ಮುಂಬಯಿ, ಮಾ. 11- ಬಂಟರ ಸಂಘ ಮುಂಬಯಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯು ವರ್ಷಂಪ್ರತಿ ಸಮಾಜದ ಅಶಕ್ತ ವಿದ್ಯಾರ್ಥಿಗಳಿಗೆ ವೇತನ, ವಿಕಲಚೇತನರಿಗೆ ಹಾಗೂ ವಿಧವಾಯರಿಗೆ ಲಕ್ಷಾಂತರ
ರೂಪಾಯಿಗಳ ಸಹಾಯ ಧನವನ್ನು ತನ್ನ ಒಂಭತ್ತು ಪ್ರಾದೇಶಿಕ ಸಮಿತಿಗಳ ಮುಖಾಂತರ ವಿತರಿಸುತ್ತಾ ಬಂದಿರುತ್ತದೆ. ಪ್ರಸ್ತುತ 2023 ರಲ್ಲಿ ವಿತರಿಸಲ್ಪಡುವ ಈ ಸವಲತ್ತುಗಳಿಗಾಗಿ, ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿರುವ ಸಮಾಜ ಬಾಂಧವರಿಗಾಗಿ ಅರ್ಜಿ ಫಾರಂಗಳನ್ನು ತಾ.16-3- 20024ನೇ ಶನಿವಾರ ಬೊರಿವಲಿ ಪೂರ್ವದ ದತ್ತ ಪಾಡ್ ರಸ್ತೆಯಲ್ಲಿರುವ ಹೊಟೇಲ್ ಸುಸ್ವಾ ಗತ್ ಇಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ವಿತರಿಸಲಾಗುವುದು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಕೊಂಡಾಡಿ ಯವರ ನೇತೃತ್ವದಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿಯವರ ಮುಂದಾಳುತ್ವದಲ್ಲಿ ನಡೆಯಲಿರುವ ಈ ಕಾಠ್ಯಕ್ರಮದ ಸದುಪಯೋಗವನ್ನು ಪಡೆಯಲಿಚ್ಚಿಸುವ ಸಮಾಜ ಬಾಂಧವರು ಅರ್ಜಿಫಾರಂಗಳನ್ನು ಪಡೆಯಲು ಬರುವಾಗ ಈ ಕೆಳಗಿನ ಅಂಶಗಳನ್ನು ಗಮನಿಸ ಬೇಕಾಗಿ ವಿನಂತಿಸಲಾಗಿದೆ.
ಫಲಾನುಭವಿಗಳು ಕಡ್ಡಾಯವಾಗಿ ಬಂಟ ಸಮಾಜದವರಾಗಿರ ಬೇಕು, 18 ವರ್ಷಗಳಿಗೆ ಮೇಲ್ಪಟ್ಟ ವಿದ್ಯಾರ್ಥಿಗಳು ,, ವಿಕಲಚೇತನ ಹಾಗೂ ವಿಧವೆ బంటం ಸಂಘ ಮುಂಬಯಿಯ ಸದಸ್ಯರಾಗಿರ ಬೇಕು.
18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರ ತಂದೆ-ತಾಯಿಗಳಿಬ್ಬರೂ ಬಂಟರ ಸಂಘದ ಸದಸ್ಯರಾಗಿರಬೇಕು,
ಪ್ರತೀ ಅರ್ಜಿ ಫಾರಂಗಳನ್ನು ಸರಿಯಾಗಿ ತುಂಬಿಸಿ ಹಿಂತಿರುಗಿಸುವಾಗ ಸದಸ್ಯತ್ವಕ್ಕೆ ಸಂಬಂಧಪಟ್ಟ ದಾಖಲೆಗಳ ಜೆರಾಕ್ಸ್‌ನ್ನು ಲಗತ್ತಿಸತಕ್ಕದು. ಇದರೊಂದಿಗೆ ಶಾಲಾ ಕಾಲೇಜುಗಳಿಂದ ಪಡೆದ ಅಂಕಪಟ್ಟಿ, ವಾಸ್ತವ್ಯ ಸ್ಥಳದ ಇಲೆಕ್ಟಿಸಿಟಿ ಬಿಲ್ ಹಾಗೂ ವಾರ್ಷಿಕ ವರಮಾನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ನೀಡ ಬೇಕು.
