September 6, 2026
Mumbai News Kannada
ಸುದ್ದಿ

ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರ ಕೊಳ, ಮಲ್ಪೆ – ರಕ್ತದಾನ ಶಿಬಿರ





ಶ್ರೀ ಶಿವ ಪಂಚಾಕ್ಷರಿ ಟ್ರಸ್ಟ್ ‌ರಿ. ಕೊಳ _ ಮಲ್ಪೆ, ಡಾ‌ ಜಿ.ಶಂಕರ್ ‌ಪ್ಯಾಮಿಲಿ‌ ಟ್ರಸ್ಟ್ ‌ರಿ. ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ,ರಕ್ತನಿಧಿ ‌ವಿಭಾಗ ಕೆಎಂಸಿ‌ ಮಣಿಪಾಲ‌ ಇವರ ಸಹಕಾರದಲ್ಲಿ ದಿನಾಂಕ‌ 10/03/2024 ಆದಿತ್ಯವಾರ ಶ್ರೀ ಶಿವ ಪಂಚಾಕ್ಷರಿ ಭಜನ ಮಂದಿರ ಮಲ್ಪೆ ಕೊಳ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ಉಡುಪಿ ಕಡಲ ತೀರದಲ್ಲಿ ‌ಸುಮಾರು 100ಕ್ಕೂ ಅಧಿಕ ಭಜನ ಮಂದಿರಗಳಿದ್ದು ಈ ಭಜನ ಮಂದಿರಗಳು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಸೇವೆ ತೊಡಗಿಕೊಂಡರೆ ಶ್ರೀ ಶಿವ ಪಂಚಾಕ್ಷರಿ ‌ಟ್ರಸ್ಟ್ ಧಾರ್ಮಿಕ, ಸಾಂಸ್ಕೃತಿಕ, ಸಮಾಜಸೇವೆಯೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಸಿ ರೋಗಿಗಳ ಜೀವ ಉಳಿಸುವ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಇತರ ಭಜನ ಮಂದಿರಾಗಳಿಗೆ ಪ್ರೇರಣೆಯಾಗಿದೆ. ಟ್ರಸ್ಟ್ ಮೂಲಕ ಇನ್ನಷ್ಟು ಶೈಕ್ಷಣಿಕ ಆರೋಗ್ಯ ಸೇವೆಗಳು ಮುಂದಿನ ದಿನಗಳಲ್ಲಿ ನಡೆಯಲಿ ಎಂದು ಹಾರೈಸಿದರು.


ಶ್ರೀ ನಾರಾಯಣ ಸಾಲ್ಯಾನ್ ಅಧ್ಯಕ್ಷರು, ಶ್ರೀ ಶಿವ ಪಂಚಾಕ್ಷರಿ ‌ಭಜನ ಮಂದಿರಾ ಮಲ್ಪೆ ಕೊಳ ಸಭೆಯ ಅಧ್ಯಕ್ಷತೆ ವಹಿಸಿದರು. ಶ್ರೀ ಮಂಜು ಕೊಳ ರಕ್ತದಾನ ಶಿಬಿರದ ಆಯೋಜನ‌ ಪ್ರಮುಖರು, ಡಾ . ಸುಮಾಂಕಿತ ವೈದ್ಯರು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಶ್ರೀ ವಿಕ್ರಮ್ ಶ್ರೀಯಾನ್, ಸದಸ್ಯರು, ಶ್ರೀ ಶಿವಪಂಚಾಕ್ಷರಿ ಟ್ರಸ್ಟ್ ರಿ. ಮಲ್ಪೆ ಕೊಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ರವಿರಾಜ್ ಸಾಲ್ಯಾನ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ‌ನಿರೂಪಿಸಿದರು, ಶ್ರೀ ರಾಕೇಶ್ ಅಮೀನ್ ಧನ್ಯವಾದ ಅರ್ಪಿಸಿದರು.ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ ‌86 ಯೂನಿಟ್ ರಕ್ತವನ್ನು ‌ಸಂಗ್ರಹಿಸಲಾಯಿತು

.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಜಾರ್ಜ್ ಫರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ನಿಮಿತ್ತ ಪೂರ್ವಬಾವೀ ಸಭೆ

Mumbai News Desk

ಪಶ್ಚಿಮ ಏಷ್ಯಾ ಸಂಘರ್ಷ: ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆ ಮುಂಬೈ ತಲುಪಿದ ಎಲ್‌ಪಿಜಿ ತುಂಬಿದ ಹಡಗು

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ, ಬ್ಯಾಂಕೊ ಬ್ಲೂ ರಿಬ್ಬನ್”- 2022- 2023 ಪ್ರಶಸ್ತಿ,

Mumbai News Desk

ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸ್ಥಾಪಿತ ಹಿತಾ ಶಕ್ತಿಗಳ ಅಪಪ್ರಚಾರ ಮೂಲಕ ಭಕ್ತಾಭಿಮಾನಿಗಳ ದಿಕ್ಕು ತಪ್ಪಿಸುವುದು ಸನಾತನ ಧರ್ಮಕ್ಕೆ ಮಾರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ.

Mumbai News Desk

2023-24 ನೇ ಸಾಲಿನ ಎಚ್ ಎಸ್ ಸಿ ಪರೀಕ್ಷೆ ಯಲ್ಲಿ ನಿಶಾ ಸುಂದರ ಪೂಜಾರಿ 82.16%

Mumbai News Desk

ಮೊಗವೀರ ಮಹಾಜನ ಸೇವಾ ಸಂಘದ ವಾರ್ಷಿಕ ಮಹಾಸಭೆ. ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ, :ರಾಜು ಮೆಂಡನ್ 

Mumbai News Desk