32 C
Mumbai
March 7, 2026
Mumbai News Kannada
ಸುದ್ದಿ

ಅಯೋಧ್ಯೆಯಲ್ಲಿ ರಾಮಲಲ್ಲನ ಮೂರ್ತಿ ಪ್ರತಿಷ್ಠಾಪಿಸಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಮುಂಬೈ ಜನತೆಯ ಭವ್ಯ ಸ್ವಾಗತ,






ಯಾರು ದೇಶ ಭಕ್ತನಲ್ಲವೊ ಅವನು ರಾಮ ಭಕ್ತನಾಗಲು ಸಾಧ್ಯವಿಲ್ಲ : ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

ಚಿತ್ರ ವರದಿ ದಿನೇಶ್ ಕುಲಾಲ್

ಮುಂಬಯಿ, ಮಾ.12, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ಆಗಿದೆ, ಅವನನ್ನೊಮ್ಮೆ ನೋಡಿ ಬರಬೇಕು ಎನ್ನುವ ಭಕ್ತರು ಅವನನ್ನು ನೋಡಿ ಬಂದರೆ ಸಾಲದು ರಾಮನು ನಮ್ಮನ್ನು ನೋಡಬೇಕು, ಅದಕ್ಕಾಗಿ ನಾವು ಒಳ್ಳೆಯ ಕೆಲಸವನ್ನು ಮಾಡಬೇಕು, ಶ್ರೀ ರಾಮಚಂದ್ರ ದೇಶಭಕ್ತಿಯ ಪಾಠ ಮಾಡಿದ್ದಾನೆ ಅವನು ನಮಗೆ ಆದರ್ಶ, ಯಾರು ದೇಶ ಭಕ್ತನಲ್ಲವೊ ಅವನು ರಾಮ ಭಕ್ತನಾಗಲು ಸಾಧ್ಯವಿಲ್ಲ, ದೇಶಭಕ್ತನಾದವನು ರಾಮಭಕ್ತನಾಗುತ್ತಾನೆ, ರಾಮಭಕ್ತಿ ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ, , ಶ್ರೀ ರಾಮನ ಸೇವೆ ಮಾಡಬೇಕೆನ್ನುವವನು ದೇಶ ಸೇವೆ ಮಾಡಬೇಕು,ಏಕೆಂದರೆ ನಮ್ಮ ಪರಿಸರದ ಬಡ ಕಡು ಬಡತನದ ಕುಟುಂಬಗಳಿಗೆ ಸಹಕಾರ ನೀಡಿದರೆ ಅದು ರಾಮದೇವರ ಸೇವೆಯಾಗುತ್ತದೆ, ನಮ್ಮ ಸೇವೆಗಳನ್ನು ಅಯೋಧ್ಯೆಯಲ್ಲಿ ನೆಲೆ ನಿಂತ ರಾಮನಿಗೆ ಹೋಗಿ ಹೇಳೋಣ ಅದೇ ರಾಮನ ಪುಣ್ಯ ದರ್ಶನ ಪಡೆದ ಭಾಗ್ಯವಾಗುತ್ತದೆ,
ರಾಮಸೇವೆ ಮಾಡುವಾಗ ಆಪತ್ತುಗಳು ಬಂದಾಗ ರಾಮದೇವರು ಅದನ್ನೆಲ್ಲವನ್ನು ದೂರ ಮಾಡುತ್ತಾನೆ, ಎಂದು ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಮಠಾಧೀಶರಾಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಶೀರ್ವಾದದ ಮಾತನ್ನು ನುಡಿದರು,

ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ರಾಮಲಲ್ಲಾನ ನೂತನ ಶ್ರೀರಾಮಮಂದಿರದಲ್ಲಿ ಜ.22 ರಂದು ಪ್ರಧಾನಿ ಮೋದಿಯವರು ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೆರವೇರಿಸಿ. ಅನಂತರ ಸರಯೂ ನದಿಯ ಸಹಿತ ದೇಶದ ಪವಿತ್ರ ನದಿಗಳ 1008 ಕಲಶಗಳ ಬ್ರಹ್ಮಕಲಶಾಭಿಷೇಕ- ಬ್ರಹ್ಮಕಲಶೋತ್ಸವ ಹಾಗೂ ಜ. 23 ರಿಂದ 48 ದಿನಗಳ ಮಂಡಲೋತ್ಸವ – ಮಂಡಲ ಪೂಜೆಯ ನೇತೃತ್ವವನ್ನು ಯಶಸ್ವಿಯಾಗಿ ನೆರವೇರಿಸಿ ಮಂಗಳವಾರ, ಮಾರ್ಚ್ 12ರಂದು ಅಯೋಧ್ಯೆ ಯಿಂದ ಮುಂಬಯಿ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಮುಂಬೈಯ ಭಕ್ತ ಜನಸಾಗರ ಅವರನ್ನು ಭಕ್ತಿಯಿಂದ ಸ್ವಾಗತಿಸಿ. ಜೈ ಶ್ರೀ ರಾಮ್ ಎನ್ನುವ ಮಂತ್ರಘೋಷಗಳೊಂದಿಗೆ ಬರಮಾಡಿಕೊಂಡರು.

ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ವಿದ್ವಾನ್ ಡಾ ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಮೀಜಿಯವರೊಂದಿಗೆ ಅಯೋಧ್ಯೆಯಲ್ಲಿದ್ದು ಸ್ವಾಮೀಜಿಯವರು ನೆರವೇರಿಸಿದ ವಿವಿಧ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ನಡೆದ ಸೇವಾಕಾರ್ಯಗಳು,ಸ್ವಾಮೀಜಿಯವರು ನಡೆಸಿದ ಧಾರ್ಮಿಕ ವೈದಿಕ ಕಾರ್ಯಗಳನ್ನು ವಿಸ್ತಾರವಾಗಿ ತಿಳಿಸುತ್ತಾ, ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಶ್ರೀರಾಮನ ಪ್ರತಿಷ್ಠೆಯ ಮೂಲಕ ದೇಶದಲ್ಲಿ ಹಿಂದೂ ಧರ್ಮ ಜಾಗೃತವಾಗಿದೆ, ನಮ್ಮ ಜಿಲ್ಲೆಗೆ ಕೀರ್ತಿಯನ್ನು ತರುವ ಸೇವೆಯನ್ನು ಸ್ವಾಮೀಜಿಯವರು ಆ ಪವಿತ್ರ ಮಣ್ಣಿನಲ್ಲಿ ಮಾಡುವ ಮೂಲಕ ನಮ್ಮೆಲ್ಲರನ್ನು ಭಕ್ತಿ ಪರವಶರಂತೆ ಮಾಡಿದೆ, ಇಂದು ಸ್ವಾಮೀಜಿಯವರ ಪೀಠವರೋಹಣದ ವರ್ಧಂತಿ ಉತ್ಸವ ಮಾಡುವ ಸೌಭಾಗ್ಯ ನಮಗೆಲ್ಲರಿಗೂ ಬಂದಿದೆ
ಎಂದು ನುಡಿದರು,
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಅದ್ಯಪಾಡಿ ಹರಿದಾಸ ಭಟ್ಟರು ಪ್ರಾಸ್ತಾವಿಕ ಮಾತುಗಳನಾಡಿದರು,
ಸ್ವಾಮೀಜಿಯವರನ್ನು ಮುಂಬೈಯ ವಿಮಾನ ನಿಲ್ದಾಣದಿಂದ ಪೇಜಾವರ ಮಠಕ್ಕೆ ಜೈ ಶ್ರೀ ರಾಮ್ ರಾಮನ ಮಂತ್ರಘೋಷದೊಂದಿಗೆ ಮಠಕ್ಕೆ ಕರೆತರಲಾಯಿತು, ಮಠದಲ್ಲಿ ವಿಶೇಷವಾದ ಗೌರವವನ್ನು ಸಲ್ಲಿಸಲಾಯಿತು, ಮಠದ ಪ್ರಧಾನ ದೇವರಿಗೆ ಮಹಾಮಂಗಳಾರತಿ ನಡೆಯಿತು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ. ಎಸ್. ರಾವ್, ಕಾರ್ಯದರ್ಶಿ ಗುರುಮೂರ್ತಿ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ,
ಧಾರ್ಮಿಕ ಮುಂದಾಳು ಡಾ. ಸೀತಾರಾಮ್ ಆಳ್ವ, .ಪೇಜಾವರ ಮಠದ ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ , ಸಮಾಜ ಸೇವಕರಾದ ಶೇಖರ್ ಸಾಲ್ಯಾನ್,, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು
ಸೇರಿದಂತೆ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀಗಳಿಂದ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು,
ಸ್ವಾಮೀಜಿಯವರ ಆಗಮನದ ಸಂದರ್ಭದಲ್ಲಿ ಮದ್ದೇಶ ಭಜನ ಮಂಡಳಿಯ ಸದಸ್ಯರಿಂದ ಭಜನೆ, ಜೆರಿಮರಿ ದಿನೇಶ್ ಕೋಟ್ಯಾನ್ ಬಳಗದವರಿಂದ ಚೆಂಡೆ ಮದ್ದಳೆ ಸೆಕ್ಸೋಫೋನ್ ವಾದನದೊಂದಿಗೆ ಮಠಕ್ಕೆ ಸ್ವಾಗತಿಸಲಾಯಿತು,

