕ. ರಾಜ್ಯ ಸಭೆಯಲ್ಲಿ ಅವರ ಉಪಸ್ಥಿತಿ ನಮ್ಮ ನಾರಿ ಶಕ್ತಿಗೆ ಪ್ರಬಲವಾದ ಸಾಕ್ಷಿಯಾಗಿದೆ, ನಮ್ಮ ರಾಷ್ಟ್ರದ ಭವಿಷ್ಯ ವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಇದು ಉದಾಹರಿಸುತ್ತದೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಮೋದಿ ಅವರು ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಮಹಿಳಾ ದಿನಾಚರಣೆಯಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಸುಧಾಮೂರ್ತಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು ವಿಶೇಷವಾಗಿತ್ತು.
ಸುಧಾಮೂರ್ತಿ ಅವರ ಸೇವೆಗಾಗಿ 2006ರಲ್ಲಿ ಪದ್ಮಶ್ರೀ, 2023ರಲ್ಲಿ ಪದ್ಮ ವಿಭೂಷಣ ಪುರಸ್ಕಾರ ಲಭಿಸಿತ್ತು.

Related posts

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ, ಏಪ್ರಿಲ್ 19ರಿಂದ ಜೂನ್ 1ರ ತನಕ ಏಳು ಹಂತಗಳಲ್ಲಿ ಚುನಾವಣೆ.

Mumbai News Desk

ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಶಾಕ್ ನೀಡಿದ ಸರ್ಕಾರ – ಬಸ್ ಪ್ರಯಾಣ ದರ ಶೇಕಡ 15ರಷ್ಟು ಏರಿಕೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸ್ತನ್ಯಪಾನ ಕೊಠಡಿ ಉದ್ಘಾಟನೆ

Mumbai News Desk

ರಂಗಚಾವಡಿ” ವರ್ಷದ ಹಬ್ಬ, ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ* 

Mumbai News Desk

ಫೆಂಗಲ್ ಚಂಡಮಾರುತದ ಎಫೆಕ್ಟ್ – ದಕ್ಷಿಣ ಕನ್ನಡ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ, ನಾಳೆ (ಡಿ. 3)ಶಾಲಾ-ಕಾಲೇಜ್ ಗೆ ರಜೆ ಘೋಷಣೆ

Mumbai News Desk

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