
ಮುಂಬಯಿ ಮಹಾನಗರದ ಹಿರಿಯ ಜಾತಿಯ ಸಂಘಗಳಲ್ಲಿ ಒಂದಾದ ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 10 ರ ಭಾನುವಾರ ಕಾಂಜೂರ್ ಮಾರ್ಗ ಪಶ್ಚಿಮದ ಮೆಜೆಸ್ಟಿಕ್ ಸಭಾಗ್ರಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಮಹಿಳೆಯರ ಮಹಿಳೆರಿಂದ ಮಹಿಳೆಯರಿಗೋಸ್ಕರ ಮಹಿಳಾ ವಿಭಾಗದ ಅಧ್ಯಕ್ಷೆ ವನಿತಾ ಸಾಲ್ಯಾನ್ ರವರ ಅದ್ಯಕ್ಷತೆಯಲ್ಲಿ ಜರುಗಿತು.








ಮೊದಲಿಗೆ ಅತಿಥಿಗಳು ಹಾಗೂ ಸಂಘದ ಪದಾಧಿಕಾರಿಗಳು
ಪ್ರಾರ್ಥನೆಯೊಂದಿಗೆ ದೇವರಿಗೆ ದೀಪಾ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗತ ವರ್ಷದಲ್ಲಿ ದೈವಾದೀನ ರಾದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.




ನಂತರ, ಡೊಂಬಿವಲಿ, ಸೆಂಟ್ರಲ್, ವೆಸ್ಟರ್ನ್, ನವಿ ಮುಂಬಯಿ, ವಸಯ್ ವಲಯಗಳ ಸದಸ್ಯರು ವೈವಿಧ್ಯಮಯ ಮನೋರಂಜನ ಕಾರ್ಯಕ್ರಮ ನೀಡಿದರು.
ನಂತರ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆಯರಾದ ಸುಮಿತ್ರಾ ಗುಜರನ್ ಹಾಗೂ ಸರೋಜಿನಿ ಕುಂದರ್, ಮಹಿಳಾ ದಿನಾಚರಣೆ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯೆಯರಾದ ಪುಷ್ಪ ಆರ್ ಬಂಗೇರ ಹಾಗೂ ಗಿರಿಜಾ ಎಸ್ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.

ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಕ್ರೋಲಿ ವಿಕೇಸ್ ಹೈಸ್ಕೂಲ್ ನ ಮುಖ್ಯ ಅಧ್ಯಪಿಕೆ ಪುಷ್ಪಲತಾ ರೈ ಮಾತನಾಡುತ್ತ ಸಂಘದ ಮಹಿಳಾ ವಿಭಾಗದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ರಜಕ ಸಂಘ ಮುಂಬಯಿಯ ಕಾರ್ಯದರ್ಶಿ ಸುಮಿತ್ರಾ ಫಲಿಮಾರು ಮಾತನಾಡುತ್ತ ಸಂಘದ ಕಾರ್ಯಗಳಿಗೆ ಎಲ್ಲರ ಬೆಂಬಲ ಅಗತ್ಯ ಎಂದರು.












ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಶೇಷ ಆಹ್ವಾನಿತರನ್ನು ಗೌರವಿಸಲಾಯಿತು.
ನಂತರ ಮಹಿಳಾ ವಿಭಾಗದ ಅಧ್ಯಕ್ಷೆ ವನಿತಾ ಎಸ್ ಸಾಲ್ಯಾನ್ ಅಧ್ಯಕ್ಷೀಯ ಭಾಷಣಗೈಯುತ್ತ ಸಹಕರಿಸಿದ ಎಲ್ಲರ ಅಭಾರ ಮನ್ನಿಸಿದರು.




ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾ ಎನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರೆ, ಉಪಾಧ್ಯಕ್ಷೆ ನಯನ ಕುಂದರ್ ಸಹಕರಿಸಿದರು.
ನಂತರ ಮನೋರಂಜನ ಕಾರ್ಯಕ್ರಮ ಮುಂದುವರಿಯಿತು.
ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಪ್ರತಿ ವರ್ಷ ವಿಶ್ವ ಮಹಿಳಾ ದಿನಾಚರಣೆಯ ನಂತರದ ಭಾನುವಾರ ಎಲ್ಲಾ ವಲಯಗಳ ಸದಸ್ಯೆಯರನ್ನು ಒಟ್ಟು ಸೇರಿಸಿ ಮಹಿಳೆಯರ, ಮಹಿಳೆಯರಿಂದ, ಮಹಿಳೆಯಗೋಸ್ಕರ ಕಾರ್ಯಕ್ರಮವನ್ನು ವೈವಿಧ್ಯಮಯ ವಾಗಿ ನಡೆಸುತ್ತಿದ್ದು ಈ ವರ್ಷವೂ ಎಲ್ಲಾ ವಿಭಾಗದ ಸರ್ವ ಸದಸ್ಯರ ಸಹಕಾರ ದೊಂದಿಗೆ ಯಶಸ್ವಿಯಾಗಿ ಆಚರಿಸಿದರು.