ಡೊಂಬಿವಲಿಯ ಮುಂಬ್ರಾ ಮಿತ್ರ ಭಜನಾ ಮಂದಿರದ ಸಂಚಾಳತ್ವದ ಡೊಂಬಿವಲಿ ಪಶ್ಚಿಮದ ಶ್ರೀ ಮಹಾವಿಷ್ಣು ಮಂದಿರದಲ್ಲಿ ಮಾರ್ಚ್ 16 ಶನಿವಾರ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ ಜರಗಲಿದೆ. ಬೆಳಿಗ್ಗೆ 6 ರಿಂದ 7 ರ ತನಕ ಗಣ ಹೋಮ ; 9 ರಿಂದ 10.30 ರ ತನಕ ಸತ್ಯನಾರಾಯಣ ಮಹಾಪೂಜೆ ಮಧ್ಯಾಹ್ನ 12. 30 ಕ್ಕೆ ಕಳಸ ಪ್ರತಿಷ್ಠೆ ಹಾಗು ಶನಿಗ್ರಂಥ ಪಾರಾಯಣ .12. 30 ರಿಂದ 3.00 ರ ತನಕ ಅನ್ನ ಸಂತರ್ಪಣೆ . 6.30 ರಿಂದ 7 ರ ತನಕ ಭಜನೆ , 7 ರಿಂದ 7.30 ರ ತನಕ ಧಾರ್ಮಿಕ ಸಭೆ ; 7.30 ಕ್ಕೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಹಾಗು ಅನ್ನ ಸಂತರ್ಪಣೆ. ಶನಿ ಗ್ರಂಥ ಪಾರಾಯಣದ ದೀಪ ಪ್ರಜ್ವಲಣೆಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಯುತ ಶೇಖರ್ ಮೆಂಡನ್ ಹಾಗು ಕರ್ನಾಟಕ ಸಂಘ ಡೊಂಬಿವಲಿ ಇದರ ಗೌರವ ಪ್ರಧಾನ ಕೋಶಾಧಿಕಾರಿ ಶ್ರೀಯುತ ತಾರಾನಾಥ್ ಅಮೀನ್ , ಹಾಗು ಸಮಾಜ ಸೇವಕಿ ಶ್ರೀಮತಿ ಲಕ್ಷ್ಮಿ ಶೆಟ್ಟಿಗಾರ್ ಉಪಸ್ಥಿತರಿರುವರು. ರಾತ್ರಿ 7.00 ಗಂಟೆಗೆ ಶ್ರೀ ಮಹಾವಿಷ್ಣು ಮಂದಿರದ ಅಧ್ಯಕ್ಷರಾದ ಶ್ರೀಯುತ ಇಂದುಶೇಖರ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದ್ದು ಅತಿಥಿ ಗಣ್ಯರಾಗಿ ಬಂಟರ ಸಂಘ ಮುಂಬೈ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಯುತ ಆನಂದ್ ಶೆಟ್ಟಿ ಎಕ್ಕಾರ್, ಬಂಟರ ಸಂಘ ಮುಂಬೈ ಇದರ ಸಮಾಜ ಕಲ್ಯಾಣ ಉಪ ಸಮಿತಿಯ ಉಪ ಕಾರ್ಯಾದ್ಯಕ್ಷರಾದ ಶ್ರೀಯುತ ಸುಬ್ಬಯ್ಯ ಶೆಟ್ಟಿ, ಬಂಟರ ಸಂಘ ಮುಂಬೈ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಶ್ರೀಯುತ ಪ್ರಭಾಕರ್ ಶೆಟ್ಟಿ, ಕರ್ನಾಟಕ ಸಂಘ ಡೊಂಬಿವಲಿ ಇದರ ವಾಚನಾಲಯ ಉಪ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಯುತ ರಾಜೀವ ಬಂಡಾರಿ , ಹೋಟೆಲ್ ಉದ್ಯಮಿ , ಸಮಾಜ ಸೇವಕರಾದ ಶ್ರೀಯುತ ಲಕ್ಷ್ಮಣ್ ಪೂಜಾರಿ, ಹಾಗು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಉಪಾಧ್ಯಕ್ಷರಾದ ಶ್ರೀಯುತ ಅರವಿಂದ್ ಕಾಂಚನ್ ಮೊದಲಾದವರು ಉಪಸ್ಥಿತರಿರುವರು. ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಹಿತೈಷಿಗಳು , ಭಕ್ತಾಭಿಮಾನಿಗಳು , ಕಾರ್ಯಕ್ರಮವನ್ನು ಯಶಸ್ವಿಗೊಳಿಸಲೆಂದು ಮಂದಿರದ ಗೌರವ ಅಧ್ಯಕ್ಷರಾದ ಶ್ರೀಯುತ ನಿತಿನ್ ಪ್ರಕಾಶ್ ಪುತ್ರನ್ , ಉಪಾಧ್ಯಕ್ಷರಾದ ಶ್ರೀಯುತ ಅರವಿಂದ್ ಪದ್ಮಶಾಲಿ, ಕಾರ್ಯದರ್ಶಿ ಶ್ರೀಯುತ ಸಚಿನ್ ಪೂಜಾರಿ , ಕೋಶಾಧಿಕಾರಿ ಶ್ರೀಯುತ ಪ್ರವೀಣ್ ಶೆಟ್ಟಿ ಹಾಗು ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸವಿತಾ ಸಾಲಿಯಾನ್ ಹಾಗು ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು ,ಅರ್ಚಕ ವರ್ಗ , ಸದಸ್ಯರುಗಳು ಪ್ರಕಟಣೆಯ ಮೂಲಕ ವಿನಂತಿಸಿರುತ್ತಾರೆ.