September 6, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಮೇ 18ರಂದು ಸಾಮೂಹಿಕ ಅಶ್ಲೇಷ ಬಲಿ ಪೂಜೆ





ಶ್ರೀ ಅಯ್ಯಪ್ಪ ಸೇವಾ ಸಮಿತಿ, ಕಿಶನ್ ನಗರ, ಥಾಣೆ, ನಮ್ಮೇಲ್ಲರ ನೆಚ್ಚಿನ ಧಾರ್ಮಿಕ ಸಂಸ್ಥೆಯಾಗಿದ್ದು 2000 ನೇ ಇಸವಿಯಲ್ಲಿ ಸ್ಥಾಪನೆಯಾಗಿ ಈ ವರ್ಷ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕೆಲವು ಬೆರಳೆಣಿಕೆಯಷ್ಟು ಸಮಾನ ಮನಸ್ಕರಿಂದ ಸ್ಥಾಪನೆಯಾಗಿ ಕಳೆದ 24 ವರ್ಷಗಳಲ್ಲಿ ಅಯ್ಯಪ್ಪ ಸ್ವಾಮಿಯ ತತ್ವಗಳನ್ನು ಅನುಕರಿಸುವ ಮೂಲಕ ಹಂತ ಹಂತ ವಾಗಿ ಬೆಳೆದು ಇಂದು 10 ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಹೊಂದಿರುವ ಸಂಸ್ಥೆಯಾಗಿದೆ ಎನ್ನಲು ಅತೀವ ಸಂತೋಷವಾಗುತ್ತಿದೆ.

ಸಮಿತಿಯು ಸ್ವತಃ ಮಾಲಕತ್ವದ ಚಿಕ್ಕ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸ್ಥಳದ ಕೊರತೆಯನ್ನು ನೀಗಿಸಲು ಕಳೆದ 18 ವರ್ಷಗಳಿಂದ ಸತತ ಪ್ರಯತ್ನ ಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಮ್ಮೂರಿನ ಪ್ರಸಿದ್ಧ
ಪೊದುವಾಲರನ್ನು ಇಲ್ಲಿಗೆ ಬರಮಾಡಿಸಿ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ವಿಚಾರವೆಂದರೆ ಮೊತ್ತ ಮೊದಲು ನಾಗದೇವರ ಪೂಜೆ ಮಾಡಿಸುವೋದು. ನಾಗದೇವರ ಪೂಜೆ ಮಾಡಿಸುವುದರಿಂದ ಶಿಬಿರದ ಜೀರ್ಣೋದ್ದಾರ ಅಲ್ಲದೆ ಈ ಸತ್ಕಾರ್ಯಗಳಿಗೆ ತನು, ಮನ, ಧನ ದಿಂದ ಸಹಕರಿಸುವ ಪ್ರತಿಯೊಬ್ಬ ಭಕ್ತಾದಿಗಳಿಗೂ ಸಂತೃಪ್ತಿ, ಸಂಪತ್ತು ಮತ್ತು ಸಂತಾನ ಭಾಗ್ಯ ಲಭಿಸುವೋದು.

ಆಸ್ತಿಕರಾದ ತಾವೆಲ್ಲರೂ ಮೇ ತಿಂಗಳ 18 ನೇ ತಾರೀಕಿನಂದು
ಮೊಡೆಲ್ಲ ವುಲೆನ್ ಮಿಲ್ ಕಂಪೌಂಡ್, ಟೋಲ್ ನಕಾದ ಹತ್ತಿರ,ಯಲ್. ಬಿ.ಯಸ್ ಮಾರ್ಗ್,ಥಾಣೆ (ವೆಸ್ಟ್) ಇಲ್ಲಿ ಆಯೋಗಿಸಲ್ಪಡುವ ಆಶ್ಲೇಷ ಬಲಿ ಪೂಜೆಯಲ್ಲಿ ಭಾಗವಹಿಸಿ ಧನ್ಯರಾಗುವೂದಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಿ ನಾಗದೇವರ ಕೃಪೆಗೆ ಪಾತ್ರರಾಗ ಬೇಕಾಗಿ ನಮ್ರತಾ ಪೂರ್ವಕ ವಿನಂತಿ.
ಪೂಜಾ ಕಾರ್ಯಕ್ರಮ :
ಬೆಳಿಗ್ಗೆ 8.30ರಿಂದ 11.30 – ಆಶ್ಲೇಷ ಬಲಿ ಪೂಜೆ
11.30ಯಿಂದ 1ಗಂಟೆ- ಭಜನೆ
ಮದ್ಯಾಹ್ನ 1 ಗಂಟೆ ಬಳಿಕ – ತೀರ್ಥ ಪ್ರಸಾದ, ಮಹಾ ಪ್ರಸಾದ ವಿತರಣೆ.
ಪೂಜಾ ವಿವರ :
ಸಾಮೂಹಿಕ ಆಶ್ಲೇಷ ಬಲಿ ಪೂಜೆ – Rs. 1001/
ವಿಶೇಷ ಅಶ್ಲೇಷ ಬಲಿ ಪೂಜೆ – Rs. 5001/

ವಿ. ಸೂ: ಆಶ್ಲೇಷ ಬಲಿ ಪೂಜೆ /ವಿಶೇಷ ಆಶ್ಲೇಷ ಬಲಿ ಪೂಜೆ ಮಾಡಿಸುವವವರು ಕನಿಷ್ಠ 03 ದಿನದ (ಸಾತ್ವಿಕ ಆಹಾರ) ಉಪವಾಸದಲ್ಲಿ ಇರಬೇಕಾಗಿ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪರವಾಗಿ ಅಧ್ಯಕ್ಷರು, ಆಡಳಿತ ಮಂಡಳಿ, ಸರ್ವ ಸದಸ್ಯರು, ಮಹಿಳಾ ವಿಭಾಗ
ಯುವ ವಿಭಾಗ, ಭಕ್ತ ಮಂಡಳಿ ವಿನಂತಿಸಿದ್ದಾರೆ.



Related posts

ಎ. 14ರಂದು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ ಇಲ್ಲಿ ಶ್ರೀ ಶನಿ ಗ್ರಂಥ ಪಾರಾಯಣ, ಶ್ರೀ ಸತ್ಯನಾರಾಯಣ ಮಹಾಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು.

Mumbai News Desk

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ೧೫ನೆಯ ವಾರ್ಷಿಕ ಸಮಾವೇಶ, “ಹೊರನಾಡಿನಲ್ಲಿ ತುಳುವರು” ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ನೃತ್ಯ ವೈಭವ ಹಾಗೂ ನಾಟಕ ಪ್ರದರ್ಶನ

Mumbai News Desk

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ

Mumbai News Desk

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠ : ಡಿ. 23ಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ವರ್ಷದ ಸಮಾರಾಧನೆ

Mumbai News Desk