30 C
Mumbai
April 24, 2026
Mumbai News Kannada
ಮುಂಬಯಿ

ಅಂಧೇರಿ ಪಶ್ಚಿಮ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಗೆ ಭೇಟಿ ನೀಡಿ ಭಕ್ತರನ್ನು ಹರಸಿದ ಶ್ರೀ ಓಡಿಯೂರು ಸ್ವಾಮಿ





ಸದಸ್ಯರ ಅರ್ಥಪೂರ್ಣ ಸೇವೆಯಿಂದ ಸಂಘ-ಸಂಸ್ಥೆಗಳ ಉಳಿವು – ಓಡಿಯೂರು ಶ್ರೀ

ಓಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ,  ಶ್ರೀ ಕ್ಷೇತ್ರ ಓಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಜುಲೈ 24ರ ಸಂಜೆ, ಅಂಧೇರಿ ಪಶ್ಚಿಮದ ವೀರ ದೇಸಾಯಿ ಮಾರ್ಗ, ಶ್ರೀ ಮಹಾಲಕ್ಷ್ಮೀ ಕಾಲನಿಯ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿಗೆ ಭೇಟಿ ನೀಡಿ, ಭಕ್ತರನ್ನು ಹರಸಿದರು.

 ಪ್ರಾರಂಭದಲ್ಲಿ ಶ್ರೀ ಮಹಾಲಕ್ಷ್ಮೀ ಬಾಲ ಭಜನಾ ವೃಂದದ ಮಕ್ಕಳು ಹಾಗೂ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಸದಸ್ಯರು ಹರಿನಾಮ ಸಂಕೀರ್ತನೆಗೈದರು.

ಈ ನಡುವೆ ಶ್ರೀ ಓಡಿಯೂರು ಸ್ವಾಮಿಜಿ ಆಗಮಿಸಿದಾಗ ಅವರನ್ನು ಭಕ್ತಿ ಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.

ಸ್ವಾಮೀಜಿ ಅವರು ಶ್ರೀ ಮಹಾಲಕ್ಷ್ಮೀ ದೇವರಿಗೆ ಆರತಿ ಬೆಳಗಿದರು.

ಬಳಿಕ ಮಂಡಳಿಯ ಅರ್ಚಕರಾದ ಮನೋಜ್ ಮೆಂಡನ್, ಮಂಜುಳಾ ಮನೋಜ್ ಮೆಂಡನ್  ದಂಪತಿ ಗುರುಗಳ ಪಾದಪೂಜೆ ಗೈದರು.

ಸ್ವಾಮೀಜಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಮಹಾಲಕ್ಷ್ಮಿ ಕಾಲನಿ, ಚಿನ್ಮಯ್ ಮಿಷನ್, ನವರಾತ್ರಿ ಸಂಘ, ಮೊಗವೀರ ವ್ಯವಸ್ಥಪಕ ಮಂಡಳಿ,  ಶ್ರೀ ಮದ್ಭರತ ಮಂಡಳಿ, ಗುರುದೇವ ಸೇವಾ ಬಳಗ , ವಜ್ರಮಾತಾ ಸೇವಾ ಬಳಗ, , ಶ್ರೀ ಮಹಾಲಕ್ಷಿ ಭಜನಾ ಮಂಡಳಿಯ  ಪದಾಧಿಕಾರಿಗಳು ಗುರುಗಳನ್ನು ಗೌರವಿಸಿದರು.ಸಾದ್ವಿ ಮಾತನಂದ ಮಯಿ  ಅವರನ್ನು – ಶ್ರೀ ಮಹಾಲಕ್ಷ್ಮಿ  ಭಜನಾ  ಮಂಡಳಿಯ ಮಹಿಳಾ ಸದಸ್ಯರು ಗೌರವಿಸಿದರು.

ಸಾದ್ವಿ ಮಾತನಂದಮಯಿ, ಅವರು ಪ್ರಾಥನೆ ಮಾಡಿದರು.

ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ ಅವರು  ” ಚಲನೆಗೆ ,ಕ್ರಿಯಾಶೀಲತೆಗೆ ಇನ್ನೊಂದು ಹೆಸರೇ ಲಕ್ಷ್ಮಿ, ಎಂಟು ವಿಧದ ಸಂಪತ್ತಿದ್ದು ಅದಕ್ಕೆ ಅಧಿಪತಿ   ಲಕ್ಷ್ಮಿ. ಸದಾಚಾರ ಸಂಪನ್ನರೊಂದಿಗೆ ಲಕ್ಷ್ಮಿ ಯಾವತ್ತೂ ಇರುತ್ತಾಳೆ , ಅದಿಲ್ಲದಾಗ ದರಿದ್ರ ಲಕ್ಷ್ಮಿ  ಬರುತ್ತಾಳೆ. ಈಗ ವಿಜ್ಞಾನ ಬಹಳ ಮುಂದುವರಿದಿದೆ, ವಿಜ್ಞಾನದ ಮೂಲಕ ಅದ್ಭುತ ಸಾಧನೆಗಳಾಗುತ್ತಿವೆ, ವಿಜ್ಞಾನದ ಜೊತೆಗೆ ಆಧ್ಯಾತ್ಮ ಇರದೇ ಹೋದರೆ ಅದು ಖಂಡಿತ ಯಶಸ್ಸು ಕಾಣದು. ವಿಜ್ಞಾನದ ಫಲಿತಾಂಶವೇ ಆಧ್ಯಾತ್ಮಿಕತೆ.  ಇಲ್ಲಿ ನೀವು ಯುವ ಶಕ್ತಿಯನ್ನು ತಯಾರು ಮಾಡಿದ್ಫು, ಇದು ಭವಿಷ್ಯಕ್ಕೆ ಅಗತ್ಯ. ಹಲವಾರು ವರ್ಷಗಳಿಂದ ಇಲಿಗೆ ಬರುತಿದ್ದು, ಈಗ ಯುವಕರು ಮುಂದೆ ಬರುತ್ತಿರುವುದು ಸಂತಸ. ಮಂಡಳಿಯವರ ಪ್ರೀತಿ, ವಿಶ್ವಾಸಕ್ಕಾಗಿ ಅಭಿನಂದನೆ. ಪ್ರೀತಿ ವಿಶ್ವಾಸ ಗಟ್ಟಿಯಾದಾಗ ಬದುಕು ಹಸನಾಗುತ್ತದೆ. ಭಜನೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ, ಭಜನೆ ಮಾಡುವವರಲ್ಲಿ ದ್ವೇಷ ಖಂಡಿತ ಇರುವುದಿಲ್ಲ. ನಿಜಾರ್ಥದಲ್ಲಿ ಭಜನೆ ಮಾಡುವ ಮನೆಗಳಲ್ಲಿ ವೈಮನಸ್ಸು ಇರುವುದಿಲ್ಲ . ಪಶ್ಚಿಮಾತ್ಯ ಸಂಸ್ಕೃತಿಯ ಗಾಳಿ ನಮ್ಮತ್ತ ಬೀಸಿದಾಗ, ನಮ್ಮ ಸನಾತನ ದೀಪ  ನಂದದಂತೆ, ಉಳಿಸುವ ಜವಾಬ್ದಾರಿ ನಮ್ಮದು. ಸಂಘ – ಸಂಸ್ಥೆಗಳು ಉಳಿಯಬೇಕಾದರೆ ಅದರ ಸದಸ್ಯರು ಅರ್ಥಪೂರ್ಣವಾದ ಸೇವೆ ಮಾಡಬೇಕು”  ಎಂದರು.

ಈ ಸಂಧರ್ಭ ಉಪಸ್ಥಿತರಿದ್ದ ಸಂಘ-ಸಂಸ್ಥೆಯ ಪದಾಧಿಕಾರಿಗಳಿಗೆ , ಸೇರಿದ್ದ  ಭಕ್ತರಿಗೆ ಸ್ವಾಮೀಜಿ  ಪ್ರಸಾದ ನೀಡಿ, ಹರಸಿದರು.

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಟ್ರಸ್ಟಿಗಳಾದ ಚಂದ್ರಶೇಖರ್ ಆರ್ ಸಾಲಿಯಾನ್,  ದಯಾನಂದ್ ಎಲ್ ಬಂಗೇರ,  ಪುರಂದರ ಜಿ ಸಾಲಿಯಾನ್, ವೇದಾವತಿ ಎ ಮೆಂಡನ್, ಪ್ರಫುಲ್ ಬಿ ಶ್ರೀಯಾನ್ ಅಧ್ಯಕ್ಷರಾದ ಪದ್ಮನಾಭ ಎನ್ ಕಾಂಚನ್, ಕೋಶಧಿಕಾರಿ ರೇಖಾ ಎಸ್ ಕರ್ಕೇರ, ಜತೆ ಕೋಶಾಧಿಕಾರಿ ಪ್ರತಿಭಾ ಎಚ್ ಸಾಲಿಯಾನ್, ಕಾರ್ಯದರ್ಶಿ ದಯಾವತಿ  ಸುವರ್ಣ, ಸದಸ್ಯ ಶರ್ಮಿಳಾ ಎಲ್ ಸಾಲ್ಯಾನ್, ಅರ್ಚಕರಾದ ಮನೋಜ್ ಮೆಂಡನ್, ನಾಗೇಶ್ ಎಸ್ ಕೋಟಿಯನ್ ಪೊಲಿಪು, ಏಕನಾಥ್ ಕರ್ಕೇರ, ಚಂದ್ರೇಶ್ ಸುವರ್ಣ, ಸುಧಾಕರ್ ಕರ್ಕೇರ, ಮೋನಿಷಾ ಕರ್ಕೇರ,  ಮಣಿ ನಾಡರ್ ಉಪಸ್ಥಿತರಿದ್ದು ಸಹಕರಿಸಿದರು. ಪ್ರತೀಕ್ ಪೂಜಾರಿ ತಬಲದಲ್ಲಿ, ಸುರೇಶ್ ದೇವಾಡಿಗ, ಹೇಮಚಂದ್ರ ಏರ್ಮಾಳು ಹಾರ್ಮೋನಿಯಂ ನಲ್ಲಿ ಸಹಕಾರ ನೀಡಿದರು.

ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಪ್ರಫುಲ್ ಶ್ರೀಯಾನ್ ಕಾರ್ಯಕ್ರಮ ಮುನ್ನಡೆಸಿದರು.

B. Dinesh Kulal

Mob.: 9821868674



Related posts

ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ಮುಂಬಯಿ 2ನೇ ವೈಜ್ಞಾನಿಕ ಸಭೆ, ಉಪನ್ಯಾಸ.

Mumbai News Desk

ವಸಯಿ ಕರ್ನಾಟಕ ಸಂಘದ ವಿಹಾರ ಕೂಟ

Mumbai News Desk

ಏ.23 – 25: ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Mumbai News Desk

ಕುಲಾಲ ಸಂಘ ಮುಂಬಯಿ ಇದರ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk

ಶ್ರೀ ರಜಕ ಸಂಘ ಮುಂಬಯಿ (ರಿ) ಇದರ 86ನೇ ವಾರ್ಷಿಕ ಮಹಾಸಭೆ

Mumbai News Desk