
ನಾಲಾಸೋಪಾರ : ಬಿಲ್ಲವರ ಎಸೋಸಿಯೇಷನ್ ಮುಂಬಯಿ, ನಾಲಾಸೋಪಾರ – ವಿರಾರ್ ಸ್ಥಳೀಯ ಸಮಿತಿಯ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ಫೆ. 11ರಂದು ಸಮಿತಿಯ ಕಚೇರಿಯಲ್ಲಿ ನೆರವೇರಿತು.
ಅರ್ಚಕರಾದ ಪ್ರವೀಣ್ ಸುವರ್ಣ ಮತ್ತು ನಾಗೇಶ್ ಕೋಟ್ಯಾನ್ ಪೂಜಾ ಕಾರ್ಯವನ್ನು ನೆರವೇರಿಸಿದರು. ಸಮಿತಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಮುಗಿದ ಬಳಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ವಿ ಸುವರ್ಣ, ಉಪಾಧ್ಯಕ್ಷರಾದ ಆನಂದ್ ಕೋಟ್ಯಾನ್, ಸದಾಶಿವ ಪೂಜಾರಿ, ಜೊತೆ ಕಾರ್ಯದರ್ಶಿ ಶುಭ ಸುವರ್ಣ, ಕೋಶಾಧಿಕಾರಿ ನಳಿನ ಪೂಜಾರಿ, ಮಹಿಳಾ ಸಂಚಾಲಕಿ ಲಕ್ಷ್ಮಿ ಎಸ್ ಕೋಟ್ಯಾನ್ ಮತ್ತು ಮಹಿಳಾ ಸದಸ್ಯರು ದೀಪ ಪ್ರಚಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.
ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪರಸ್ಪರ ಅರಸಿನ ಕುಂಕುಮ ತಿಲಕವನ್ನಿಟ್ಟು ನೀಡಿ ಗೌರವಿಸಿದರು.

ಈ ಶುಭ ಕಾರ್ಯಕ್ರಮದಲ್ಲಿ ಬಿಲ್ಲವರ ಎಸೋಸಿಯೇಷನ್ ಮುಂಬಯಿ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ನ್, ಯುವ ವಿಭಾಗದ ಕಾರ್ಯಾಧ್ಯಕ್ಷರಾದ ನಿಲೇಶ್ ಪೂಜಾರಿ ಪಲಿಮಾರ್, ಕೇಂದ್ರ ಕಚೇರಿಯ ಪ್ರತಿನಿಧಿ ಕೇಶವ ಕೋಟ್ಯಾನ್, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ನಿರ್ದೇಶಕರಾದ ಮೋಹನ್ ದಾಸ್ ಪೂಜಾರಿ ಹಾಗೂ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಲವಾರು ಗಣ್ಯರ ದಾನಿಗಳ ಸಹಕಾರದಿಂದ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು . ಕಾರ್ಯಕ್ರಮದ ಯಶಸ್ವಿಗಾಗಿ ಸದಸ್ಯರಾದ ದಯಾನಂದ ಬೊಂಟ್ರ, ಕಮಲಾಕರ ಸುವರ್ಣ, ಶೇಖರ ಪೂಜಾರಿ, ಮಲ್ಲಿಕಾ ಆರ್ ಪೂಜಾರಿ, ಪುಷ್ಪಕೋಟ್ಯಾನ್, ಶೋಭಾ ಕೆ ಪೂಜಾರಿ ,ರಾಜೇಶ್ ಕುಕ್ಯಾನ್, ಪುರಂದರ ಸಾಲ್ಯಾನ್, ಶುಭಾ ಎಸ್. ಪೂಜಾರಿ, ಸಂಗೀತ ಅಮೀನ್, ವಾಣಿ ಬಿ ಕೋಟ್ಯಾನ್, ರೋಹಿಣಿ ಪಿ. ಸಾಲಿಯಾನ್ , ಸುಮತಿ ಪೂಜಾರಿ,
ಹೇಮಾ ಎ ಪೂಜಾರಿ, ವನಿತಾ ಪೂಜಾರಿ, ಇಂದಿರಾ ಪೂಜಾರಿ, ಯಶೋಧ ಕೋಟ್ಯಾನ್, ದೇವಕಿ ಕರ್ಕೇರ, ಸುಗಂಧಿ ಕೋಟ್ಯಾನ್, ಮಾಲತಿ ಆರ್ ಪೂಜಾರಿ, ವೀಣಾ ಅಂಚನ್, ವಿಮಲ್ ಎಸ್ ಸಾಲ್ಯಾನ್ ಸಹಕರಿಸಿದರು.
ಕಾರ್ಯಕ್ರಮಕ್ಕೆ ದಾನಿಗಳಾದ ಅಶೋಕ್ ಸಾಲ್ಯಾನ್, ಜ್ಯೋತಿ ಎಂ ಸಾಲ್ಯಾನ್, ಹರ್ಷಲ್ ಶ್ರೀಧರ ಪೂಜಾರಿ ಮತ್ತು ಮೀರಾ ದಹಾಣು ಬಂಟ್ಸ ನ ಪದಾಧಿಕಾರಿಗಳು ಶುಭ ಎಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.