—————

ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಚಾರಿತ್ರಿಕ ಉತ್ಸವ
ಅಯೋಧ್ಯೆಯಲ್ಲಿ ಜನವರಿ 22 ರಂದು ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಯಜಮಾನಿಕೆಯಲ್ಲಿ ನೂತನ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾನೆಯು ವಿಧ್ಯಕ್ತವಾಗಿ ನೆರವೇರಿತ್ತು . ಮರುದಿನದಿಂದ ಶ್ರೀ ಪೇಜಾವರ ಶ್ರೀಗಳ ದಿವ್ಯ ನೇತೃತ್ವದಲ್ಲಿ 48 ದಿನಗಳ ಮಂಡಲೋತ್ಸವ ಆರಂಭವಾಗಿತ್ತು,ಅದರ ಕೊನೆಯ ದಿನವಾಗಿದ್ದು ಶ್ರೀರಾಮನಿಗೆ ವೈಭವದಿಂದ 1008 ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವ ನೂರಾರು ಋತ್ವಿವರ್ಯರ ಉಪಸ್ಥಿತಿಯಲ್ಲಿ ತತ್ವ ಹೋಮ ಸಹಿತ ವಿವಿಧ ಹೋಮ ಹವನಾದಿಗಳು , ಕಲಶ ಸ್ಥಾಪನಾ ಪೂರ್ವಕ ಕಲಶ ಪೂಜೆ, ವಿಧಿ ವಿಧಾನಗಳು ನಡೆದವು,
ಮಂದಿರದಲ್ಲಿ ಇವತ್ತೂ ಅಸಂಖ್ಯ ಭಕ್ತರು ಸಾಲು ಸಾಲಾಗಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ .
ಪವಿತ್ರ ಕಲಶಾಭಿಷೇಕಕ್ಕೆ ಶ್ರೀಗಳು ಸರಯೂ ಮಾತ್ರವಲ್ಲದೇ ಗಂಗಾ,ಅಲಕನಂದಾ ಸಹಿತ ಅನೇಕ ನದಿಗಳ ಪವಿತ್ರ ಜಲವನ್ನು ತರಿಸಿ ಬಳಸಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಸಂಭ್ರಮ ಸಡಗರ ಮನೆಮಾಡಿದೆ.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಉಡುಪಿಯಲ್ಲಿ ಜರಗಿದ ಯಶಸ್ವಿ ಸರಣಿ ಕಾರ್ಯಕ್ರಮಗಳು

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಸಂಪನ್ನ.

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Mumbai News Desk

ಮುಂಬೈ ಮೇಯರ್ ಪಟ್ಟ ಅಲಂಕರಿಸಿದ್ದ ಮೊದಲ ಬಿಜೆಪಿ ನಾಯಕ ಕನ್ನಡಿಗ ಡಾ. ಪ್ರಭಾಕರ್ ಪೈ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

Mumbai News Desk

ಮುಂಬೈ: ದಿಶಾ ಸಾಲ್ಯಾನ್ ಸಾವು ಪ್ರಕರಣ- ಆದಿತ್ಯ ಠಾಕ್ರೆ, ಬಾಲಿವುಡ್ ನಟರು, ಮಾಜಿ ಪೊಲೀಸ್ ಅಧಿಕಾರಿ ವಿರುದ್ಧ ಹೊಸ ದೂರು

Mumbai News Desk