ವಿಕಲ ಚೇತನರು ಹಾಗೂ ವಿಧವೆಯರು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡತಕ್ಕದ್ದು,
ಒಂದು ಕುಟುಂಬಕ್ಕೆ ಒಂದೇ ಅರ್ಜಿ ಫಾರ್ಮ್ ಅನ್ನು ನೀಡಲಾಗುವುದು ಅದರಲ್ಲಿ ಎಲ್ಲಾ ಮಕ್ಕಳ ವಿಕಲಚೇತನ ಇದೆಯರ ವಿವರಗಳನ್ನು ಬರೆದು ಇತರ ದಾಖಲೆಯ ಪ್ರತಿಗಳೊಂದಿಗೆ ನೀಡಬೇಕು, ಈ ರೀತಿ ಸಲ್ಲಿಸಿದ ಫಾರ್ಮುಲಗಳನ್ನು ಪ್ರಾದೇಶಿಕ ಸಮಿತಿಯಲ್ಲಿ ಹಾಗೂ ಬಂಟರ ಸಂಘದ ಶಿಕ್ಷಣ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯಲ್ಲಿ ಕಾಲಂ ಕುಶಕವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಯಾವುದೇ ಕಾರಣಕ್ಕೂ ಅರ್ಜಿ ಫಾರ್ಮಗಳು ಅಸ್ತಿತ್ವ ಕೊಳ್ಳದಂತೆ ಫಲಾನುಭವಿಗಳು ನೋಡಿಕೊಳ್ಳಬೇಕು ಅದಕ್ಕಾಗಿ ಎಲ್ಲವೂ ವ್ಯವಸ್ಥಿತವಾಗಿರಬೇಕು,
ಸಮಾಜಬಾಂಧವರ ಸರ್ವತೋಮುಖ ಎಳೆಗಾಗಿ ಕಾರ್ಯರೂಪಕ್ಕೆ ತಂದಿರುವ. ಈ ಸೌಲಭ್ಯಗಳ ಸದುಪಯೋಗವನ್ನು ಕೇವಲ ಅಶಕ್ತರು ಫಲಾನುಭವಿಗಳು ಮಾತ್ರ ಪಡೆದುಕೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ,
ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಪದಾಧಿಕಾರಿಗಳ ಸಹಕಾರ ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯ ಧ್ಯಕ್ಷ ದಿವಾಕರ್ ಶೆಟ್ಟಿ ಇಂದ್ರಾಲಿ ಇವರ ಮುಂದಾಳತ್ವದಲ್ಲಿ ಸಹಕಾರಗಳ್ಳಲಿರುವ ಈ ಅರ್ಥಪೂರ್ಣ ಯೋಜನೆ ಸದುಪಯೋಗವನ್ನು ಅಗತ್ಯ ಉಳ್ಳವರು ಸಮಾಜ ಬಾಂಧವರು ಪಡೆದುಕೊಳ್ಳಬೇಕಾಗಿ ಪ್ರಾದೇಶಿಕ ಸಮಿತಿಯ ಗಳ ಪಶ್ಚಿಮ ವಲಯದ ಸಮನ್ವಯಕರಾದ ಭಾಸ್ಕರ್ ಶೆಟ್ಟಿ ಕಾಂದೇಶ್, , ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ಸಂಚಾಲಕರಾದ ನಿಟ್ಟಿ ಮುದ್ದಣ್ಣ ಜಿ ಶೆಟ್ಟಿ ಉಪ ಕಾರ್ಯಧ್ಯಕ್ಷರಾದ ಗಂಗಾಧರ್ ಎ ಶೆಟ್ಟಿ, ಕಾರ್ಯದರ್ಶಿ ರಮೇಶ್ ಶೆಟ್ಟಿ ,ಕೋಶಧಿಕಾರಿ ಅವಿನಾಶ್ ಎಂ ಶೆಟ್ಟಿ ,ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಧಿಕಾರಿ ಸಂಕೇಶ್ ಶೆಟ್ಟಿ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಹರೀಶ್ ಶೆಟ್ಟಿ ,ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುನೀತಾ ಎನ್ ಹೆಗ್ಡೆ. ಯುವ ವಿಭಾಗದ ಕಾರ್ಯ ಧ್ಯಕ್ಷ ಅಕ್ಷಜ್ ಆರ್ ಶೆಟ್ಟಿ ಹಾಗೂ ಸಲಹೆ ಸಮಿತಿಯ ಮುಂಡಪ್ಪ ಎಸ್ ಪೈಯಾಡೆ, ಮನೋಹರ್ ಎನ್ ಶೆಟ್ಟಿ , ವಿಜಯ ಆರ್ ಬಂಡಾರಿ, ರವೀಂದ್ರ ಎಸ್ ಶೆಟ್ಟಿ, ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ , ಎರ್ಮಳ್ ಹರೀಶ್ ಶೆಟ್ಟಿ ಹಾಗೂ ಎಲ್ಲಾ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ,
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು, 9867231122,8369125101,9004699100,9004614123,9324633805,
ಬಂಟರ ಸಂಘದ ಅದ್ದೂರಿಯ ಕ್ರೀಡಾ ಉತ್ಸವ ಮಾ17 ರಂದು ನಡೆಯಲಿರುವ ಬಂಟ್ಸ್ ಕ್ರೀಡೋತ್ಸವಕ್ಕಾಗಿ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಸದಸ್ಯರಿಗೆ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದ ಮೈದಾನದಲ್ಲಿ ಪ್ರತಿ ದಿನ ಕ್ರೀಡಾತರಬೇತಿಯನ್ನು ನೀಡಲಾಗುವುದು. ಆಸಕ್ತಿಯುಳ್ಳ ಬಂಟ ಕ್ರೀಡಾಳುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಧೀರಜ್ ಡಿ ರೈ, ಮೊ. 9920820223
——
ಅರ್ಜಿ ಹಿಂದೆ ಪಡೆಯುವುದು ಮಾರ್ಚ್ 30ರಂದು,
ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳ ಅರ್ಜಿಗಳನ್ನು ಸರಿಯಾಗಿ ಭರ್ತಿ ಮಾಡಿದ ಫಾರ್ಮ್‌ಗಳ
ಹೋಟೆಲ್ ಸುಸ್ವಾಗತ್
ದತ್ತ ಪಾಡ್ ರಸ್ತೆ
ಬೋರಿವಲಿ ಪೂರ್ವ ಇಲ್ಲಿ ಮಾ30 ರಂದುಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ನಡೆಯಲಿದೆ ಸ್ವೀಕರಿಸಲಾಗುವುದು