
ಚಿತ್ರ,ವರದಿ,-ಉಮೇಶ್ ಕೆ.ಅಂಚನ್.
ಮುಂಬಯಿ , ಮಾ.8. ಭಾಯಂದರ್ ಪೂರ್ವ ಮೀರಾಭಾಯಿಂದರ್ ರಸ್ತೆಯಲ್ಲಿರುವ ಗೋಲ್ಡನ್ ನೆಸ್ಟ್ ವೃತ್ತದ ಸಮೀಪದಲ್ಲಿ ಅಶ್ವಿನಿ ಹಾಸ್ಪಿಟಾಲಿಟಿ ಸಂಚಾಲಕತ್ವದ ಕ್ರೌನ್ ಬಿಸಿನೆಸ್ ಹೋಟೇಲ್ ಬುಧವಾರ ಮಾ.6ರಂದು ವಾಸ್ತು ಪೂಜೆ, ಸುದರ್ಶನ ಹೋಮ, ಗಣಹೋಮ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ಉದ್ಘಾಟನೆ ಗೊಂಡಿತು. ಪೂಜಾ ಕೈಂಕರ್ಯಗಳನ್ನು ಕಾಶಿ ಗಾಂವ್ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕರಾದ ಸಾಣೂರು ಸಾತಿಂಜ ಜನಾರ್ಧನ ಭಟ್ ನೆರವೇರಿಸಿದರು. ಹೋಟೇಲು ವಾಹನ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದು 50 ರಿಂದ 500 ಜನರಿರುವ ಸಭೆ, ಸಮಾರಂಭಗಳಿಗೆ ಹವಾನಿಯಂತ್ರಿತ ಎರಡು ಸಭಾಗ್ರಹಗಳು, ಟೆರೇಸ್ ಗಾರ್ಡನ್ ಹಾಲ್ , ತಂಗಲು ಯೋಗ್ಯವಾದ ಡಿಲಕ್ಸ್ ಮತ್ತು ಸುಪರ್ ಡಿಲಕ್ಸ್ ಕೊಠಡಿಗಳು, ಫ್ರೆಂಡ್ಸ್ ವೈನ್ ಎಂಡ್ ಡೈನ್ ಹಾಗೂ ವೆಜ್ ನಾನ್ ವೆಜ್ ರೆಸ್ಟೋರೆಂಟನ್ನು ಹೊಂದಿದೆ.